ಧರ್ಮ ಎಂದರೆ ದ್ವೇಷವಲ್ಲ, ಆಚರಣೆ: ವೀರಸೋಮೇಶ್ವರ ಸ್ವಾಮೀಜಿ

ಧರ್ಮ ಎಂದರೆ ದ್ವೇಷವಲ್ಲ, ಆಚರಣೆ: ವೀರಸೋಮೇಶ್ವರ ಸ್ವಾಮೀಜಿ

ಧರ್ಮ ಎಂದರೆ ದ್ವೇಷವಲ್ಲ, ಆಚರಣೆ: ವೀರಸೋಮೇಶ್ವರ ಸ್ವಾಮೀಜಿ

ರಂಭಾಪುರಿ ಪೀಠ(ಬಾಳೆಹೊನ್ನೂರು): ಭಾರತ ಋಷಿಮುನಿಗಳ ತಪೋಭೂಮಿ. ನಮ್ಮ ಸಂಸ್ಕೃತಿ ಪೂರ್ವಜರು ನಮಗೆ ನೀಡಿದ ಅಮೂಲ್ಯ ಆಸ್ತಿ. ಅದನ್ನು ಕಾಪಾಡುವುದು ನಮ್ಮ ಕರ್ತವ್ಯ. ಧರ್ಮ ಉಳಿದರೆ ಸಮಾಜದಲ್ಲಿ ಮೌಲ್ಯಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ರಂಭಾಪುರಿ ಪೀಠದಲ್ಲಿ ನಡೆದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮದಿಂದ ಜ್ಞಾನ, ಸಂಸ್ಕೃತಿಯಿಂದ ಸಂಸ್ಕಾರ, ಸೇವೆಯಿಂದ ಸಂತೃಪ್ತಿ ಮತ್ತು ಏಕತೆಯಿಂದ ಸಮೃದ್ಧಿ ಪ್ರಾಪ್ತವಾಗಲು ಸಾಧ್ಯವಾಗುತ್ತದೆ. ಧರ್ಮವೆಂದರೆ ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುವ ಜೀವನ ಮೌಲ್ಯ. ಸತ್ಯ, ಅಹಿಂಸೆ, ಕರುಣೆ, ದಯೆ, ಕ್ಷಮೆ, ತ್ಯಾಗ, ಸೇವೆ ಮತ್ತು ಪ್ರಾಮಾಣಿಕತೆ ಧರ್ಮದ ಪ್ರಮುಖ ಅಂಶಗಳು ಎಂದರು.

ದೇವರ ಮುಂದೆ ದೀಪ ಹಚ್ಚುವುದರ ಜೊತೆಗೆ ಮತ್ತೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಹಚ್ಚುವ ಪ್ರಯತ್ನ ಮಾಡಬೇಕೆಂದು ಸಿದ್ಧಾಂತ ಶಿಖಾಮಣಿಯಲ್ಲಿ ರೇಣುಕಾಚಾರ್ಯರು ಬೋಧಿಸಿದ್ದಾರೆ. ಧರ್ಮವೆಂದರೆ ದ್ವೇಷವಲ್ಲ, ಧರ್ಮವೆಂದರೆ ಆಚರಣೆ. ಸಂಸ್ಕೃತಿ ಎಂದರೆ ಸಂಪ್ರದಾಯವಲ್ಲ, ಅದು ನಮ್ಮ ಬದುಕಿನ ಮೌಲ್ಯ. ಭಕ್ತಿ ಎಂದರೆ ಕೇವಲ ಕೈ ಮುಗಿಯುವುದಲ್ಲ, ಸಂಕಷ್ಟದಲ್ಲಿರುವವರ ಕೈಹಿಡಿದು ನೆರವಾಗುವುದು. ಇತರರ ಧರ್ಮ ಮತ್ತು ನಂಬಿಕೆಗಳನ್ನು ಅಪಮಾನಿಸದೆ ನಮ್ಮ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ನಮ್ಮ ನಡೆ ನುಡಿಗಳ ಮೂಲಕ ಜಗತ್ತಿಗೆ ತೋರಿಸಬೇಕಾಗಿದೆ ಎಂದು ಹೇಳಿದರು.

ಯುವ ಜನರಲ್ಲಿ ಧಾರ್ಮಿಕ ಅರಿವು, ಮಕ್ಕಳ ಮನದಲ್ಲಿ ಸಂಸ್ಕಾರ, ಕುಟುಂಬದಲ್ಲಿ ಪ್ರೀತಿ, ಸಮಾಜದಲ್ಲಿ ಸಾಮರಸ್ಯ ಮತ್ತು ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಬೆಳೆದು ಬರಬೇಕು. ಧರ್ಮದ ಹೆಸರಿನಲ್ಲಿ ವಿಭಜನೆಯಾಗದೆ ಧರ್ಮದ ಮೌಲ್ಯಗಳು ಉಳಿದು ಬೆಳೆದು ಬರುವಂತಾಗಬೇಕು ಎಂದರು.

ಹರಪನಹಳ್ಳಿ ಕೊಟ್ರೇಶಪ್ಪ, ಆವರಗೊಳ್ಳ ಷಣ್ಮುಖಯ್ಯ ವೀರಯ್ಯ ಮಠದ, ಮಹೇಶ ಸಾಲಿಮಠ ಮತ್ತು ಹಾಸನದ ವೀರಶೈವ ಸಮಾಜ ಬಾಂಧವರು ಸ್ವಾಮೀಜಿಗೆ ಗೌರವ ಸಮರ್ಪಿಸಿದರು. ಮಳಲಿಮಠದ ನಾಗಭೂಷಣ ಶಿವಾಚಾರ್ಯ, ಕಾರ್ಜುವಳ್ಳಿ ಮಠದ ಸದಾಶಿವ ಶಿವಾಚಾರ್ಯ, ಕರ್ಪುರವಳ್ಳಿ ಮಠದ ಅಭಿನವ ಚಂದ್ರಶೇಖರ ಶಿವಾಚಾರ್ಯ, ತಾವರೆಕೆರೆ ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಹುಡುಗಿ ಸೋಮೇಶ್ವರ ಶಿವಾಚಾರ್ಯ ಪಾಲ್ಗೊಂಡಿದ್ದರು.

261028-126-1599263896

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ