ಅಕ್ರಮ ಚಟುವಟಿಕೆ: ಬಾರ್ ಮೇಲೆ ದಾಳಿ

ಅಕ್ರಮ ಚಟುವಟಿಕೆ: ಬಾರ್ ಮೇಲೆ ದಾಳಿ

ಅಕ್ರಮ ಚಟುವಟಿಕೆ: ಬಾರ್ ಮೇಲೆ ದಾಳಿ

ಸೋಲಾಪುರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಡ್ಯಾನ್ಸ್ ಬಾರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.

ವಿಶೇಷ ಪೊಲೀಸ್‌ ತಂಡವು ಭಾನುವಾರ ತಡರಾತ್ರಿ ಉತ್ತರ ಸೋಲಾಪುರ ತಾಲ್ಲೂಕಿನ ಭೋಗಾವ್ ಗ್ರಾಮದಲ್ಲಿರುವ ‘ಸುಖಸಾಗರ ಆರ್ಕೆಸ್ಟ್ರಾ ಬಾರ್’ ಮೇಲೆ ದಾಳಿ ನಡೆಸಿತು.

ದಾಳಿಯ ವೇಳೆ ಮಹಿಳೆಯರು ಅಶ್ಲೀಲ ಉಡುಪು ಧರಿಸಿ ಹಿಂದಿ ಮತ್ತು ಮರಾಠಿ ಹಾಡುಗಳಿಗೆ ನೃತ್ಯ ಮಾಡುತ್ತಿರುವುದು ಹಾಗೂ ಗ್ರಾಹಕರು ಅವರ ಮೇಲೆ ನೋಟುಗಳನ್ನು ಎರಚುತ್ತಿರುವುದು ಪತ್ತೆಯಾಯಿತು.

ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ 15 ಮಹಿಳೆಯರು ಮತ್ತು ಗ್ರಾಹಕರನ್ನು ವಿಚಾರಣೆ ನಡೆಸಿ ಅವರ ಹೆಸರು, ವಿಳಾಸಗಳನ್ನು ದಾಖಲಿಸಲಾಯಿತು. ಸ್ಥಳದಿಂದ ನಗದು ಹಣ, ಮೊಬೈಲ್ ಹ್ಯಾಂಡ್‌ಸೆಟ್‌ಗಳು ಸೇರಿದಂತೆ ಒಟ್ಟು ₹28.25 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್‌ ಮಾಲೀಕ, ವ್ಯವಸ್ಥಾಪಕ ಹಾಗೂ ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ