IAS Posting: ಉಪವಿಭಾಗಾಧಿಕಾರಿಗಳಾಗಿ 7 ಐಎಎಸ್ ಅಧಿಕಾರಿಗಳ ನೇಮಕ, ಯಾರು ಎಲ್ಲಿಗೆ

IAS Posting: ಉಪವಿಭಾಗಾಧಿಕಾರಿಗಳಾಗಿ 7 ಐಎಎಸ್ ಅಧಿಕಾರಿಗಳ ನೇಮಕ, ಯಾರು ಎಲ್ಲಿಗೆ

IAS Posting: ಉಪವಿಭಾಗಾಧಿಕಾರಿಗಳಾಗಿ 7 ಐಎಎಸ್ ಅಧಿಕಾರಿಗಳ ನೇಮಕ, ಯಾರು ಎಲ್ಲಿಗೆ

ಬೆಂಗಳೂರು: ಕರ್ನಾಟಕ ಸರ್ಕಾರವು 2024ನೇ ಬ್ಯಾಚ್‌ನ ಐಎಎಸ್ ಅಧಿಕಾರಿಗಳಿಗೆ ವಿವಿಧ ಉಪ ವಿಭಾಗಗಳ ಉಪವಿಭಾಗಾಧಿಕಾರಿ ಹುದ್ದೆಗೆ ನೇಮಕ ಮಾಡಿದೆ.

ಪುರುರಾಜ್‌ ಸಿಂಗ್‌ ಸೋಲಂಕಿ ಅವರಿಗೆ ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಿದೆ. ರಿತ್ವಿಕ್‌ ವರ್ಮಾ ಅವರನ್ನು ಕಲಬುರಗಿ ಉಪ ವಿಭಾಗ, ಝುಫಿಷನ್‌ ಹಕ್‌ ಅವರನ್ನು ವಿಜಯಪುರ ಉಪವಿಭಾದಿಕಾರಿ, ಅಭಿನವ್‌ ಜೈನ್‌ ಅವರನ್ನು ಬೀದರ್ ಉಪವಿಭಾಗ, ಖೋಡೆ ಸಮೀರ್‌ ಪ್ರಕಾಶ್‌ ಅವನರನ್ನು ಹಾವೇರಿ ಜಿಲ್ಲೆ ಸವಣೂರು ಉಪವಿಭಾಗಾಧಿಕಾರಿ ನೇಮಿಸಲಾಗಿದೆ.

ಆರ್‌.ರಮ್ಯಾ ಅವರನ್ನು ಕಾರವಾರ ಉಪವಿಭಾಗಾಧಿಕಾರಿ, ನಾಗೇಂದ್ರ ಬಾಬು ಕುಮಾರ್ ಅವರನ್ನು ರಾಯಚೂರು ಜಿಲ್ಲೆ ಲಿಂಗಸುಗೂರು ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಇದಲ್ಲದೇ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ಡಾ.ಕೆ.ರಾಕೇಶ್‌ ಕುಮಾರ್ ಅವರನ್ನು ಗ್ರೇಟರ್‌ ಬೆಂಗಳೂರು ಪ್ರದೇಶ ದಕ್ಷಿಣ ನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ನಗರಪಾಲಿಕೆ ಆಯುಕ್ತರಾಗಿದ್ದ ಕೆ.ಎನ್‌.ರಮೇಶ್‌ ಅವರನ್ನು ಜಿಬಿಎ ಆರೋಗ್ಯ ಹಾಗೂ ಶಿಕ್ಷಣ ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಹುದ್ದೆ ನಿರೀಕ್ಷಣೆಯಲ್ಲಿದ್ದ ಐಎಎಸ್ ಅಧಿಕಾರಿ ಸಿ.ಟಿ.ಶಿಲ್ಪ ನಾಗ್‌ ಅವರನ್ನು ಜಿಬಿಎ ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಹಾಗೂ ಸಮನ್ವಯ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಜಿಬಿಎ ವಿಶೇಷ ಆಯುಕ್ತರಾಗಿದ್ದ ಆರ್.ವೆಂಕಟಾಚಲಪತಿ ಅವರನ್ನು ಬೆಂಗಳೂರು ಕೇಂದ್ರ ಪಾಲಿಕೆಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ