ಸಾಂಸ್ಕೃತಿಕ ಮೆರುಗಿನ ಓಣಾಘೋಷಂ: ಮಡಿಕೇರಿಯಲ್ಲಿ ಹಿಂದೂ ಮಲಯಾಳಿ ಸಂಘದ ಸಂಭ್ರಮ

ಸಾಂಸ್ಕೃತಿಕ ಮೆರುಗಿನ ಓಣಾಘೋಷಂ: ಮಡಿಕೇರಿಯಲ್ಲಿ ಹಿಂದೂ ಮಲಯಾಳಿ ಸಂಘದ ಸಂಭ್ರಮ

ಸಾಂಸ್ಕೃತಿಕ ಮೆರುಗಿನ ಓಣಾಘೋಷಂ: ಮಡಿಕೇರಿಯಲ್ಲಿ ಹಿಂದೂ ಮಲಯಾಳಿ ಸಂಘದ ಸಂಭ್ರಮ

ಮಡಿಕೇರಿ: ‘ಕಸವು ರಸವಾಗಿ ಬಾಳು ನಂದನವಾಗಿ, ಸೋದರತೆ ಹೊಳೆಯಾಗಿ ಹರಿದು ಬರಲಿ...’ ಎಂಬ ಪದ್ಯವೊಂದರ ಸಾಲುಗಳನ್ನು ಮುಳ್ಳೂರಿನ ಬಸವಪಟ್ಟಣದ ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಹೇಳುತ್ತಾ ಮಾತಿಗೆ ಅಣಿಯಾಗುತ್ತಿದ್ದಂತೆ, ನೋಡುತ್ತಾ ಕುಳಿತಿದ್ದ ಸಾರ್ವಜನಿಕರು ಅವರ ಮಾತುಗಳಿಗೆ ಕಿವಿಯಾದರು.

ಹಿಂದೂ ಮಲಯಾಳಿ ಸಂಘದ ವತಿಯಿಂದ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ‘ಓಣಾಘೋಷಂ ಓಣಂ ಸಧ್ಯ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನೆಲ, ಜಲ, ಭಾಷೆ ಯಾವುದಾದರೂ ಕೂಡ ಎಲ್ಲರಲ್ಲೂ ನಾವು ಭಾರತೀಯರು ಎಂಬ ಭಾವನೆ ಮೂಡುವುದು ಮುಖ್ಯ. ನಾನೊಬ್ಬ ಭಾರತೀಯ, ನಾನೊಬ್ಬ ಹಿಂದೂ, ನಾವೆಲ್ಲ ಒಂದು ಎಂಬ ಭಾವನೆ ಬಂದು ಅಸ್ಪೃಶ್ಯತೆ ಹೋಗಬೇಕು’ ಎಂದು ಪ್ರತಿಪಾದಿಸಿದರು.

ಜಗತ್ತಿನ ಎಲ್ಲ ರಾಷ್ಟ್ರ ಸ್ವಾರ್ಥಪರವಾಗಿ ತನ್ನ ದೇಶ, ಧರ್ಮದ ಕುರಿತು ಮಾತ್ರ ಆಲೋಚನೆ ಮಾಡಿದರೆ ಭಾರತದ ಹಿಂದೂ ಧರ್ಮ ಜಗತ್ತಿನ ಎಲ್ಲರೂ ಸುಖವಾಗಿ ಬಾಳಬೇಕು ಎಂಬ ಮನೋಭಾವ ಹೊಂದಿದೆ. ವಿಮಾನದ ಪೈಲಟ್‌ ಸ್ಮಿತ್ ಮಚ್ಚರ್ ಅವರು ತನ್ನ ಜೀವದ ಹಂಗನ್ನು ತೊರೆದು ವಿಮಾನ ಪತನವಾಗುವುದನ್ನು ತಪ್ಪಿಸಿ ನೂರಾರು ಮಂದಿಯನ್ನು ರಕ್ಷಿಸಿದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಹಿಂದೂ ಧರ್ಮಿಯರು ಪ್ರಾಣದ ಹಂಗನ್ನು ತೊರೆದು ಜಗತ್ತಿನ ಇತರರನ್ನು ರಕ್ಷಿಸಬಲ್ಲರು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದರು.

‘ನನ್ನ ಪ್ರಾಣ ಹೋದರೂ ಪರವಾಗಿಲ್ಲ, ನನ್ನನ್ನು ನಂಬಿ‌ ಬಂದವರ ಪ್ರಾಣ ಕಾಪಾಡಬೇಕು ಎಂಬುದು ಹಿಂದೂ ಧರ್ಮದ ರಕ್ತದಲ್ಲೆ ಇದೆ‌. ಇದು ನಿಜವಾದ ಹಿಂದೂಧರ್ಮದ ಸಹಿಷ್ಣುತೆ’ ಎಂದು ಹೇಳಿದರು.

ನೂರೆಂಟು ಜಾತಿಗಳಿದ್ದರೂ ಎಲ್ಲ ಜಾತಿ ಸಮಾಜ‌ಗಳು ನದಿಗಳಂತೆ ಸೇರುವುದು ಹಿಂದೂ ಸಮಾಜ ಎಂಬ ಮಹಾ ಸಾಗರಕ್ಕೆ ಎಂಬುದನ್ನು ನಾವು ಮರೆಯಬಾರದು ಎಂದರು.

ಓಣಂ ಕೇವಲ ಹಬ್ಬ, ಆಚರಣೆ ಅಲ್ಲ‌. ಅದರಲ್ಲಿ ತತ್ವ ಇದೆ. ಬಲಿ ಚಕ್ರವರ್ತಿಯ ತ್ಯಾಗ ಇದೆ. ಕೊಟ್ಟ ಮಾತನ್ನು ಉಳಿಸಿ ಕೊಳ್ಳುವುದು ಮುಖ್ಯ. ಅದನ್ನು ಬಿಟ್ಟರೆ ಉಳಿದುದೆಲ್ಲವೂ ನಶ್ವರ ಎಂಬ ಆದರ್ಶವಿದೆ ಎಂದು ಹೇಳಿದರು.

ಹಾಗಾಗಿ, ಎಷ್ಟೇ ಆಸ್ತಿ, ಅಂತಸ್ತು ಇದ್ದರೂ ಗರ್ವ ಪಡಬಾರದು. ನಾನು, ನನ್ನದು ಎಂದು ಮೆರೆಯುವ ಮೋಹಕ್ಕೆ ಬಲಿಯಾಗಬಾರದು ಎಂದು ಹೇಳಿದರು.

ಓಣಂ ಅವನ್ನು ಕೇವಲ ಮಲಯಾಳಿಗಳು ಮಾತ್ರವೇ ಆಚರಣೆ ಮಾಡುವುದಿಲ್ಲ. ಶೃಂಗೇರಿಯಲ್ಲೂ ಈ ಆಚರಣೆ ಇದೆ. ಹಿಂದೂ ಧರ್ಮ ಪುನರುತ್ಥಾನ ಮಾಡಿದ ಶಂಕರಾಚಾರ್ಯರ ಪುಣ್ಯ ಭೂಮಿ ಕೇರಳ‌ಂ ಆಗಿದೆ ಎಂದು ತಿಳಿಸಿದರು.

‘ಇಲ್ಲಿ ಸೇರಿರುವ ಜನರ ವಿಳಾಸ ಕೇರಳಂನಿಂದ ಕರ್ನಾಟಕಕ್ಕೆ ಬದಲಾಗಿದೆ. ಆದರೆ, ಅವರ ಉಡುಪು ಅರ್ಥಾತ್ ಸಂಸ್ಕೃತಿ ಬದಲಾಗಿಲ್ಲ. ತಮ್ಮ ಸಂಸ್ಕೃತಿಯಿಂದ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಇದು ದೊಡ್ಡದು. ಈ ಪರಂಪರೆ, ಆಚರಣೆಯನ್ನು ನಮ್ಮ ಮುಂದಿನ ಪೀಳಿಗೆಗೂ ನೀಡಬೇಕು’ ಎಂದು ಹೇಳಿದರು.

ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಾಜಿ ಸೈನಿಕರನ್ನು, ಸಾಧಕರನ್ನು ಸನ್ಮಾನಿಸಲಾಯಿತು. ಜಸ್ಮಿತಾ ಅವರು ಹಾಡು, ಮಹಿಳೆಯರ ನೃತ್ಯ ಗಮನ ಸೆಳೆಯಿತು. ರಾತ್ರಿಯವರೆಗೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾಮಿಡಿ ಶೊಗಳು ಸೂಜಿಗಲ್ಲಿನಂತೆ ಸೆಳೆದವು.

ಕಾರ್ಯಕ್ರಮಕ್ಕೂ ಮುನ್ನ ಚೌಡೇಶ್ವರಿ ದೇಗುಲದಿಂದ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಶ್ವೇತವಸ್ತ್ರಧಾರಿಗಳಾಗಿ ಭಾಗಿಯಾದರು. ಚಂಡೆ, ಆನೆ ಸೇರಿದಂತೆ ವಿವಿದ ಬಗೆಯ ವೇಷಧಾರಿಗಳು ಗಮನ ಸೆಳೆದರು.

ಓಣಂ ಆಚರಣಾ ಸಮಿತಿ ಅಧ್ಯಕ್ಷ ಕೆ.ಕೆ.ಅನಿಲ್, ಹಿಂದೂ ಮಲಯಾಳಿ ಸಂಘದ ನಿರ್ದೇಶಕ ಸಿ.ಕೆ‌.ಪ್ರಭಾಕರ್, ಗುತ್ತಿಗೆದಾರ ದಿವಾಕರನ್, ಸಂಘದ ಉಪಾಧ್ಯಕ್ಷ ಟಿ.ಆರ್.ಪ್ರಮೋದ್, ಪ್ರಧಾನ ಕಾರ್ಯದರ್ಶಿ ಇ.ಬಿ.ದಿನೇಶ್ ಕುಮಾರ್, ಖಜಾಂಚಿ ಎಂ.ಎಸ್.ದಿನೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಕೆ.ಮೋಹನ್ ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ