
ಚಿಕ್ಕಅಗ್ರಹಾರ | ಬಾವಿಗೆ ಬಿದ್ದ ಕರು: ಅಗ್ನಿಶಾಮಕ ದಳದವರಿಂದ ರಕ್ಷಣೆ
ಚಿಕ್ಕಅಗ್ರಹಾರ (ನರಸಿಂಹರಾಜಪುರ): ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಗ್ರಹಾರದಲ್ಲಿ ಗುರುವಾರ ಮಧ್ಯಾಹ್ನ 50 ಅಡಿ ಆಳದ ಬಾವಿಗೆ ಬಿದ್ದ ಕರುವನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆ 10ಗಂಟೆ ಸುಮಾರಿಗೆ ಚಿಕ್ಕಅಗ್ರಹಾರದ ಮುಖ್ಯ ರಸ್ತೆಯ ಹೋಟೆಲ್ ಪಕ್ಕದ 50 ಅಡಿ ಆಳವಿರುವ ಬಾವಿಗೆ ಕರು ಬಿದ್ದಿದೆ. ಈ ವಿಷಯವನ್ನು ಆಡುವಳ್ಳಿ ಗ್ರಾಮ ಪಂಚಾಯಿತಿ ಪಿ.ಡಿ.ಒ ಪ್ರಕಾಶ್ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ನರಸಿಂಹರಾಜಪುರ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ, ಕರುವನ್ನು ಮೇಲಕ್ಕೆ ಎತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಪ್ರಭಾರ ಠಾಣಾಧಿಕಾರಿ ಪಿ. ರಮೇಶ್, ಸಿಬ್ಬಂದಿಗಳಾದ ರಾಘವೇಂದ್ರ, ರಾಮಣ್ಣ, ಬಸವರಾಜ ಮೇಟಿ, ನವೀನ್, ಮೊಹಮ್ಮದ್ ಹುಸೇನ್, ಮಹೇಶ್ ಶೆಟ್ಟಿ ಭಾಗವಹಿಸಿದ್ದರು.
261024-126-2005411830