Google Office: ಮೊದಲ ಬಾರಿ ತಾಯಿಯನ್ನು ಕಚೇರಿಗೆ ಕರೆದುಕೊಂಡು ಹೋದ ಮಗಳು; ಮುದ್ದಾದ ವಿಡಿಯೋ ವೈರಲ್!

Google Office: ಮೊದಲ ಬಾರಿ ತಾಯಿಯನ್ನು ಕಚೇರಿಗೆ ಕರೆದುಕೊಂಡು ಹೋದ ಮಗಳು; ಮುದ್ದಾದ ವಿಡಿಯೋ ವೈರಲ್!

Google Office: ಮೊದಲ ಬಾರಿ ತಾಯಿಯನ್ನು ಕಚೇರಿಗೆ ಕರೆದುಕೊಂಡು ಹೋದ ಮಗಳು; ಮುದ್ದಾದ ವಿಡಿಯೋ ವೈರಲ್!

Google Office: ಎಲ್ಲ ತಂದೆ ತಾಯಂದಿರಿಗೂ ತಮ್ಮ ಮಕ್ಕಳು ಎಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುವ ವಾತಾವರಣ ಹೇಗೆ ಇರುತ್ತದೆ, ಕೆಲಸದ ಜಾಗವನ್ನು ನೋಡುವ ಅವಕಾಶ ಸಿಗುತ್ತದೆಯೇ ಎನ್ನುವ ಕುತೂಹಲವಿರುತ್ತದೆ. ಅರ್ಪಿತಾ ಎನ್ನುವ ಯುವತಿ ಅವರ ತಾಯಿಯ ಕನಸನ್ನು ನನಸು ಮಾಡಿದ್ದಾರೆ. Google ನಲ್ಲಿ ತಮ್ಮ ಕಚೇರಿಗೆ ಮೊದಲ ಬಾರಿ ಅವರ ತಾಯಿಯನ್ನು ಕರೆದುಕೊಂಡು ಹೋಗಿದ್ದು, ಕಚೇರಿಯ ವ್ಯವಸ್ಥೆ ಹೇಗಿರುತ್ತದೆ ಎನ್ನುವುದನ್ನು ಯುವತಿ ತೋರಿಸಿದ್ದಾರೆ. ಈ ಸಮಯದಲ್ಲಿ ಅರ್ಪಿತಾ ಅವರು ತಮ್ಮ ತಾಯಿಯೊಂದಿಗೆ ಊಟ ಮಾಡಿ ಕೆಫೆಟೇರಿ ಸುತ್ತಾಡಿಸಿದ್ದಾರೆ. ಈ ಮುದ್ದಾದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಂದೆ - ತಾಯಿಗೆ ಮಕ್ಕಳು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಕುತೂಹಲವಿರುತ್ತದೆ. ಅಲ್ಲದೆ ದೊಡ್ಡ ದೊಡ್ಡ ಕಂಪನಿಗಳು ಹೇಗೆ ಕೆಲಸ ಮಾಡುತ್ತವೆ. ಅದರ ವಿಶೇಷವೇನು ಎನ್ನುವ ಕುತೂಹಲವೂ ಇರುತ್ತದೆ. ಆದರೆ ಮೊದಲ ಬಾರಿಗೆ ತಮ್ಮ ಕೆಲಸದ ಸ್ಥಳವನ್ನು ನೋಡುವುದು ಆ ಕ್ಷಣವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ. Instagramನಲ್ಲಿ ಅರ್ಪಿತಾ ಮೊಹಂತಿ ಎನ್ನುವವರು ಮೊದಲ ಬಾರಿ ತಮ್ಮ ತಾಯಿಯನ್ನು Google ನಲ್ಲಿ ತಾವು ಕೆಲಸ ಮಾಡುವ ಕಚೇರಿಗೆ ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಈ ವೀಡಿಯೊವನ್ನು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅರ್ಪಿತಾ ಅವರು ನಿಮ್ಮ ಹೆತ್ತವರನ್ನು ಮೊದಲ ಬಾರಿಗೆ ನಿಮ್ಮ ಕಚೇರಿಗೆ ಕರೆದೊಯ್ಯುವುದು ಯಾವಾಗಲೂ ವಿಶೇಷವಾಗಿರುತ್ತದೆ ಅಂತ ಎಂದು ಬರೆದುಕೊಂಡಿದ್ದಾರೆ. ಅರ್ಪಿತಾ ಅವರು, ತಮ್ಮ ತಾಯಿಯನ್ನು ತಾವು ಕೆಲಸದ ಸ್ಥಳದ ಸುತ್ತಲೂ ಕರೆದೊಯ್ದಿದ್ದು, ಅವರು ಕೆಲಸ ಮಾಡುವ ಸ್ಥಳದ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಭೇಟಿಯ ಸಮಯದಲ್ಲಿ ಅರ್ಪಿತಾ ಅವರು ತಮ್ಮ ತಾಯಿಯೊಂದಿಗೆ ಊಟ ಮಾಡಿ ಕೆಫೆಟೇರಿಯಾಕ್ಕೆ ಕರೆದೊಯ್ದಿದ್ದಾರೆ. ಅವರು ಕಚೇರಿಯೊಳಗೆ ತಮ್ಮ ತಾಯಿಯೊಂದಿಗೆ ಫೋಟೋಗಳನ್ನು ಸಹ ಕ್ಲಿಕ್ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಸುಂದರ ಕ್ಷಣಗಳ ವಿಡಿಯೋವನ್ನು ಸಹ ಮಾಡಿಕೊಂಡಿದ್ದಾರೆ. ಈ ಭೇಟಿಯು ಅರ್ಪಿತಾಗೆ ತಾವು ಕೆಲಸ ಮಾಡುವ ಸ್ಥಳದಲ್ಲಿ ತಮ್ಮ ತಾಯಿಯೊಂದಿಗೆ ಸಮಯ ಕಳೆಯಲು ಮತ್ತು ಕಚೇರಿಯ ಸುತ್ತಲೂ ತೋರಿಸಲು ಅವಕಾಶ ಮಾಡಿಕೊಟ್ಟಿತು.

Google Office: ತಾಯಿಯೊಂದಿಗೆ ಆಫೀಸ್ ಟೂರ್: ಯುವತಿ ಹೇಳಿದ್ದೇನು ?

ನಿಮ್ಮ ಹೆತ್ತವರನ್ನು ಮೊದಲ ಬಾರಿಗೆ ನಿಮ್ಮ ಕಚೇರಿಗೆ ಕರೆದೊಯ್ಯುವುದು ಯಾವಾಗಲೂ ವಿಶೇಷ ❤ ಅಂತ ಅರ್ಪಿತಾ ಅವರು ಬರೆದುಕೊಂಡಿದ್ದಾರೆ. ಮೊದಲ ಬಾರಿಗೆ ನಿಮ್ಮ ಪೋಷಕರನ್ನು ನೀವು ಕೆಲಸ ಮಾಡುವ ಆಫೀಸ್‌ಗೆ ಕರೆದುಕೊಂಡು ಹೋಗುವುದು ಯಾವಾಗಲೂ ವಿಶೇಷ ಕ್ಷಣವೇ ಸರಿ ಅಂತ ಅವರು ಹೇಳಿಕೊಂಡಿದ್ದು. ನನ್ನ ಅಮ್ಮನನ್ನು ಮೊದಲ ಬಾರಿಗೆ Google ಆಫೀಸ್‌ಗೆ ಕರೆದುಕೊಂಡು ಹೋದ ಕ್ಷಣ.

ಅವರನ್ನು ಹೆಮ್ಮೆಪಡಿಸುವ ಮಗಳಾಗಿ ಈ ಕ್ಷಣ ನನಗೆ ತುಂಬಾ ವಿಶೇಷವಾಗಿತ್ತು. ಕೆಲಸ, ಜೀವನ, ಕುಟುಂಬದ ಜೊತೆಗಿನ ಈ ಸಣ್ಣ ಸಣ್ಣ ಕ್ಷಣಗಳೇ ದೊಡ್ಡ ಸಂತೋಷ ನೀಡುತ್ತವೆ. ❤ #Google #LifeAtGoogle #OfficeBlogs ಎಂದು ಅವರು ತಮ್ಮ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮುದ್ದಾದ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

View this post on Instagram

A post shared by Arpita Mohanty | Working Mom stories ❤️ (@aapysayshello)

A post shared by Arpita Mohanty | Working Mom stories ❤️ (@aapysayshello)

google viral video instagram

google viral video instagram

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ