
Unlucky Plant : ನಿಮ್ಮ ಮನೆಯ ಮುಂದೆ ಇದೊಂದು ಗಿಡ ಇದ್ದರೂ ಹಣಕಾಸಿನ ಸಮಸ್ಯೆ ತಪ್ಪಿದ್ದಲ್ಲ!
Unlucky Plant: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಪಾಸಿಟಿವ್ ಎನರ್ಜಿ ಹರಿಯಬೇಕು.ಆಗ ಮಾತ್ರ ಆ ಮನೆಯಲ್ಲಿ ಇರುವವರಿಗೆ ನೆಮ್ಮದಿಯ ಬದುಕು ಸಿಗುವುದು. ಕೆಲವೊಂದು ಗಿಡಗಳನ್ನು ಮನೆ ಮುಂದೆ ನೆಡುವುದರಿಂದ ಮನೆಯ ವಾಸ್ತು ದೋಷಗಳನ್ನು ನಿವಾರಣೆ ಮಾಡಬಹುದು. ಮನೆಯೊಳಗೆ ಪಾಸಿಟಿವ್ ಎನರ್ಜಿ ಹರಿದಾಡುವಂತೆ ಮಾಡಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ.
ಅದೇ ಇನ್ನು ಕೆಲವು ಸಸ್ಯಗಳು ಮನೆಯ ಎದುರು ಇದೆ ಎಂದಾದರೆ ಮನೆಯೊಳಗೆ ದರಿದ್ರ ಹೊಕ್ಕುವುದಕ್ಕೆ ಕಾರಣವಾಗುತ್ತದೆಯಂತೆ. ಅಂಥಹ ಗಿಡ-ಮರಗಳು ಮನೆಯ ಎದುರುಗಡೆ ಇರದಂತೆ ನೋಡಿಕೊಳ್ಳಬೇಕು. ಈ ರೀತಿಯ ಸಸ್ಯಗಳು ಮತ್ತು ಮರಗಳು ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ.
Unlucky Plant: ಮನೆ ಮುಂದೆ ಯಾವ ಮರ ಇರಬೇಕು ?
ಯಾವಾಗಲೂ ನಮ್ಮ ಮನೆಯ ಮುಖ್ಯ ದ್ವಾರದ ಮೂಲಕವೇ ಪಾಸಿಟಿವ್ ಎನರ್ಜಿ ಮನೆಯ ಒಳಗೆ ಬರುವುದು. ಹಾಗಾಗಿ ಮನೆಯ ಮುಂದೆ ಹೇಗಿದೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರದ ಎದುರಿನ ವಾತಾವರಣವು ಶುಭ ಫಲ ನೀಡುವ ಹಾಗೆ ಇರಬೇಕು. ಕೆಲವು ರೀತಿಯ ಗಿಡ ಮರಗಳನ್ನು ಮನೆ ಮುಂದೆ ಬೆಳೆಸುವುದರಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಕ್ಕೆ ಕಾರಣವಾಗುತ್ತದೆ. ಇದು ಮನೆಯಲ್ಲಿ ಅನಗತ್ಯ ಜಗಳಗಳು, ಆರ್ಥಿಕ ತೊಂದರೆಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
Unlucky Plant: ಮನೆಯ ಮುಂದೆ ಈ ಸಸ್ಯಗಳು ಇರಬಾರದು
ಮುಳ್ಳಿನ ಸಸ್ಯಗಳು: ಕಳ್ಳಿಯಂತಹ ಮುಳ್ಳುಗಳನ್ನು ಹೊಂದಿರುವ ಸಸ್ಯಗಳು ಅಥವಾ ಚೂಪಾದ ಎಲೆಗಳನ್ನು ಹೊಂದಿರುವ ಸಸ್ಯಗಳನ್ನು ಮನೆಯ ಮುಖ್ಯ ದ್ವಾರದ ಬಳಿ ಯಾವತ್ತೂ ಇಡಬಾರದು. ಇವುಗಳಿಂದ ಹೊರಹೊಮ್ಮುವ ತೀವ್ರವಾದ ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಒತ್ತಡ ಮತ್ತು ಜಗಳಗಳನ್ನು ಹೆಚ್ಚಿಸುತ್ತದೆ. ಇದು ಮಾನಸಿಕ ಶಾಂತಿಯನ್ನು ಕೆಡಿಸುವುದಕ್ಕೆ ಕಾರಣವಾಗಬಹುದು.
ಬೋನ್ಸಾಯ್ ಸಸ್ಯಗಳು: ಬೋನ್ಸಾಯ್ ಸಸ್ಯಗಳು ನೋಡಲು ಸುಂದರವಾಗಿದ್ದರೂ, ಅವು ಬೆಳವಣಿಗೆಯಲ್ಲಿ ಕುಂಠಿತವಾಗಿರುತ್ತವೆ. ಈ ಬೋನ್ಸಾಯ್ ಸಸ್ಯಗಳನ್ನು ಮನೆಯ ಪ್ರವೇಶದ್ವಾರದಲ್ಲಿ ಬೆಳೆಸಿದರೆ, ಆರ್ಥಿಕ ಲಾಭ ನಿಂತು ಹೋಗುತ್ತದೆಯಂತೆ. ಮನೆಯ ಅಭಿವೃದ್ದಿಗೆ ಇದು ಅಡ್ಡಿಯಾಗುತ್ತದೆಯಂತೆ.
ಒಣಗಿ ಸಾಯುತ್ತಿರುವ ಸಸ್ಯಗಳು: ಸತ್ತ ಅಥವಾ ಒಣಗಿದ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಅವು ಅವನತಿ ಮತ್ತು ನಷ್ಟದ ಸಂಕೇತವಾಗಿದೆ. ಅಂತಹ ಸಸ್ಯಗಳನ್ನು ಮನೆ ಬಾಗಿಲಿನಲ್ಲಿ ಇಡಬಾರದು, ಮನೆಯ ಮುಂದೆ ಇರುವ ಯಾವುದಾದರೂ ಸಸ್ಯ ಒಣಗಿ ಹೋಗಿದ್ದರೆ ಅಥವಾ ಸತ್ತು ಹೋಗಿದ್ದರೆ ಕೂಡಲೇ ಅದನ್ನು ತೆಗೆದು ಹಾಕಬೇಕು.
ದೊಡ್ಡ ಮರಗಳು: ಮನೆಯ ಬಾಗಿಲಿನ ಎದುರು ದೊಡ್ಡ ಮರಗಳು ಇರಲೇಬಾರದು. ಇವು ಮನೆಯೊಳಗೆ ನೈಸರ್ಗಿಕ ಶಕ್ತಿಯ ಹರಿವನ್ನು ತಡೆಯುತ್ತವೆ. ಹಗಲಿನಲ್ಲಿ ಮನೆಯ ಮೇಲೆ ಬೀಳುವ ಆ ಮರಗಳ ನೆರಳು ಕೂಡಾ ಅಶುಭ. ಇದು ಕುಟುಂಬ ಸದಸ್ಯರ ಬೆಳವಣಿಗೆ ಮತ್ತು ಅವಕಾಶಗಳಿಗೆ ಅಡ್ಡಿಯಾಗುತ್ತದೆ.
ಹತ್ತಿ ಗಿಡಗಳು: ಹತ್ತಿ ಮತ್ತು ರೇಷ್ಮೆ ಹತ್ತಿಯಂತಹ ಗಿಡಗಳು ಆರ್ಥಿಕ ಅಸ್ಥಿರತೆಯನ್ನು ಸೂಚಿಸುತ್ತವೆ. ಇವುಗಳನ್ನು ಮನೆ ಬಾಗಿಲಿನ ಬಳಿ ಬೆಳೆಸಿದರೆ ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ಆರ್ಥಿಕ ಪ್ರಗತಿ ನಿಲ್ಲುತ್ತದೆ. ಮಾನಸಿಕ ಶಾಂತಿ ಭಂಗವಾಗುತ್ತದೆ.
ಹುಣಸೆ ಮರ : ವಾಸ್ತು ಪ್ರಕಾರ, ಹುಣಸೆ ಮರಗಳು ನೆಗೆಟಿವ್ ವೈಬ್‌ಗಳನ್ನೇ ಹೊಂದಿರುತ್ತವೆ. ಅದು ಮನೆಯ ಸಮೀಪದಲ್ಲಿದ್ದರೆ, ಮಾನಸಿಕ ಮತ್ತು ಭಾವನಾತ್ಮಕ ಶಾಂತಿಗೆ ಅಡಿಯಾಗುವುದು. ವಿಶೇಷವಾಗಿ ಮುಖ್ಯ ದ್ವಾರದ ಬಳಿ ಹುಣಸೆ ಮರವಿದ್ದರೆ, ಮನೆಯಲ್ಲಿ ಯಾವಾಗಲೂ ಆತಂಕ ಇರುತ್ತದೆ.
ಬಳ್ಳಿಗಳು: ಮನೆಯ ಗೋಡೆಗಳು ಮತ್ತು ಹೊಸ್ತಿಲುಗಳ ಮೇಲೆ ಬೆಳೆಯುವ ಬಳ್ಳಿಗಳು ಮನೆಯ ಲುಕ್ ಅನ್ನೇ ಕೆಡಿಸಿ ಬಿಡುತ್ತವೆ. ಅವು ಶಕ್ತಿಯ ಹರಿವನ್ನು ಸಹ ತಡೆಯುತ್ತವೆ. ಅವು ಗೋಡೆಗಳನ್ನು ಹಾನಿಗೊಳಿಸುತ್ತವೆ ಮತ್ತು ಕೀಟಗಳಿಗೆ ಮನೆಯಾಗಿ ಬಿಡುತ್ತವೆ.
ಹಣ್ಣು ಬಿಡುವ ಮರಗಳು: ಮಾವು, ಬಾಳೆ ಮತ್ತು ಏಪ್ರಿಕಾಟ್ ನಂತಹ ಹಣ್ಣಿನ ಮರಗಳನ್ನು ಮುಖ್ಯ ದ್ವಾರದ ಹತ್ತಿರ ನೆಡಬಾರದು. ತುಳಸಿಯಂತಹ ಔಷಧೀಯ ಸಸ್ಯಗಳನ್ನು ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಅಲ್ಲದೆ, ದೊಡ್ಡ ಮರಗಳನ್ನು ಮನೆಯಿಂದ ದೂರ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡಬೇಕು.