ಬಿದ್ರಿ ಕಲಾವಿದೆ ಶಾಂತಾಬಾಯಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗರಿ

ಬಿದ್ರಿ ಕಲಾವಿದೆ ಶಾಂತಾಬಾಯಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗರಿ

ಬಿದ್ರಿ ಕಲಾವಿದೆ ಶಾಂತಾಬಾಯಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗರಿ

ಬೀದರ್‌: ಬಿದ್ರಿ ಕಲೆಯನ್ನೇ ತನ್ನ ಬದುಕಾಗಿಸಿಕೊಂಡಿರುವ ಕಲಾವಿದೆ ಶಾಂತಾಬಾಯಿ ಅವರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯ ಸರ್ಕಾರವು ಕರಕುಶಲ ವಿಭಾಗದಲ್ಲಿ ಶಾಂತಾಬಾಯಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

70 ವರ್ಷ ವಯಸ್ಸಿನ ಶಾಂತಾಬಾಯಿ ಅವರು ಬೀದರ್‌ ನಗರದ ಓಲ್ಡ್‌ ಸಿಟಿಯವರು. ಸದ್ಯ ಬಿದ್ರಿ ಕಾಲೊನಿಯಲ್ಲಿ ನೆಲೆಸಿದ್ದಾರೆ. ಅದನ್ನೇ ಕಾಯಕ ಸ್ಥಳ ಮಾಡಿಕೊಂಡಿದ್ದಾರೆ.

ಓಲ್ಡ್‌ ಸಿಟಿಯಲ್ಲಿ ಅನೇಕ ಬಿದ್ರಿ ಕಲಾವಿದರಿದ್ದಾರೆ. ಅದೇ ಪ್ರದೇಶದಲ್ಲಿದ್ದ ಇವರ ಮಾವ ದಿವಂಗತ ರಾಮಚಂದ್ರರಾವ್‌ ಕಾಂಬ್ಳೆ ಅವರ ಒಡನಾಟದಲ್ಲಿ ಆ ಕಲೆ ಸಿದ್ಧಿಸಿಕೊಂಡಿದ್ದರು. ಇವರಿಂದ ಪ್ರಭಾವಿತರಾಗಿ ಇವರ ಮಗ ದಿವಂಗತ ಮೋಹನರಾವ್‌ ಹಾಗೂ ಇವರ ಪತ್ನಿ ಶಾಂತಾಬಾಯಿ ಕೂಡ ಇದರ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡು ನಯಾ, ನಾಜೂಕಿನ ಕಲೆಯಲ್ಲಿ ಪಳಗಿದರು.

ಈಗ ಶಾಂತಾಬಾಯಿ ಅವರ ಮೂಲಕ ಮುಂದಿನ ತಲೆಮಾರಿಗೂ ಈ ಕಲೆ ಸಿದ್ಧಿಸಿದೆ. ಇವರ ನಾಲ್ಕು ಜನ ಮಕ್ಕಳು, ಮಗಳು ಕೂಡ ಬಿದ್ರಿಯ ಕಲೆ ಆಳ, ಅಗಲ ಬಲ್ಲವರು. 70 ವರ್ಷ ವಯಸ್ಸಿನ ಶಾಂತಾಬಾಯಿ ಅವರು ಕಳೆದ ಐದು ದಶಕಗಳಿಂದ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಯಾವ ಪ್ರಚಾರವೂ ಇಲ್ಲದೇ ತಮ್ಮ ಮನೆಯಲ್ಲಿ ಈ ಕೆಲಸ ಮಾಡುತ್ತಾರೆ. ತನಗಿಷ್ಟವಾದ ವಿವಿಧ ವಿನ್ಯಾಸದ ಬಿದ್ರಿ ಕಲಾಕೃತಿಗಳನ್ನು ತಯಾರಿಸುತ್ತಾರೆ. ಇವರ ಮನೆಗೆ ಬಂದು ಬೇಡಿಕೆ ಸಲ್ಲಿಸಿದರಷ್ಟೇ ಮಾಡಿಕೊಡುತ್ತಾರೆ. ಇವರಾಗಿಯೇ ಎಲ್ಲೂ ಮಾರಾಟವಾಗಲಿ, ಪ್ರದರ್ಶನವಾಗಲಿ ಮಾಡುವುದಿಲ್ಲ. ಈ ಕಲೆಯನ್ನು ಅವರು ಎಂದೂ ಕೂಡ ವ್ಯವಹಾರಿಕವಾಗಿ ನೋಡಿದವರಿಲ್ಲ. ಅದನ್ನು ಜೀವನದ ಒಂದು ಭಾಗವೆಂದು ಪರಿಗಣಿಸಿ, ಅಭಿರುಚಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಐದು ದಶಕಗಳಿಗೂ ಹೆಚ್ಚು ಕಾಲದಿಂದ ಬಿದ್ರಿ ಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿದ್ದರೂ ಇವರಿಗೆ ರಾಜ್ಯೋತ್ಸವದಂತಹ ಪ್ರಶಸ್ತಿ ಸಂದಿಲ್ಲ ಎಂಬ ವಿಷಯ ತಿಳಿದು, ಸುನೀಲ್‌ ಸಾಗರ್‌ ಎಂಬ ಸಂಶೋಧಕರು ಅರ್ಜಿ ಸಲ್ಲಿಸಿದ್ದರು. ಅದು ಫಲ ಕೊಟ್ಟಿದೆ.

‘ಶಾಂತಾಬಾಯಿ ಅವರು ಎಲೆಮರೆಕಾಯಿಯಂತೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಒಬ್ಬ ಮಹಿಳೆಯಾಗಿಯೂ ಬಿದ್ರಿ ಕಲೆಯನ್ನು ಸರಿಯಾಗಿ ಕರಗತ ಮಾಡಿಕೊಂಡು ಅದನ್ನು ಜೀವಂತವಾಗಿರಿಸಿದ್ದಾರೆ. ಅವರಿಗೆ ಪ್ರಶಸ್ತಿ ಸಂದಿರುವುದು ಖುಷಿಯ ಸಂಗತಿ’ ಎನ್ನುತ್ತಾರೆ ಇವರನ್ನು ಹತ್ತಿರದಿಂದ ಬಲ್ಲ ಸುಪ್ರಿಯಾ ವಿ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ