
KPSC ಹಗರಣದ ಕಿಂಗ್‌ಪಿನ್ ಬಸವರಾಜ ಕನ್ನಾಳೆ ಜತೆ ಈಶ್ವರ್ ಖಂಡ್ರೆ ಒಡನಾಟ! ಸಚಿವರ ವಜಾಗೆ JDS ಆಗ್ರಹ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಯಾರೆಲ್ಲ ಇದ್ದಾರೆಂದು ಸಿಐಡಿ ತನಿಖಾಧಿಕಾರಿಗಳು ಒಬ್ಬೊಬ್ಬರನೇ ಪತ್ತೆ ಮಾಡುತ್ತಿದ್ದಾರೆ. ಇದೀಗ ಬಸವರಾಜ ಕನ್ನಾಳೆ ಈ ಅಕ್ರಮದ ಕಿಂಗ್ ಪಿನ್ ಎನ್ನಲಾಗುತ್ತಿದೆ. ಸಾಕ್ಷ್ಯ ನಾಶ ಮಾಡಲು ಯತ್ನಿಸಿರುವ ಕನ್ನಾಳೆ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರಿಗೆ ಒಡನಾಟವಿದೆ ಎಂದು ಜೆಡಿಎಸ್ ಆರೋಪಿಸಿ ಅವರು ಇಬ್ಬರು ಇರುವವಿಡಿಯೋ ಹಂಚಿಕೊಂಡಿದೆ. 'ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಂತೆ ಪೋಸ್ ಕೊಡುವ ಕಾಂಗ್ರೆಸ್ ಸಚಿವರ ಅಸಲಿ ಮುಖವಾಡ ಕಳಚಿದೆ' ಎಂದಿದೆ.
ಕನ್ನಾಳೆ ಹಾಗೂ ಸಚಿವ ಈಶ್ವರ್ ಖಂಡ್ರೆ ಇವರ ಮಧ್ಯ ದಶಕದಿಂದಲೂ ಒಡನಾಟ ಇದೆ. ಇದೀಗ ನನಗೆ ಕನ್ನಾಳೆಗೂ ಸಂಬಂಧವಿಲ್ಲ ಎಂದು ಸಚಿವರು ಹೇಳುವ ವಿಡಿಯೋವನ್ನು ಜೆಡಿಎಸ್ ಪೋಸ್ಟ್ ಮಾಡಿದೆ. ಈ ಮೂಲಕ ಕಾಂಗ್ರೆಸ್ ಸಚಿವರ ಅಸಲಿ ಮುಖ ಕಳಚಿದೆ. ಯುವಕರ ಭವಿಷ್ಯದ ಜೊತೆ ಕಾಂಗ್ರೆಸ್ ನಾಯಕರು ಆಟವಾಡುತ್ತಿದ್ದಾರೆ ಎಂದು ಜೆಡಿಎಸ್ ದೂರಿದೆ.
"ನನಗೂ ಆ ಕನ್ನಾಳೆಗೂ ಸಂಬಂಧವೇ ಇಲ್ಲ, ಆತ ಯಾರೆಂದೇ ಗೊತ್ತಿಲ್ಲ" ಎಂದು ಕ್ಯಾಮೆರಾ ಮುಂದೆ ನಾಟಕವಾಡಿದ್ದ ಸಚಿವ ಈಶ್ವರ್ ಕಂಡ್ರೆ ಅವರ ದಶಕಗಳ 'ಮಧುರ ಬಾಂಧವ್ಯ ಈಗ ಜಗಜ್ಜಾಹೀರಾಗಿದೆ' ಎಂದು ಜೆಡಿಎಸ್ ಕುಟುಕಿದೆ.
ರಾಜ್ಯದ ಲಕ್ಷಾಂತರ ಬಡ, ಮಧ್ಯಮ ವರ್ಗದ ಯುವಜನತೆ ಹಗಲಿರುಳು ನಿದ್ದೆಗೆಟ್ಟು KPSC ಪರೀಕ್ಷೆಗಳಿಗೆ ಓದುತ್ತಿದ್ದರೆ, ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು KPSC ಅಕ್ರಮದ ಕಿಂಗ್‌ಪಿನ್‌ಗಳ ಜೊತೆ ಸೇರಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಸಂಪುಟದಿಂದ ಈಶ್ವರ್ ಖಂಡ್ರೆ ವಜಾಗೆ ಆಗ್ರಹ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ನೀವು ಈಗೇಕೆ ಮೌನವಾಗಿದ್ದೀರಿ?. ನೈತಿಕತೆ ಉಳಿದಿದ್ದರೆ ಕೂಡಲೇ ಸಚಿವ ಈಶ್ವರ ಖಂಡ್ರೆ ಅವರನ್ನು ಸಂಪುಟದಿಂದ ವಜಾಗೊಳಿಸಿ, ಕೆಪಿಎಸ್'ಸಿ ಹಗರಣದ ಬಗ್ಗೆ ಸಿಬಿಐ ಅಥವಾ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವಂತೆ ಅವರು ಆಗ್ರಹಿಸಿದ್ದಾರೆ.
KPSC ಅಕ್ರಮದ ಸಾಕ್ಷ್ಯ ನಾಶಕ್ಕೆ ಕನ್ನಾಳೆ ಯತ್ನ!
ಕೆಪಿಎಸ್ ಸಿ ಅಧ್ಯಕ್ಷರು, ಐಎಎಸ್ ಅಧಿಕಾರಿಗಳ ಮನೆ ಜಾಲಾಡಿರುವ ಸಿಐಡಿ ತನಿಖಾಧಿಕಾರಿಗಳು ಬಸವರಾಜ ಕನ್ನಾಳೆಯನ್ನು ವಶಕ್ಕೆ ಪಡೆದಿದ್ದಾರೆ. ಈತನೇ ಕಿಂಗ್ ಪಿನ್ ಎಂಬ ಮಾಹಿತಿ ಲಭ್ಯವಾಗಿದೆ. ಈತನ ಮೇಲೆ ಕೇಸ್ ದಾಖಲಾಗುತ್ತಿದ್ದಂತೆ ಅಕ್ರಮಕ್ಕೆ ಸಂಬಂಧಿಸಿದ ಮೊಬೈಲ್, ಲ್ಯಾಪ್ ಟಾಪ್ ಎಲ್ಲವನ್ನೂ ನದಿಗೆ ಬಿಸಾಡಿದ್ದಾನೆ. ಈ ಬಗ್ಗೆ ಆತನೇ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ವರದಿ ಆಗಿದೆ.
ಸದ್ಯ ತಾಂತ್ರಿಕ ಸಾಕ್ಷ್ಯಗಳನ್ನು ಸಿಐಡಿ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ನದಿಗೆ ಬಿಸಾಡಿದಾಗ ಕನ್ನಾಳೆ ಎಲ್ಲಿದ್ದ? ಆತನ ಮೊಬೈಲ್ ಟಾವರ್ ಲೊಕೇಷನ್ ಮಾಹಿತಿ ಸೇರಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ. ಕೆಪಿಎಸ್ ಸಿ ಅಕ್ರಮ ನಡೆಯಲು ಈತನ ಪಾತ್ರ ಪ್ರಮುಖವಾಗಿತ್ತು. ಈ ಕಾರಣದಿಂದ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದು ಗೊತ್ತಾಗಿದೆ.
ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಂತೆ ಪೋಸ್ ಕೊಡುವ ಕಾಂಗ್ರೆಸ್ ಸಚಿವರ ಅಸಲಿ ಮುಖವಾಡ ಕಳಚಿದೆ.
— Janata Dal Secular (@JanataDal_S) September 8, 2026
"ನನಗೂ ಆ ಕನ್ನಾಳೆಗೂ ಸಂಬಂಧವೇ ಇಲ್ಲ, ಆತ ಯಾರೆಂದೇ ಗೊತ್ತಿಲ್ಲ" ಎಂದು ಕ್ಯಾಮೆರಾ ಮುಂದೆ ನಾಟಕವಾಡಿದ್ದ ಸಚಿವ @eshwar_khandre ಅವರ ದಶಕಗಳ 'ಮಧುರ ಬಾಂಧವ್ಯ ಈಗ ಜಗಜ್ಜಾಹೀರಾಗಿದೆ.
ರಾಜ್ಯದ ಲಕ್ಷಾಂತರ ಬಡ, ಮಧ್ಯಮ ವರ್ಗದ ಯುವಜನತೆ ಹಗಲಿರುಳು… pic.twitter.com/1UqXKcGDDs
ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಂತೆ ಪೋಸ್ ಕೊಡುವ ಕಾಂಗ್ರೆಸ್ ಸಚಿವರ ಅಸಲಿ ಮುಖವಾಡ ಕಳಚಿದೆ.
"ನನಗೂ ಆ ಕನ್ನಾಳೆಗೂ ಸಂಬಂಧವೇ ಇಲ್ಲ, ಆತ ಯಾರೆಂದೇ ಗೊತ್ತಿಲ್ಲ" ಎಂದು ಕ್ಯಾಮೆರಾ ಮುಂದೆ ನಾಟಕವಾಡಿದ್ದ ಸಚಿವ @eshwar_khandre ಅವರ ದಶಕಗಳ 'ಮಧುರ ಬಾಂಧವ್ಯ ಈಗ ಜಗಜ್ಜಾಹೀರಾಗಿದೆ.
ರಾಜ್ಯದ ಲಕ್ಷಾಂತರ ಬಡ, ಮಧ್ಯಮ ವರ್ಗದ ಯುವಜನತೆ ಹಗಲಿರುಳು… pic.twitter.com/1UqXKcGDDs
ಕೆಲವು ವೇದಿಕೆಗಳಲ್ಲಿ ಕನ್ನಾಳೆ ಜೊತೆ ಖಂಡ್ರೆ!
ಇಂತಹ ವ್ಯಕ್ತಿ ಜೊತೆಗೆ ಸಚಿವ ಈಶ್ವರ್ ಖಂಡ್ರೆ ಕೆಲವು ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಚಿವರಾದಾಗ, ಮಗ ಸಂಸದನಾದಾಗ, ಇನ್ನಿತರ ಪ್ರಮುಖ ಕಾರ್ಯಕ್ರಮಗಳಲ್ಲಿ ಸಿಹಿ ತಿನಿಸಿ ಸಚಿವರೊಂದಿಗೆ ಕಾಣಿಸಿಕೊಂಡಿದ್ದಾನೆ. ಹಾಗಾದರೆ ಅಕ್ರಮ ರೂವಾರಿಗೂ ಕಿಂಗ್ ಪಿನ್ ಕನ್ನಾಳೆಗೂ ಸಚಿವರ ಮಧ್ಯೆ ಏನೋ ಸಂಬಂಧ ವಿದೆ. ಈ ಬಗ್ಗೆ ತನಿಖೆ ಮಾಡಿ, ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಸತ್ಯ ಜಗತ್ತಿಗೆ ಬಹಿರಂಗಪಡಿಸುವಂತೆ ಜೆಡಿಎಸ್ ಆಗ್ರಹಿಸಿದೆ.