ಹೊನ್ನಾಳಿ: ಕೀಲು ಕುದುರೆ ಕಲಾವಿದನಿಗೆ ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿ

ಹೊನ್ನಾಳಿ: ಕೀಲು ಕುದುರೆ ಕಲಾವಿದನಿಗೆ ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿ

ಹೊನ್ನಾಳಿ: ಕೀಲು ಕುದುರೆ ಕಲಾವಿದನಿಗೆ ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿ

ಹೊನ್ನಾಳಿ: 2026–27ನೇ ಸಾಲಿನ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಕೀಲು ಕುದುರೆ ಕಲಾವಿದ ಎಚ್. ಬಸವರಾಜ್ (55) ತಾಲ್ಲೂಕಿನ ನರಸಗೊಂಡನಹಳ್ಳಿ ಗ್ರಾಮದವರು.

ಇವರು 25ನೇ ವಯಸ್ಸಿಗೆ ಕೀಲು ಕುದುರೆ ಕಲಾವಿದರಾಗಿ ಹೊರಹೊಮ್ಮಿದವರು. ರಂಗಭೂಮಿ ಕಲಾವಿದರಾಗಿದ್ದ ತಾತ ಮಲ್ಲಪ್ಪ ಹಾಗೂ ತಂದೆ ಎಚ್. ಬಸಪ್ಪ ಅವರಿಂದ ವಂಶ ಪಾರಂಪರ್ಯವಾಗಿ ಇವರಿಗೆ ಈ ಕಲೆ ಒಲಿದುಬಂದಿದ್ದು, ಸಹೋದರರಾದ ಈಶ್ವರಪ್ಪ, ಚನ್ನಬಸಪ್ಪ, ಗುರುಶಾಂತಪ್ಪ ಹಾಗೂ ಮಹೇಶ್ವರಪ್ಪ ಅವರಿಗೂ ಕಲೆ ಕರಗತವಾಗಿದೆ.

ಗ್ರಾಮೀಣ ಪ್ರದೇಶದ ಇವರು ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಆಂದ್ರ ಪ್ರದೇಶಗಳಲ್ಲಿಯೂ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

ಕಾಲಿಗೆ ಎರಡರಿಂದ ಮೂರಡಿ ಉದ್ದದ ಮರಗಾಲುಗಳನ್ನು ಕಟ್ಟಿಕೊಂಡು, ಕುದುರೆಯಾಕಾರದ ಬುಟ್ಟಿ ರಚಿಸಿಕೊಂಡು ಅದಕ್ಕೆ ಬಣ್ಣ ಬಣ್ಣದ ಜೂಲಾ (ವಸ್ತ್ರಗಳನ್ನು) ಕಟ್ಟಿಕೊಂಡು, ಮುಖಕ್ಕೆ ಬಣ್ಣ ಲೇಪಿಸಿಕೊಂಡು ರಾಜ– ರಾಣಿಯರ ವೇಷದಲ್ಲಿ ವಾದ್ಯಗಾರರು ನುಡಿಸುವ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೃತ್ಯ ಪ್ರದರ್ಶನ ಮಾಡುವ ಇವರ ಕಲೆಯನ್ನು ನೋಡುಗರು ಮೆಚ್ಚಿ ಮನಸಾರೆ ಹೊಗಳಿದ್ದಾರೆ.

ಉತ್ಸವಗಳಲ್ಲಿ ಜನಾಕರ್ಷಣೆ: ಉತ್ಸವಗಳು, ಜಾತ್ರೆ, ಹಬ್ಬ– ಹರಿದಿನಗಳಲ್ಲಿ ಇವರೇ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಮೈಸೂರು ದಸರಾ, ಕಿತ್ತೂರು ಉತ್ಸವ, ಕನ್ನಡ ಸಾಹಿತ್ಯ ಪರಿಷತ್‍ನ ಸಮ್ಮೇಳನಗಳು ಸೇರಿದಂತೆ ಅನೇಕ ಸಾರ್ವಜನಿಕ ಮೆರವಣಿಗೆಗಳಲ್ಲಿ ಜನಮನ ಸೆಳೆದಿದ್ದಾರೆ.

ಸರ್ಕಾರಕ್ಕೆ ಧನ್ಯವಾದ: ‘30 ವರ್ಷಗಳಿಂದಲೂ ಈ ಕಲೆಯನ್ನು ಆರಾಧಿಸಿಕೊಂಡು ಬಂದಿರುವ ನನಗೆ ಹಾಗೂ ನನ್ನಂಥ ಅನೇಕ ಕಲಾವಿದರಿಗೆ ಈ ಪ್ರಶಸ್ತಿ ಖುಷಿ ತಂದಿದೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ನಮ್ಮ ಕಲೆಗೆ ಸಂದ ಗೌರವವಾಗಿದೆ. ನನ್ನ ಜೀವನ ಸಾರ್ಥಕವಾಗಿದೆ. ಇನ್ನೂ ಹಲವು ಕಲಾವಿದರು ಎಲೆಮರೆಯ ಕಾಯಿಯಂತೆ ಇದ್ದು, ಅವರಿಗೂ ಈ ಪ್ರಸಸ್ತಿ ಲಭಿಸಲಿ’ ಪ್ರಶಸ್ತಿಗೆ ಆಯ್ಕೆಯಾಗಿರುವ ಬಸವರಾಜ್‌ ‘ಪ್ರಜಾವಾಣಿ’ ಎದುರು ಆಶಯ ವ್ಯಕ್ತಪಡಿಸಿದರು.

ಬಸವರಾಜ್‌ ಅವರಿಗೆ ಇದುವರೆಗೆ ಬಸವ ಜ್ಯೋತಿ ಪ್ರಶಸ್ತಿ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ಗ್ರಾಮೀಣ ಸಿರಿ ಜಿಲ್ಲಾ ಪ್ರಶಸ್ತಿ, ರಾಜ್ಯ ಮಟ್ಟದ ಯುವಜನೋತ್ಸವ ಪ್ರಶಸ್ತಿ, ಜಾನಪದ ಕಲಾಸಿರಿ ಪ್ರಶಸ್ತಿ, ಜಾನಪದ ಜಾತ್ರೆ ದಾವಣಗೆರೆ ಪ್ರಶಸ್ತಿ, ಜಾನಪದ ಸಂಭ್ರಮ ಪ್ರಶಸ್ತಿಗಳಿಗೆ ದೊರೆತಿರುವುದು ವಿಶೇಷ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ