Coconut leaf straw : ಒಣಗಿ ಬಿದ್ದ ತೆಂಗಿನ ಗರಿಯಿಂದಲೇ ಸ್ಟ್ರಾ ತಯಾರಿಕೆ; ಕಸದಿಂದ ರಸ ತೆಗೆದ ಪ್ರಾಧ್ಯಾಪಕ

Coconut leaf straw : ಒಣಗಿ ಬಿದ್ದ ತೆಂಗಿನ ಗರಿಯಿಂದಲೇ ಸ್ಟ್ರಾ ತಯಾರಿಕೆ; ಕಸದಿಂದ ರಸ ತೆಗೆದ ಪ್ರಾಧ್ಯಾಪಕ

Coconut leaf straw : ಒಣಗಿ ಬಿದ್ದ ತೆಂಗಿನ ಗರಿಯಿಂದಲೇ ಸ್ಟ್ರಾ ತಯಾರಿಕೆ; ಕಸದಿಂದ ರಸ ತೆಗೆದ ಪ್ರಾಧ್ಯಾಪಕ

Coconut leaf straw : ನಾವು ಜ್ಯೂಸ್‌ ಕುಡಿಯುವಾಗ ಎಳನೀರು ಕುಡಿಯುವಾಗ ಸ್ಟ್ರಾ ಬೇಕೇ ಬೇಕು. ಕೆಲವೊಮ್ಮೆ ಹೊರಗೆ ಹೋದಾಗ ಮಕ್ಕಳಿಗೆ ನೀರು ಕುಡಿಸುವುದಕ್ಕೂ ಸ್ಟ್ರಾ ಬಳಸೋದಿದೆ. ಮೊದಲೆಲ್ಲಾ ಪ್ಲಾಸ್ಟಿಕ್‌ ಸ್ಟ್ರಾಗಳಿತ್ತು. ಆದರೆ ಈಗ ಸರ್ಕಾರ ಆ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ಗಳನ್ನು ಬ್ಯಾನ್‌ ಮಾಡಿದೆ. ಹೀಗಾಗಿ ಎಲ್ಲಾ ಕಡೆ ಪೇಪರ್‌ ಸ್ಟ್ರಾಗಳನ್ನೇ ಬಳಸೋದು. ಆದರೆ ಇದೀಗ ತೆಂಗಿನ ಗರಿಯಿಂದ ಸ್ಟ್ರಾ ತಯಾರಿಸುವ ಮೂಲಕ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಡಾ. ಸಾಜಿ ವರ್ಗೀಸ್ ಎಲ್ಲರ ಹುಬ್ಬೇರಿಸಿದ್ದಾರೆ.

Coconut leaf straw:ತೆಂಗಿನ ಗರಿಯಿಂದ ಸ್ಟ್ರಾ

ಬೆಂಗಳೂರಿನ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಗೆಯೇ ನಡೆದಾಡಿಕೊಂಡು ಹೋಗುವಾಗ ಸಾಜಿ ವರ್ಗೀಸ್ (Saji Varghese), ಅಲ್ಲೇ ಬಿದ್ದಿದ್ದ ಒಣಗಿದ ತೆಂಗಿನ ಗರಿಗಳು ಅವರ ಕಣ್ಣಿಗೆ ಬಿದ್ದಿವೆ. ಕೂಡಲೇ ಅವರಿಗೆ ಒಂದು ಐಡಿಯಾ ಹೊಳೆಯಿತು. ಅವರು ಆ ಒಣಗಿದ ತೆಂಗಿನ ಗರಿಗಳನ್ನು ಸೂಕ್ಷವಾಗಿ ಗಮನಿಸಿದರು. ಅದು ನೈಸರ್ಗಿಕವಾಗಿಯೇ ಸ್ಟ್ರಾ ಆಕಾರದಲ್ಲಿ ಸುರುಳಿ ಸುತ್ತಿಕೊಂಡಿತ್ತು. ಕೂಡಲೇ ಅವರ ತಲೆಗೆ ಹೊಳೆದದ್ದು ಕಸದಿಂದ ರಸ ಮಾಡುವ ಉಪಾಯ. ಅದನ್ನು ವ್ಯರ್ಥ ಅಂತ ಹೇಳಿ ಎಸೆಯುವ ಬದಲು ಅದರಿಂದಲೇ ಸ್ಟ್ರಾ ತಯಾರಿಸುವ ಬಗ್ಗೆ ಆಲೋಚನೆ ಮಾಡ್ತಾರೆ. ಅಂದ ಹಾಗೆ ಈ ಯೋಚನೆ, ಯೋಜನೆ ಶುರುವಾಗಿದ್ದು 2017 ರಲ್ಲಿ. ಅಂದರೆ ಈ ಪ್ಲಾಸ್ಟಿಕ್‌ ಸ್ಟ್ರಾ ಬ್ಯಾನ್‌ಗೂ ಮುಂಚೆಯೇ.

ಪ್ಲಾಸ್ಟಿಕ್‌ ಸ್ಟ್ರಾಗಳಿಗೆ ಪರ್ಯಾಯ

ಇದಾದ ನಂತರ ವರ್ಷಗಳ ಕಾಲ ಪ್ರಯೋಗಗಳು ನಡೆದವು. ಪರಿಣಾಮವಾಗಿ ನೈಸರ್ಗಿಕವಾಗಿ ಉದುರಿದ ತೆಂಗಿನ ಗರಿಗಳಿಂದ ಸ್ಟ್ರಾಗಳನ್ನು ತಯಾರಿಸಲಾಯಿತು. ಸಾಂಪ್ರದಾಯಿಕ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಸ್ಟ್ರಾಗಳಿಗೆ ಪರ್ಯಾಯವಾಗಿ ಈ ನಾಚ್ಯುರಲ್‌ ಸ್ಟ್ರಾವನ್ನು ವಿನ್ಯಾಸಗೊಳಿಸಲಾಯಿತು.

ಇದು ಪರಿಸರ ಸ್ನೇಹಿ ಸ್ಟ್ರಾ

ಈ ತೆಂಗಿನ ಗರಿಯಲ್ಲಿ ಒಂದು ಸಿಕ್ರೇಟ್‌ ಇದೆ. ತೆಂಗಿನ ಗರಿಗಳ ಮೇಲೆ ಎಪಿಕ್ಯುಟಿಕ್ಯುಲರ್ ಎನ್ನುವ ಮೇಣವಿದೆ. ಈ ನೈಸರ್ಗಿಕ ಮೇಣದ ಪದರವು ಗರಿಯನ್ನು ಜಲನಿರೋಧಕವಾಗಿಸಲು ಸಹಾಯ ಮಾಡುತ್ತದೆ. ಅದರ ಉಪಯುಕ್ತ ಗುಣಗಳನ್ನು ಉಳಿಸಿಕೊಂಡು ಸ್ಟ್ರಾದಲ್ಲಿ ಈ ವಸ್ತುವನ್ನು ಹೇಗೆ ಸಂಸ್ಕರಿಸಬಹುದು ಎನ್ನುವುದನ್ನು ಸಂಶೋಧನಾ ಟೀಂ ಅನ್ವೇಷಣೆ ಮಾಡಿತು. ಪರಿಣಾಮವಾಗಿ ತೆಂಗಿನ ಗರಿಯ ಸ್ಟ್ರಾ ನೈಸರ್ಗಿಕವಾಗಿ ವಾಟರ್‌ ಪ್ರೂಫ್‌ ಮೇಲ್ಮೈಯನ್ನು ಹೊಂದಿದ್ದು, ಶಿಲೀಂಧ್ರಗಳೂ ಇದನ್ನು ಆವರಿಸುವುದಿಲ್ಲ. ಕಂಪನಿಯ ಪ್ರಕಾರ, ಇದರ ಸ್ಟ್ರಾಗಳು ಬಿಸಿ ಅಥವಾ ತಂಪು ಪಾನೀಯಗಳಲ್ಲಿ ಹಾಕಿದಾಗಲೂ ಹಲವಾರು ಗಂಟೆಗಳವರೆಗೆ ಒದ್ದೆಯಾಗದೆ ಹಾಗೆಯೇ ಇರುವುದು.

ಎರಡು ವರ್ಷಗಳ ಪ್ರಯೋಗಗಳು

ಮೊದಲ ನೋಟದಲ್ಲಿ ಇದು ತುಂಬಾ ಸರಳ ಎನ್ನುವ ಹಾಗೆಯೇ ಇತ್ತು. ಆದರೆ ವಿಶ್ವಾಸಾರ್ಹ ಸ್ಟ್ರಾ ತಯಾರಿಸುವುದು ಅಂದುಕೊಂಡಷ್ಟು ಸರಳವಾಗಿರಲಿಲ್ಲ.

ನಿಧಾನವಾಗಿ ಅಭಿವೃದ್ಧಿಯಾಯಿತು ಯಂತ್ರ :

ವರ್ಗೀಸ್ ಅವರು ತೆಂಗಿನ ಗರಿಗಳನ್ನು ಸ್ವಚ್ಛಗೊಳಿಸುವುದು, ಸಂಸ್ಕರಿಸುವುದು, ಸುರುಳಿ ಸುತ್ತುವುದು ಅದಕ್ಕೆ ಸ್ಟ್ರಾ ಆಕಾರ ನೀಡುವ ಪ್ರಯೋಗಗಳನ್ನು ಮಾಡಿದರು. ನಂತರ ಅಂತಿಮವಾಗಿ ಈ ಕೆಲಸಗಳಿಗೆ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಲಾಯಿತು (Coconut leaf straw making machine). ತೆಂಗಿನ ಗರಿಯ ಸ್ಟ್ರಾಗಳನ್ನು ಸಂಸ್ಕರಿಸಲು ಮತ್ತು ಅದಕ್ಕೆ ಸ್ಟ್ರಾ ರೂಪ ನೀಡಲು ಯಂತ್ರಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸಿದ ಸಂಶೋಧನಾ ಯೋಜನೆಯನ್ನು ಕ್ರೈಸ್ಟ್ ವಿಶ್ವವಿದ್ಯಾಲಯದ (Christ University) 2017ರ ದಾಖಲೆಗಳು ಸಹ ತೋರಿಸುತ್ತವೆ. ಯೋಜನೆಯ ವರದಿಯ ಪ್ರಕಾರ, ಒಂದು ಒಣಗಿದ ತೆಂಗಿನ ಗರಿಯಿಂದ ಸುಮಾರು 150 ರಿಂದ 200 ಸ್ಟ್ರಾಗಳನ್ನು ತಯಾರಿಸಬಹುದು.

ಮಹಿಳೆಯರಿಗೆ ಉದ್ಯೋಗಾವಕಾಶ :

ಭಾರತದಲ್ಲಿ ಜುಲೈ 1, 2022 ರಿಂದ ಪ್ಲಾಸ್ಟಿಕ್ ಸ್ಟ್ರಾಗಳು ಸೇರಿದಂತೆ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್ (Single Use Plastic) ವಸ್ತುಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಹೀಗೆ ಪ್ಲಾಸ್ಟಿಕ್‌ ಬ್ಯಾನ್‌ ಮಾಡುವಾಗ ಅದಕ್ಕೆ ಪರ್ಯಾಯಗಳನ್ನು ಹುಡುಕುವುದು ಕೂಡಾ ಮುಖ್ಯವಾಗಿರುತ್ತದೆ. ಇಲ್ಲಿ ಹಸಿರು ಎಲೆಗಳನ್ನು ಕತ್ತರಿಸುವ ಬದಲು ನೈಸರ್ಗಿಕವಾಗಿ ಒಣಗಿ ಬಿದ್ದ ತೆಂಗಿನ ಗರಿಗಳನ್ನು ಸಂಗ್ರಹಿಸಿ ಸಂಸ್ಕರಿಸಿ ಅದರಿಂದ ಸ್ಟ್ರಾ ಮಾಡಲಾಗುತ್ತದೆ. ಇದು ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ 107 ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶವನ್ನು ನೀಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ