ಹಾವೇರಿ: ಕೆರೆಯಲ್ಲಿ ಮುಳುಗಿ ಕುರಿಗಾಹಿ ಸಾವು
ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯ ದೊಡ್ಡಕೆರೆಯ ನೀರಿನಲ್ಲಿ ಮುಳುಗಿ ಕುರಿಗಾಹಿ ಸಂತೋಷ ಪರಸಪ್ಪ ಮತ್ತೂರು ಎಂಬುವವರು ಬುಧವಾರ ಮೃತಪಟ್ಟಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಸಂತೋಷ ಅವರು ಕುರಿಗಳಿಗೆ ನೀರು ಕುಡಿಸಲು ಹೋದಾಗ ಈ ಅವಘಡ ಸಂಭವಿಸಿದೆ.
‘ಸಂತೋಷ ಅವರು ಕುಟುಂಬದ ಜೊತೆ ಕುರಿ ಮೇಯಿಸುತ್ತ ಹಾವೇರಿ ಜಿಲ್ಲೆಗೆ ಬಂದಿದ್ದರು. ಕಾಗಿನೆಲೆ ಬಳಿ ಕುರಿ ಮೇಯಿಸುತ್ತಿದ್ದರು. ವಿಜಯದಶಮಿ ನಿಮಿತ್ತ ಬುಧವಾರ ಬೆಳಿಗ್ಗೆ ಕುರಿ ಹಿಂಡಿನಲ್ಲಿ ಪೂಜೆ ಮಾಡಿದ್ದರು. ನಂತರ, ಕುರಿಗಳಿಗೆ ನೀರು ಕುಡಿಸಲು ಕಾಗಿನೆಲೆಯ ದೊಡ್ಡ ಕೆರೆಗೆ ಹೋಗಿದ್ದರು’ ಎಂದು ಸ್ಥಳೀಯರು ಹೇಳಿದರು.
‘ದೊಡ್ಡ ಕೆರೆಯಲ್ಲಿ ಅವೈಜ್ಞಾನಿಕ ಕೆಲಸ ಮಾಡಲಾಗಿದೆ. ಇದೇ ಕಾರಣಕ್ಕೆ, ಸಂತೋಷ ಅವರು ಕಾಲು ಜಾರಿ ಕೆರೆಯೊಳಗೆ ಬಿದ್ದಿದ್ದರು. ನೀರು ಹೆಚ್ಚಿದ್ದರಿಂದ, ಈಜಲಾಗದೇ ಮುಳುಗಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
‘ಸಂತೋಷ ಅವರ ಮೃತದೇಹವನ್ನು ಕೆರೆಯಿಂದ ಹೊರಗೆ ತೆಗೆದು 3 ಗಂಟೆಯಾದರೂ ಆಂಬುಲೆನ್ಸ್ ಸ್ಥಳಕ್ಕೆ ಬರಲಿಲ್ಲ. ಇದರಿಂದಾಗಿ ಕುಟುಂಬಸ್ಥರು, ಸಂತೋಷ ಅವರ ಮೃತದೇಹವನ್ನು ಟಾಟಾ ಏಸ್‌ನಲ್ಲಿ ಆಸ್ಪತ್ರೆಗೆ ಕೊಂಡೊಯ್ದರು’ ಎಂದು