
ಬಾಕ್ಸಿಂಗ್ ಚಾಂಪಿಯನ್‌ಶಿಪ್: ಉಡುಪಿ ಅವಿನಾಶ್ ಕುಮಾರ್ ಶೆಟ್ಟಿಗೆ ಕಂಚಿನ ಪದಕ
ಉಡುಪಿ: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಈಚೆಗೆ ನಡೆದ ಸೌತ್ ಇಂಡಿಯಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಉಡುಪಿ ಜಿಲ್ಲೆಯ ಪಾಂಗಾಳ ಮೂಡುಬೆಟ್ಟು ಗ್ರಾಮದ ಅವಿನಾಶ್ ಕುಮಾರ್ ವಿ. ಶೆಟ್ಟಿ ಅವರು 91+ ಕೆ.ಜಿ ಸೂಪರ್ ಹೆವಿವೈಟ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಅವರಿಗೆ ಸ್ಯಾಕ್ ತರಬೇತುದಾರ ಧನಸಂಜಯನ್ ತರಬೇತಿ ನೀಡಿದ್ದರು.
ಅವಿನಾಶ್ ಕುಮಾರ್ ಶೆಟ್ಟಿ ಅವರು ಕಟಪಾಡಿ ಮೂಡುಬೆಟ್ಟು ಗ್ರಾಮದ ನಿವೃತ್ತ ಎಸ್.ಪಿ ವಿಶ್ವನಾಥ ಶೆಟ್ಟಿ ಹಾಗೂ ಶಶಿಕಲಾ ಶೆಟ್ಟಿ ದಂಪತಿ ಪುತ್ರ.