ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲಿ ಮತದಾರ ಹೆಸರು ಪ್ರಕಟ: ಯಾರಿಗೆಲ್ಲ ನೋಟಿಸ್‌?

ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲಿ ಮತದಾರ ಹೆಸರು ಪ್ರಕಟ: ಯಾರಿಗೆಲ್ಲ ನೋಟಿಸ್‌?

ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲಿ ಮತದಾರ ಹೆಸರು ಪ್ರಕಟ: ಯಾರಿಗೆಲ್ಲ ನೋಟಿಸ್‌?

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ವಿವರ ತಾಳೆಯಾಗದ, ಮ್ಯಾಪ್‌ ಆಗದ ವರ್ಗದಲ್ಲಿ ನೋಟಿಸ್‌ಗಳನ್ನು ಜಾರಿಗೊಳಿಸಲಾದ 43.81 ಲಕ್ಷ ಮತದಾರರ ಹೆಸರು ಮತ್ತು ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

ಭಾರತೀಯ ಚುನಾವಣಾ ಆಯೋಗದ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ceo.karnataka.gov.in ವೆಬ್‌ಸೈಟ್‌ನಲ್ಲಿ ಈ ವಿವರಗಳಿವೆ. ಆಗಸ್ಟ್‌ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. 1.07 ಕೋಟಿ ಮತದಾರರ ಹೆಸರನ್ನು ಪಟ್ಟಿಯಿಂದ ಹೊರಗಿಡಲಾಗಿತ್ತು. ಮೃತಪಟ್ಟವರು, ಸ್ಥಳಾಂತರಗೊಂಡವರು, ಎರಡು ಕಡೆ ಮತ ಹೊಂದಿದವರು, ಹೆಸರು, ದಾಖಲೆಗಳು ಹೊಂದಾಣಿಕೆ ಆಗದವರೆಲ್ಲ (ಎಎಸ್‌ಡಿಡಿಒ) ಈ ಪಟ್ಟಿಯಲ್ಲಿದ್ದರು.

ಆನಂತರ 43.81 ಲಕ್ಷ ಮತದಾರರಿಗೆ ನೀಡಬೇಕಾದ ನೋಟಿಸ್‌ಗಳನ್ನು ಮತದಾರರ ನೋಂದಣಾಧಿಕಾರಿಗಳು ಸೃಜಿಸಿದ್ದರು. ಆಯಾ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತದಾರರಿಗೆ ನೋಟಿಸ್‌ ಜಾರಿ ಮಾಡುವ ಕೆಲಸವನ್ನು ಆರಂಭಿಸಿದ್ದರು. ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಬರುವಂತೆ ಮತದಾರರಿಗೆ ಸೂಚಿಸಿದ್ದರು. ಎಸ್ಐಆರ್ ಪ್ರಕ್ರಿಯೆಯಲ್ಲಿ ನೋಟಿಸ್ ಪಡೆಯುತ್ತಿರುವ ಮತದಾರರ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂಬ ಒತ್ತಾಯ ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಕೇಳಿಬಂದಿತ್ತು.

ಆಯೋಗದ ವೆಬ್‌ಸೈಟ್‌ನಲ್ಲಿ, ತಾವು ವಾಸವಿರುವ ವಿಧಾನಸಭಾ ಕ್ಷೇತ್ರದ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ, ನೋಟಿಸ್‌ ಜಾರಿ ಮಾಡಲಾದವರ ವಿಭಾಗವಾರು ವಿವರ ಸಿಗುತ್ತದೆ.

ನೋಟಿಸ್‌ ನೀಡುವ ಪ್ರಕ್ರಿಯೆಯನ್ನು ಸೆಪ್ಟೆಂಬರ್‌ 3ರಂದು ಆರಂಭಿಸಲಾಗಿದ್ದು, ಅಕ್ಟೋಬರ್‌ 12ರವರೆಗೆ ಕಾಲಾವಕಾಶವಿದೆ. ನಂತರ ನೋಟಿಸ್ ಪಡೆದ ವ್ಯಕ್ತಿಯೇ ನಿಗದಿತ ದಿನದಂದು ಇಆರ್‌ಒ/ಎಇಆರ್‌ಒಗಳ ಮುಂದೆ ವಿಚಾರಣೆಗೆ ಹಾಜರಾಗಬೇಕು. ಅಗತ್ಯವಾದ ದಾಖಲೆಗಳನ್ನು ಹಾಜರುಪಡಿಸಿ ಲೋಪಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

* ಹೆಸರು ಹೊಂದಾಣಿಕೆ ಆಗದಿರುವುದು

* ಹೆತ್ತವರ ಹೆಸರು ಹೊಂದಾಣಿಕೆ ಆಗದಿರುವುದು

* ಮತದಾರರು ಮತ್ತು ಅವರ ಹೆತ್ತವರ ನಡುವೆ ವಯಸ್ಸಿನ ಅಂತರವು 15 ವರ್ಷಕ್ಕಿಂತ ಕಡಿಮೆ ಇರುವುದು

* ಮತದಾರರು ಮತ್ತು ಅವರ ಹೆತ್ತವರ ನಡುವೆ ವಯಸ್ಸಿನ ಅಂತರವು 50 ವರ್ಷಕ್ಕಿಂತ ಅಧಿಕ ಇರುವುದು

* ಹೆತ್ತವರ ಬದಲು ತಾತ ಅಜ್ಜಿಯ ವಿವರ ನೀಡಿದವರಲ್ಲಿ ಅವರ ವಯಸ್ಸಿನ ಅಂತರವು 40 ವರ್ಷಕ್ಕಿಂತ ಕಡಿಮೆ ಇರುವುದು

* ಒಡಹುಟ್ಟಿದವರ ನಡುವಿನ ಅಂತರವು 9 ತಿಂಗಳಿಗಿಂತ ಕಡಿಮೆ ಇರುವುದು * ಎಸ್ಐಆರ್‌ನಲ್ಲಿ ಮ್ಯಾಪಿಂಗ್‌ ಆಗದವರು

ಮ್ಯಾಪಿಂಗ್ ಆಗದವರೇ ಹೆಚ್ಚು

ಬಿಬಿಎಂಪಿ ಉತ್ತರ ದಕ್ಷಿಣ ಮತ್ತು ಕೇಂದ್ರಗಳ ವ್ಯಾಪ್ತಿಯಲ್ಲಿ ಮ್ಯಾಪಿಂಗ್‌ ಆಗದವರ ಸಂಖ್ಯೆಯೇ ಅಧಿಕವಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹೆಸರು ಹೊಂದಾಣಿಕೆ ಹೆತ್ತವರ ಹೊಂದಾಣಿಕೆ ಆಗದಿರುವುದೂ ಸೇರಿದಂತೆ ಉಳಿದ ಸಮಸ್ಯೆಗಳಿವೆ. ಅಲ್ಲದೆ ಬೆಂಗಳೂರು ನಗರದಲ್ಲಿ ಸುಮಾರು ಶೇ 35ರಷ್ಟು ಮತದಾರರು ನೋಟಿಸ್‌ ಪಟ್ಟಿಯಲ್ಲಿದ್ದರೆ ಉಳಿದ ಜಿಲ್ಲೆಗಳಲ್ಲಿ ಶೇ 3ರಿಂದ 5ರಷ್ಟು ಮಂದಿ ಇದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ