ಸೂರ್ಯವಂಶಿಗೆ ಈಗಲೇ ಆಡುವ ಬಳಗದಲ್ಲಿ ಸ್ಥಾನವಿಲ್ಲ: ಕಾರಣ ತಿಳಿಸಿದ ನಾಯಕ ಅಯ್ಯರ್

ಸೂರ್ಯವಂಶಿಗೆ ಈಗಲೇ ಆಡುವ ಬಳಗದಲ್ಲಿ ಸ್ಥಾನವಿಲ್ಲ: ಕಾರಣ ತಿಳಿಸಿದ ನಾಯಕ ಅಯ್ಯರ್

ಸೂರ್ಯವಂಶಿಗೆ ಈಗಲೇ ಆಡುವ ಬಳಗದಲ್ಲಿ ಸ್ಥಾನವಿಲ್ಲ: ಕಾರಣ ತಿಳಿಸಿದ ನಾಯಕ ಅಯ್ಯರ್

ಕ್ರೈಸ್ಟ್‌ಚರ್ಚ್: ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಸದ್ಯ ಭಾರತ ತಂಡದ ಆಡುವ XIರ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ. ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಸ್ಥಿರ ಪ್ರದರ್ಶನ ನೀಡುತ್ತಿರುವುದೇ ಇದಕ್ಕೆ ಕಾರಣ ಎಂದು ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಕ್ಕಾಗಿ ಈ ವರ್ಷದ ಆರಂಭದಲ್ಲಿ ಭಾರತ ತಂಡಕ್ಕೆ ಆಯ್ಕೆಯಾದ ವೈಭವ್ ಸೂರ್ಯವಂಶಿ, 21 ಟಿ20 ಪಂದ್ಯಗಳ ಪೈಕಿ ಎಂಟು ಪಂದ್ಯಗಳಲ್ಲಿ ಮಾತ್ರ ಆಡುವ XIರಲ್ಲಿ ಅವಕಾಶ ಪಡೆದಿದ್ದಾರೆ. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಯುವ ಆಟಗಾರನಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ.

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಮಾತನಾಡಿದ ಶ್ರೇಯಸ್ ಅಯ್ಯರ್ ಅವರು ವೈಭವ್‌ ಇನ್ನೂ ಚಿಕ್ಕವರು, ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ ಎಂದಿದ್ದಾರೆ.

‘ವೈಭವ್‌ನಂತಹ ಪ್ರತಿಭಾವಂತ ಆಟಗಾರ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಂತೋಷದಿಂದ ಇರಬೇಕು. ಆತ ಯುವ ಆಟಗಾರ. ಮುಂದಿನ ದಿನಗಳಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಸದ್ಯ ಆರಂಭಿಕ ಆಟಗಾರರು ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ. ಅವರು ವಿಶ್ವಕಪ್ ಗೆಲ್ಲಲು ನೆರವಾಗಿದ್ದಾರೆ. ಹೀಗಾಗಿ ವೈಭವ್ ಈಗಲೇ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ’ ಎಂದು ಅಯ್ಯರ್ ತಿಳಿಸಿದರು.

ಏಷ್ಯನ್ ಗೇಮ್ಸ್‌ನಲ್ಲಿ ವೈಭವ್‌ಗೆ ಆರಂಭಿಕನಾಗಿ ಆಡಲು ಅವಕಾಶ ಕಲ್ಪಿಸುವ ಸಲುವಾಗಿ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.

‘ವಿದೇಶಿ ಪಿಚ್‌ಗಳಲ್ಲಿ ಆಡುವ ಅನುಭವ ವೈಭವ್‌ಗೆ ಮುಂದಿನ ದಿನಗಳಲ್ಲಿ ನೆರವಾಗಲಿದೆ ಎಂದು ಅಯ್ಯರ್ ಅಭಿಪ್ರಾಯಪಟ್ಟರು. ನ್ಯೂಜಿಲೆಂಡ್‌ನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುವುದರಿಂದ ಇಲ್ಲಿನ ಪಿಚ್‌ಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದರ ಬಗ್ಗೆ ಯುವ ಆಟಗಾರನಿಗೆ ತಿಳಿಯಲಿದೆ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿಗಳಲ್ಲಿ ಆಡುವಾಗ ಈ ಅನುಭವ ಉಪಯೋಗಕ್ಕೆ ಬರಲಿದೆ’ ಎಂದಿದ್ದಾರೆ.

ಅಫ್ಗಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಗಳಲ್ಲಿ ಆಡಿದ ಬಳಿಕ, ಏಷ್ಯನ್ ಗೇಮ್ಸ್‌ನಲ್ಲೂ ಭಾಗವಹಿಸಿರುವ ಭಾರತ ತಂಡ ಇದೀಗ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದೆ. ನಿರಂತರ ಪಂದ್ಯಗಳ ಒತ್ತಡದ ನಡುವೆಯೂ ತಂಡ ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಿದ್ಧವಾಗಿದೆ ಎಂದು ಅಯ್ಯರ್ ಹೇಳಿದರು.

‘ಹಿಂದೆಯೂ ಇಂತಹ ವೇಳಾಪಟ್ಟಿಯನ್ನು ಎದುರಿಸಿದ್ದೇವೆ. ಅಫ್ಗಾನಿನಿಸ್ತಾನ ಸರಣಿಯ ಬಳಿಕ ಐರ್ಲೆಂಡ್‌ಗೆ ತೆರಳಿ ಪಂದ್ಯಗಳನ್ನು ಆಡಿದ್ದೇವೆ. ನಿರಂತರ ಪ್ರಯಾಣ ಮತ್ತು ಪಂದ್ಯಗಳ ನಡುವೆ ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಸವಾಲಾದರೂ, ಅದರಲ್ಲಿ ಸಂತೋಷವಿದೆ. ಗೆಲುವಿಗಾಗಿ ಏನು ಯೋಜನೆ ರೂಪಿಸಬೇಕು ಎಂಬುದರತ್ತ ನಮ್ಮ ಗಮನ ಹರಿಸುತ್ತೇವೆ’ ಎಂದಿದ್ದಾರೆ.

‘ನ್ಯೂಜಿಲೆಂಡ್‌ ಪಿಚ್‌ಗಳು ಸಾಮಾನ್ಯವಾಗಿ ವೇಗದ ಬೌಲರ್‌ಗಳಿಗೆ ಹೆಚ್ಚು ಅನುಕೂಲಕರವಾಗಿರಲಿವೆ. ಆದರೆ ಪಿಚ್ ಹೇಗೆ ವರ್ತಿಸಲಿದೆ ಎಂಬುದನ್ನು ಮೊದಲೇ ಹೇಳಲು ಸಾಧ್ಯವಿಲ್ಲ. ಆದಷ್ಟು ಬೇಗ ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತೇವೆ’ ಎಂದಿದಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ