
Daily Horoscope: ಸರ್ವಾರ್ಥಸಿದ್ದಿ ಯೋಗದಿಂದ ಈ ರಾಶಿಯವರಿಗೆ ಅದೃಷ್ಟದ ದಿನ; ಕೆಲಸ ಕಾರ್ಯದಲ್ಲಿ ಸಿಗುವುದು ಯಶಸ್ಸು
Daily Horoscope: ಇಂದು ಸೋಮವಾರ (ಸೆಪ್ಟಂಬರ್ 7) ಕೃಷ್ಣ ಪಕ್ಷ ಏಕಾದಶಿ ತಿಥಿ. ಇಡೀ ದಿನ ಪುನರ್ವಸು ನಕ್ಷತ್ರ ಇರುವುದು. ಇಂದು ಸರ್ವಾರ್ಥಸಿದ್ದಿ ಯೋಗವೂ ಇರುವುದು. ಇವತ್ತಿನ ದಿನ ಯಾವ ರಾಶಿಯವರಿಗೆ ಅದೃಷ್ಟ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ನಿಮಗೆ ವಿಶೇಷ ದಿನವಾಗಲಿದೆ. ಸಂಗಾತಿಯ ಕೆಲಸದಲ್ಲಿ ಸಹಾಯ ಮಾಡುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಕೇಳುವಿರಿ. ಕೆಲಸದಲ್ಲಿ ಹೆಚ್ಚುವರಿ ಶ್ರಮ ಹಾಕಬೇಕಾಗಬಹುದು. ನಿಮ್ಮ ನೇರ ನುಡಿಯ ಸ್ವಭಾವದಿಂದ ಜನ ನಿಮ್ಮತ್ತ ಪ್ರಭಾವಿತರಾಗುವರು. ವ್ಯವಹಾರವು ಸಾಮಾನ್ಯಕ್ಕಿಂತ ಉತ್ತಮವಾಗಿ ನಡೆಯುವುದು.
ಮನೆ ಸಂತೋಷದಿಂದ ತುಂಬಿರುವುದು. ಅನೇಕ ಸವಾಲುಗಳನ್ನು ಎದುರಿಸುವಿರಿ. ಹೊಸ ಉದ್ಯಮವನ್ನು ಪ್ರಾರಂಭಿಸಬಹುದು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಬಹುದು. ಪ್ರೀತಿಪಾತ್ರರೊಂದಿಗೆ ಮಾತನಾಡುವಾಗ ನಿಮ್ಮ ಕೋಪವನ್ನು ನಿಯಂತ್ರಿಸಿ.
ಅದೃಷ್ಟದ ದಿನವಾಗಿರಲಿದೆ. ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಿದರೆ ಲಾಭವಾಗುವುದು. ಪ್ರತಿಯೊಂದು ನಿರ್ಧಾರವನ್ನು ಚಿಂತನಶೀಲವಾಗಿ ತೆಗೆದುಕೊಳ್ಳಿ. ಕಠಿಣ ಪರಿಶ್ರಮದ ಮೂಲಕ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಕರ್ಕಾಟಕ ರಾಶಿ (Cancer)
ಇಂದು ದಿನ ಅನುಕೂಲಕರವಾಗಿರುವುದು. ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗದ ಆಫರ್ ಸಿಗುವುದು. ಆಸ್ತಿ ಖರೀದಿ ಬಗ್ಗೆ ನಿರ್ಧಾರ ಮಾಡುವಿರಿ. . ಕ್ರೀಡೆಗಳಲ್ಲಿ ತೊಡಗಿರುವವರಿಗೆ ದಿನ ಉತ್ತಮವಾಗಿರುವುದು. ವೈವಾಹಿಕ ಜೀವನ ಸಂತೋಷವಾಗಿರುವುದು.
ನಿಮ್ಮ ಪಾಲಿನ ಸುವರ್ಣ ದಿನವಾಗಿರಲಿದೆ. ಹಳೆ ಸಮಸ್ಯೆಯಿಂದ ಮುಕ್ತಿ ಸಿಗುವುದು. ನಿರ್ಧಾರಗಳನ್ನು ಬುದ್ದಿವಂತಿಕೆಯಿಂದ ತೆಗೆದುಕೊಳ್ಳಿ. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಆರ್ಥಿಕ ಪರಿಸ್ಥಿತಿ ಸದೃಢವಾಗಿರುವುದು. ವಿದ್ಯಾರ್ಥಿಗಳಿಗೂ ದಿನ ಉತ್ತಮ ದಿನವಾಗಿರುವುದು.
ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಿರಿ.ಈ ಮೂಲಕ ಎದುರಾಗಬಹುದಾದ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವಿರಿ. ಕೌಟುಂಬಿಕ ಘರ್ಷಣೆಗಳಿಂದ ಪರಿಹಾರ ಸಿಗುವುದು. ಸಮಾಜದಲ್ಲಿ ಹೊಸ ಜನರನ್ನು ಭೇಟಿಯಾಗುವಿರಿ. ಭವಿಷ್ಯದಲ್ಲಿ ಕೆಲವು ಪ್ರಯೋಜನಗಳಾಗುವುದು.
ಹೊಸ ಉತ್ಸಾಹದಿಂದ ತುಂಬಿದ ದಿನವಾಗಿರುವುದು. ಅನಗತ್ಯವಾಗಿ ಸಮಯ ವ್ಯರ್ಥ ಮಾಡಬೇಡಿ. ಕೆಲಸದ ಹೊರೆ ಹೆಚ್ಚಾಗಿರುವುದರಿಂದ, ಮಾನಸಿಕ ಒತ್ತಡ ಉಂಟಾಗುವುದು. ತಾಳ್ಮೆಯಿಂದಿದ್ದರೆ ಒಳ್ಳೆಯದು. ಸಂಗಾತಿಯ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಯಶ್ವಿಯಾಗುವಿರಿ.
ವೃಶ್ಚಿಕ ರಾಶಿ (Scorpio)
ಇಂದು ನಿಮಗೆ ದಿನ ಅನುಕೂಲಕರವಾಗಿರುವುದು. ದಿನವಿಡೀ ಬೇರೆ ಬೇರೆ ಕೆಲಸ ಮಾಡುವುದರಲ್ಲಿ ನಿರತರಾಗಿರುವಿರಿ. ವ್ಯವಹಾರವನ್ನು ವಿಸ್ತರಿಸಲು ಅನುಭವಿ ಜನರ ಸಲಹೆ ಬಹಳ ಮುಖ್ಯವಾಗಿರುವುದು. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಬಾಕಿ ಇರುವ ಕೆಲಸ ಪೂರ್ಣವಾಗುವುದು. ಹೊಸ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುವಿರಿ.
ಧನು ರಾಶಿ (Sagittarius)
ಇಂದು ದಿನ ಉತ್ತಮವಾಗಿರುವುದು. ನಕಾರಾತ್ಮಕ ಜನರಿಂದ ದೂರವಿರಬೇಕು. ನಿಮ್ಮ ಸುತ್ತಮುತ್ತಲಿನ ಮೇಲೆ ನಿಗಾ ಇರಿಸಿ. ಯೋಜಿತ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಕೆಲಸಗಳು ವೇಗವಾಗಿ ಪ್ರಗತಿಯಾಗುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು.
ಅಡೆತಡೆಯಿಲ್ಲದೆ ಕೆಲಸಗಳು ಪೂರ್ಣಗೊಳ್ಳುವುದು. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ಅವಕಾಶ ಸಿಗುವುದು. ಬ್ಯಾಂಕಿಂಗ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರು ಹೆಚ್ಚು ಶ್ರಮಿಸಬೇಕಾಗಬಹುದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶ ಸಿಗುವುದು.
ಕುಟುಂಬ ಜೀವನವು ಸಂತೋಷದಿಂದ ತುಂಬಿರುವುದು. ಸಕಾರಾತ್ಮಕ ಆಲೋಚನೆಗಳು ಬರುವುದು. ನಿಮ್ಮ ಮಾತಿಗೆ ಮನ್ನಣೆ ಸಿಗುವುದು. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಪ್ರೀತಿಪಾತ್ರರಿಗೆ ಒಳ್ಳೆಯ ದಿನವಾಗಿರುವುದು.
ಇಂದು ನಿಮಗೆ ಸಂತೋಷದ ದಿನವಾಗಿರುವುದು. ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುವಿರಿ. ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಬಗೆಹರಿಯುವುದು. ಹೆಚ್ಚು ಚೈತನ್ಯಶೀಲರಾಗುವಿರಿ. ದಿನ ಸಂತೋಷದಿಂದ ಕೂಡಿರುವುದು.