ಧಾರವಾಡದಲ್ಲಿ ದಸರಾ ಸಂಭ್ರಮ: ಖರೀದಿ ಜೋರು, ಹೂವಿಗೆ ಹೆಚ್ಚು ಬೇಡಿಕೆ

ಧಾರವಾಡದಲ್ಲಿ ದಸರಾ ಸಂಭ್ರಮ: ಖರೀದಿ ಜೋರು, ಹೂವಿಗೆ ಹೆಚ್ಚು ಬೇಡಿಕೆ

ಧಾರವಾಡದಲ್ಲಿ ದಸರಾ ಸಂಭ್ರಮ: ಖರೀದಿ ಜೋರು, ಹೂವಿಗೆ ಹೆಚ್ಚು ಬೇಡಿಕೆ

ಧಾರವಾಡ: ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದರೂ, ಈ ಬಾರಿಯ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ.

ಆಯುಧ ಪೂಜೆ ಹಾಗೂ ವಿಜಯದಶಮಿ ಆಚರಣೆಗೆ ಸೋಮವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿ, ಹೂವು ಮತ್ತು ಹಣ್ಣುಗಳ ಖರೀದಿ ಜೋರಾಗಿತ್ತು.

ಕೆಲ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಸುಭಾಷ ರಸ್ತೆ, ಟಿಕಾರೆ ರಸ್ತೆ, ಅಕ್ಕಿಪೇಟೆ, ರೈಲು ನಿಲ್ದಾಣ ರಸ್ತೆ, ಸಪ್ತಾಪುರ ಬಾವಿ, ಶ್ರೀನಗರ, ಸೂಪರ್ ಮಾರ್ಕೆಟ್‍ನಲ್ಲಿ ಜನರು ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತು.

ನಗರದ ವಿವಿಧೆಡೆ ಹೂವು-ಹಣ್ಣು ಮಾರಾಟಕ್ಕಾಗಿ ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸಲಾಗಿತ್ತು. ದಸರಾ ಅಂಗವಾಗಿ ಕೆಲವು ಮೊಬೈಲ್ ಹಾಗೂ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರಿಗೆ ವಿಜಯದಶಮಿಯ ವಿಶೇಷ ರಿಯಾಯಿತಿ ನೀಡಲಾಗಿತ್ತು. ಇದರಿಂದ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.

ಬೂದುಗುಂಬಳಕಾಯಿಗೆ ಭಾರಿ ಬೇಡಿಕೆ: ಆಯುಧ ಪೂಜೆ ನಿಮಿತ್ತ ವಾಹನಗಳು ಹಾಗೂ ಅಂಗಡಿ– ಮಳಿಗೆಗಳಿಗೆ ದೃಷ್ಟಿ ತೆಗೆಯಲು ಬೂದುಗುಂಬಳಕಾಯಿ ಬಳಸುವುದು ವಾಡಿಕೆಯಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಬೂದುಗುಂಬಳಕಾಯಿಗೆ ಭಾರಿ ಬೇಡಿಕೆ ಬಂದಿದ್ದು, ಖರೀದಿ ಜೋರಾಗಿತ್ತು. ಮಾರುಕಟ್ಟೆಯಲ್ಲಿ ಒಂದು ಬೂದುಗುಂಬಳಕಾಯಿ ಗಾತ್ರಕ್ಕೆ ತಕ್ಕಂತೆ ₹80 ರಿಂದ ₹150ರವರೆಗೆ ಮಾರಾಟವಾಗುತ್ತಿತ್ತು. ಐದು ಕಬ್ಬಿಗೆ ₹80 ಹಾಗೂ ತಳಿರು ತೋರಣ, ಬನ್ನಿ ಕಟ್ಟಿಗೆಗೆ ₹20ರಂತೆ ಮಾರಾಟ ಮಾಡಲಾಗುತ್ತಿತ್ತು.

‘ಮಳೆ ಕೊರತೆಯಿಂದ ಸ್ಥಳೀಯವಾಗಿ ಹೂವಿನ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಬೆಂಗಳೂರು, ಚಿಕ್ಕಬಳ್ಳಾಪುರದಿಂದ ಹೂವು ತರಿಸಲಾಗುತ್ತಿದ್ದು, ಆದ್ದರಿಂದ ದರ ಹೆಚ್ಚಾಗಿದೆ. ಅದರಲ್ಲೂ ದಸರಾ ಹಬ್ಬದಲ್ಲಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆಯುಧ ಪೂಜೆಯ ದಿನ ವಾಹನಗಳು, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುತ್ತದೆ’ ಎಂದು ಹೂವಿನ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ