
Numerology: ಈ ದಿನಾಂಕದಲ್ಲಿ ಜನಿಸಿದವರಿಗೆ ಖುಲಾಯಿಸಿತು ಅದೃಷ್ಟ: 2 ದಿನದಲ್ಲಿ ಸಿಗಲಿದೆ ಜಾಕ್‌ಪಾಟ್
Numerology: ಸಂಖ್ಯಾಶಾಸ್ತ್ರದಲ್ಲಿ, ಪ್ರತಿಯೊಂದು ಸಂಖ್ಯೆಗೆ ವಿಶೇಷ ಮಹತ್ವವಿದೆ. ವ್ಯಕ್ತಿಯ ಮೂಲಾಂಕವನ್ನು ಜನ್ಮ ದಿನಾಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದರ ಪ್ರಕಾರ ಇನ್ನೆರಡು ದಿನಗಳು ಕೆಲವು ಮೂಲಾಂಕದವರಿಗೆ ತುಂಬಾ ಶುಭ ಫಲ ಸಿಗಲಿದೆ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಅವರಿಗೆ ದೊಡ್ಡ ಮಟ್ಟದ ಅವಕಾಶಗಳು ಒಲಿದು ಬರುವುದಂತೆ.
ಯಾವುದೇ ತಿಂಗಳ 1, 10, 19 ಮತ್ತು 28 ನೇ ತಾರೀಕಿಗೆ ಜನಿಸಿದವರು
ಈ ಮೂರು ದಿನಗಳಲ್ಲಿ ಒಂದು ನಿರ್ಣಾಯಕ ಯೋಜನೆಯಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಬೇಡದ ವಾದಗಳಿಂದ ದೂರವಿರುವುದು ಒಳ್ಳೆಯದು. ನಿಮಗೆ ತೀರಾ ಅಗತ್ಯವಿದೆ ಎನ್ನುವಾಗ ಸಹೋದರ ಸಹೋದರಿಯರಿಂದ ಬೆಂಬಲ ಸಿಗುವುದು. ಸಂಬಂಧಗಳಲ್ಲಿ ಕೆಲವು ನಕಾರಾತ್ಮಕ ಸಂದರ್ಭಗಳನ್ನು ಎದುರಿಸುವಿರಿ. ಆದರೂ ತಾಳ್ಮೆಯಿಂದಿರಬೇಕು. ನಿಮ್ಮ ಮೇಲಧಿಕಾರಿಗಳಿಂದ ಬೆಂಬಲ ಸಿಗುವುದು. ಮಕ್ಕಳ ವರ್ತನೆ ನಿಮ್ಮನ್ನು ಮುಜುಗರಕ್ಕೆ ಈಡು ಮಾಡಬಹುದು.
ಸಂಖ್ಯೆ 2 ಯಾವುದೇ ತಿಂಗಳ 2, 11, 20, 29ಕ್ಕೆ ಜನಿಸಿದವರು ಗಮನಿಸಿ
ನಿಮ್ಮ ಸ್ವಭಾವದಿಂದಾಗಿ ಮನೆಯಲ್ಲಿ ಸಣ್ಣಪುಟ್ಟ ಜಗಳಗಳಾಗುವ ಸಾಧ್ಯತೆ ಇದೆ. ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡುವ ಸಂದರ್ಭಗಳು ಎದುರಾಗುವುದು. ಒಡಹುಟ್ಟಿದವರು ಅಥವಾ ಆಪ್ತ ಸ್ನೇಹಿತರೊಂದಿಗಿನ ಸಂಬಂಧಗಳು ಸುಧಾರಿಸುವುದು. ಸಂಗಾತಿಗೆ ಯಾವುದೋ ಕಾರಣದಿಂದ ಬೇಸರವಾಗುವುದು. ಅವರ ಜೊತೆ ಪ್ರೀತಿ ಮತ್ತು ವಾತ್ಸಲ್ಯದಿಂದ ಇರುವುದು ಮುಖ್ಯವಾಗುತ್ತದೆ. ಸಮಾಜದಲ್ಲಿ ನಿಮ್ಮ ಮೌಲ್ಯ ಮತ್ತು ಗೌರವ ಮತ್ತಷ್ಟು ಹೆಚ್ಚಾಗುವುದು.
ಸಂಖ್ಯೆ 3: ಯಾವುದೇ ತಿಂಗಳ 3, 12, 21, 30 ರಂದು ಜನನ
ಹಿರಿಯರೊಂದಿಗೆ ಜಗಳವಾಗದಂತೆ ನೋಡಿಕೊಳ್ಳಿ. ಶಿಕ್ಷಣಕ್ಕೋ, ಉದ್ಯೋಗಕ್ಕೋ ಬೇರೆ ಊರಿಗೆ ಹೋಗಬೇಕಾದ ಸ್ಥಿತಿ ಎದುರಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ವಿರೋಧಿಗಳು ನಿಮ್ಮ ಮುಂದೆ ಸೋಲೋಪ್ಪುವರು. ನಿಮ್ಮ ಯೋಜನೆಗಳಲ್ಲಿ ಪ್ರಭಾವಿ ಜನರನ್ನು ತೊಡಗಿಸಿಕೊಂಡು ಮುಂದುವರಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
4 ನೇ ಸಂಖ್ಯೆ ಯಾವುದೇ ತಿಂಗಳ 4, 13, 22, 31ಕ್ಕೆ ಜನನ
ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗುವುದು. ಅವರು ಯಾವುದೇ ದತ್ತಿ ಸಂಸ್ಥೆ ಅಥವಾ ಚಳವಳಿಯ ಭಾಗವಾಗುವಿರಿ. ಅಧಿಕಾರದಲ್ಲಿರುವ ಜನರಿಂದ ಸ್ವಲ್ಪ ಒತ್ತಡ ಬರುವ ಸಾಧ್ಯತೆಯಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ.
5 ನೇ ಸಂಖ್ಯೆ ಯಾವುದೇ ತಿಂಗಳ 5, 14, 23ರಂದು ಜನಿಸಿದವರು ಗಮನಿಸಿ
ಸವಾಲುಗಳನ್ನು ಧೈರ್ಯದಿಂದ ಎದುರಿಸುವಿರಿ. ಆತ್ಮ ವಿಶ್ವಾಸ ಹೆಚ್ಚುವುದು. ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರವಹಿಸಿ. ಸಂಗಾತಿಯ ಜೊತೆ ಸಂಬಂಧ ಉತ್ತಮವಾಗಿರುವುದು. ಐಷಾರಾಮಿ ಜೀವನಶೈಲಿಯಿಂದ ಗೆಳೆಯರು ಪ್ರಭಾವಿತರಾಗುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
6 ನೇ ಸಂಖ್ಯೆ: 6, 15, 24ರಂದು ಜನಿಸಿದವರು ಗಮನಿಸಿ
ದೂರದ ಊರಿಗೆ ಪ್ರಯಾಣ ಬೆಳೆಸುವ ಯೋಗವಿದೆ. ಮಾಡುವ ಕೆಲಸ ಕಾರ್ಯಗಳಿಗೆ ಎಲ್ಲರ ಬೆಂಬಲ ಪ್ರೋತ್ಸಾಹ ಸಿಗುವುದು. ಹೊಸ ಹೊಸ ಅವಕಾಶಗಳು ಒಲಿದು ಬರುವುದು. ಅದೃಷ್ಟ ನಿಮ್ಮ ಜೊತೆಗಿರುವುದು. ಬೇರೆಯವರ ಸಮಸ್ಯೆಗಳಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಲು ಹೋಗಬೇಡಿ. ಮಾನಸಿಕ ಸಂತೋಷ ಹೆಚ್ಚುವುದು.
ಯಾವುದೇ ತಿಂಗಳ 7, 16 ಮತ್ತು 25ಕ್ಕೆ ಜನನ
ವಿದೇಶಿ ವ್ಯವಹಾರ ಉತ್ತಮವಾಗಿ ನಡೆಯುವುದು. ಅದೃಷ್ಟದ ಫಲವಾಗಿ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಜಯ ಗಳಿಸುವಿರಿ. ಆದರೂ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಸಂಗಾತಿಯೊಂದಿಗಿನ ಮನಸ್ತಾಪದಿಂದ ಮನೆಯಲ್ಲಿ ಸಣ್ಣಪುಟ್ಟ ಜಗಳಗಳಾಗುವುದು. ತಾಳ್ಮೆಯಿಂದ ವರ್ತಿಸಿ.
8 ನೇ ಸಂಖ್ಯೆ ಯಾವುದೇ ತಿಂಗಳ 8, 17, 26ರಂದು ಜನನ
ಆರ್ಥಿಕ ಲಾಭ ಹೆಚ್ಚಾಗುವುದು. ಬೆಂಕಿ ಮತ್ತು ವಿದ್ಯುತ್ ಉಪಕರಣಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಮನ್ನಣೆ ಸಿಗುವುದು. ಗೆಳೆಯರು ನಿಮ್ಮ ಬೆಳವಣಿಗೆಯಿಂದ ಅಸೂಯೆ ಪಡುವರು. ವೃತ್ತಿಜೀವನದಲ್ಲಿ ಅನಿರೀಕ್ಷಿತ ಪ್ರಗತಿಯಾಗುವುದು.
9ನೇ ಸಂಖ್ಯೆ ಯಾವುದೇ ತಿಂಗಳ 9, 18, 27ರಂದು ಜನನ
ವಹಿಸಿರುವ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕೆಲಸದ ಹೊರೆ ಹೆಚ್ಚಾಗಿ ಮಾನಸಿಕ ಒತ್ತಡ ಉಂಟಾಗುವುದು. ಸಹೋದ್ಯೋಗಿಗಳೊಂದಿಗೆ ವಾದಕ್ಕೆ ಇಳಿಯಬೇಡಿ. ನಿಮ್ಮ ಶಾಂತ ಸ್ವಭಾವವು ಗೆಳೆಯರನ್ನು ಮೆಚ್ಚಿಸುತ್ತದೆ. ತಾಳ್ಮೆಯಿಂದಿರುವುದು ಒಳ್ಳೆಯದು.