
ಕರ್ನಾಟಕದಲ್ಲಿ 3 ವರ್ಷದಲ್ಲಿ 887 ಲಂಚ ಪ್ರಕರಣಗಳು ದಾಖಲು
ಮಂಡ್ಯ: ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಲೋಕಾಯುಕ್ತದಲ್ಲಿ 887 ಲಂಚ ಪ್ರಕರಣಗಳು ದಾಖಲಾಗಿವೆ.
2023ರ ಜನವರಿ 1ರಿಂದ 2026ರ ಆಗಸ್ಟ್ 13ರವರೆಗೆ ದಾಖಲಾದ ಈ ಪ್ರಕರಣಗಳ ಪೈಕಿ 290 ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು, ಉಳಿದವು ತನಿಖಾ ಹಂತದಲ್ಲಿವೆ. ಒಟ್ಟು 1,156 ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ‘ಭ್ರಷ್ಟಾಚಾರ ತಡೆ ಕಾಯ್ದೆ’ ಅಡಿ ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕರ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟ ನೌಕರರನ್ನು ‘ರೆಡ್ ಹ್ಯಾಂಡ್’ ಆಗಿ ಹಿಡಿದಿದ್ದಾರೆ. ಸರ್ಕಾರಿ ಅಧಿಕಾರಿಗಳು ಖುದ್ದಾಗಿ, ಕೈಕೆಳಗಿನ ಸಿಬ್ಬಂದಿ ಮೂಲಕ ಹಾಗೂ ಫೋನ್ ಪೇ, ಗೂಗಲ್ ಪೇ ಮೂಲಕವೂ ಲಂಚ ಪಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಕಂಡುಬಂದಿದೆ.
ಲೋಕಾಯುಕ್ತದಲ್ಲಿ ದಾಖಲಾದ ಲಂಚ ಪ್ರಕರಣಗಳ ಕುರಿತು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರು ಸದನದಲ್ಲಿ ಪ್ರಶ್ನೆ ಕೇಳಿದ್ದರು. ಕಂದಾಯ ಇಲಾಖೆ 208, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 121, ಪೊಲೀಸ್ ಇಲಾಖೆ 105, ನಗರಾಭಿವೃದ್ಧಿ ಇಲಾಖೆ 98, ಇಂಧನ ಇಲಾಖೆಗೆ ಸಂಬಂಧಿಸಿದ ನೌಕರರ ವಿರುದ್ಧ 77 ಲಂಚ ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ, ಈ ಐದು ಇಲಾಖೆಗಳಲ್ಲೇ ಒಟ್ಟು 609 (ಶೇ 68.65) ಪ್ರಕರಣಗಳು ದಾಖಲಾಗಿವೆ.
ಕಂದಾಯ ಇಲಾಖೆಯ ಕಚೇರಿ ಗಳಲ್ಲಿ ಲಂಚ ನೀಡದೆ ಯಾವುದೇ ಕಡತ ಮುಂದಕ್ಕೆ ಹೋಗುವುದಿಲ್ಲ ಮತ್ತು ಕೆಲಸ ಆಗುವುದಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿವೆ. ಮ್ಯುಟೇಷನ್, ಸರ್ವೆಯಂತಹ ಕೆಲಸಗಳಿಗೆ ರೈತರು ಮತ್ತು ಸಾರ್ವಜನಿಕರಿಂದ ಸಾವಿರಾರು ರೂಪಾಯಿ ಲಂಚ ಪಡೆಯುವಾಗ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಕೆಎಎಸ್–27, ಗ್ರೂಪ್ ಎ–212, ಗ್ರೂಪ್ ಬಿ–376 ಸೇರಿದಂತೆ ಗ್ರೂಪ್ ‘ಸಿ’ ಮತ್ತು ‘ಡಿ’ ನೌಕರರು ಹಾಗೂ ಹೊರಗುತ್ತಿಗೆ ಸಿಬ್ಬಂದಿ ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಚುನಾಯಿತ ಜನಪ್ರತಿನಿಧಿಗಳು (ಗ್ರಾ.ಪಂ. ಮತ್ತು ಪಾಲಿಕೆ ಸದಸ್ಯರು) ಹಾಗೂ ಅಧಿಕಾರಿಗಳಿಗೆ ಸಹಕರಿಸುತ್ತಿದ್ದ ಖಾಸಗಿ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಲಂಚ ಪ್ರಕರಣ: ಟಾಪ್ 10 ಜಿಲ್ಲೆಗಳು
6;ಬೆಂಗಳೂರು ಗ್ರಾಮೀಣ;38
ಲಂಚಕ್ಕೆ ಬೇಡಿಕೆ ಇಡುವ ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಸಾರ್ವಜನಿಕರು ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ
ಬಿ.ವೀರಪ್ಪ, ಉಪಲೋಕಾಯುಕ್ತ–2