
ಗದಗ: ಅಕ್ರಮ ಗಣಿಗಾರಿಕೆ ತಡೆಗೆ ಒತ್ತಾಯಿಸಿ ಮನವಿ
ಗದಗ: ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಕೆ.ಆರ್. ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ರಾಜ್ಯ ಘಟಕದ ಉಪಾಧ್ಯಕ್ಷ ಹಾಲಪ್ಪ ವರವಿ ಮಾತನಾಡಿ, ‘ಜಿಲ್ಲೆಯ ವಿವಿಧೆಡೆ ಎಗ್ಗಿಲ್ಲದೆ ಮರಳು ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ವಹಿಸುತ್ತಿಲ್ಲ. ಇದು ಹೀಗೇ ಮುಂದುವರಿದರೆ ಜಿಲ್ಲೆಯ ಸಂಪನ್ಮೂಲಗಳು ಬರಿದಾಗುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸಣ್ಣಯಲ್ಲಪ್ಪ ರಾ. ಒಳಗೇರಿ, ವೆಂಕಟೇಶ ಶಾಂತಗಿರಿ, ವಿರೇಶ ಗಂ. ಹಿರೇಮಠ, ರೇಖಾ ಜಡಿ, ಕಳಕಪ್ಪ ಪೊಟೋ, ಮಂಜುನಾಥ ಬೆಳಧಡಿ, ನಿಂಗಪ್ಪ ರಘುಟಿ, ವಿರೂಪಾಕ್ಷಪ್ಪ ಅಳವಂಡಿ, ಉಮೇಶ ಕಲಮಶೆಟ್ಟಿ, ಮಂಜುನಾಥ ರಾಜೋಳ್ಳಿ, ಹೊನಲ್ಲಿಸಾ ಶಿಂಗ್ರಿ, ಬ್ರಹ್ಮಾನಂದ ಪತ್ತಾರ ಇದ್ದರು.