
ಟೆಸ್ಟ್: ಕುಶಾಗ್ರ, ತನುಷ್ ಜೊತೆಯಾಟದ ಆಸರೆ
ಪುದುಚೇರಿ(ಪಿಟಿಐ): ಗಾಯದಿಂದ ಚೇತರಿಸಿಕೊಂಡ ನಂತರ ಮೊದಲ ಬಾರಿ ಕಣಕ್ಕಿಳಿದ ಸಾಯಿ ಸುದರ್ಶನ್ ಆಸ್ಟ್ರೇಲಿಯಾ ಎ ವಿರುದ್ಧದ ‘ಟೆಸ್ಟ್’ನಲ್ಲಿ ಅರ್ಧಶತಕ ಸಿಡಿಸಿದರು. ತನುಷ್ ಕೋಟ್ಯಾನ್ ಮತ್ತು ಕುಮಾರ ಕುಶಾಗ್ರ ಅವರೂ ತಲಾ ಒಂದು ಅರ್ಧಶತಕ ಹೊಡೆದು ಭಾರತ ಎ ತಂಡವು ಮೊದಲ ದಿನದಾಟದಲ್ಲಿ ಉತ್ತಮ ಮೊತ್ತ ಪೇರಿಸಲು ಕಾರಣರಾದರು.
ಮಂಗಳವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಎ ತಂಡವು 89 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 257 ರನ್ ಗಳಿಸಿತು. ತನುಷ್ (ಬ್ಯಾಟಿಂಗ್ 68) ಮತ್ತು ಶಮ್ಸ್ ಮುಲಾನಿ (ಬ್ಯಾಟಿಂಗ್) ಕ್ರೀಸ್‌ನಲ್ಲಿದ್ದಾರೆ.
ಒಂದು ತಿಂಗಳಿನಿಂದ ಕ್ರಿಕೆಟ್ ಅಂಗಳದಿಂದ ದೂರವಿದ್ದ ಸಾಯಿ (57; 103ಎ, 4X3) ಅವರು ಅಮನ್ ಮೊಖಡೆ (6 ರನ್) ಅವರೊಂದಿಗೆ ಇನಿಂಗ್ಸ್ ಆರಂಭಿಸಿದರು. ಆದರೆ ಕೋರಿ ರೋಚಿ ರಾಚಿಸಿಯಿಲಿ (72ಕ್ಕೆ3) ಅವರ ಬೌಲಿಂಗ್ ಎದುರು ತಂಡವು 97 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಅದರಲ್ಲಿ ನಾಯಕ ದೇವದತ್ತ ಪಡಿಕ್ಕಲ್ (3 ರನ್) ಅವರು ಟಾಡ್ ಮರ್ಫಿ ಬೌಲಿಂಗ್‌ನಲ್ಲಿ ಔಟಾದರು.
ಈ ಹೊತ್ತಿನಲ್ಲಿ ಜೊತೆಗೂಡಿದ ತನುಷ್ ಮತ್ತು ಕುಶಾಗ್ರ ಅವರು ಆರನೇ ವಿಕೆಟ್ ಜತೆಯಾಟದಲ್ಲಿ 266 ಎಸೆತಗಳಲ್ಲಿ 138 ರನ್ ಸೇರಿಸಿದರು. ಇದರಿಂದಾಗಿ ತಂಡವು ಚೇತರಿಸಿಕೊಂಡಿತು. ಆದರೆ ಕುಶಾಗ್ರ ಅವರು ಶತಕದ ಸನಿಹದಲ್ಲಿ ಗಾಯಗೊಂಡು ನಿವೃತ್ತರಾದರು.