ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಜ್ಜಾದ ಸಿರಿಗೆರೆ: ಸಮಾರೋಪ ಸಮಾರಂಭದಲ್ಲಿ CM ಭಾಗಿ

ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಜ್ಜಾದ ಸಿರಿಗೆರೆ: ಸಮಾರೋಪ ಸಮಾರಂಭದಲ್ಲಿ CM ಭಾಗಿ

ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಜ್ಜಾದ ಸಿರಿಗೆರೆ: ಸಮಾರೋಪ ಸಮಾರಂಭದಲ್ಲಿ CM ಭಾಗಿ

ಸಿರಿಗೆರೆ: ತರಳಬಾಳು ಪೀಠದ 19ನೇ ಗುರುಗಳಾಗಿದ್ದ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 35ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಿರಿಗೆರೆ ಸಜ್ಜಾಗಿದೆ. ಸೆ. 22ರಿಂದ 24ರವರೆಗೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಕಾರ್ಯಕ್ರಮಕ್ಕಾಗಿ ಗುರುಶಾಂತೇಶ್ವರ ದಾಸೋಹ ಭವನದ ಬಳಿ ಬೃಹತ್‌ ಸಭಾ ಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಕೊನೆಯ ಹಂತದ ಸಿದ್ಧತೆಯಲ್ಲಿ ಕಾರ್ಯಕರ್ತರು, ಗ್ರಾಮಸ್ಥರು, ತರಳಬಾಳು ಸಂಸ್ಥೆಯ ಅಧಿಕಾರಿಗಳು ನಿರತರಾಗಿದ್ದಾರೆ. ಸೆ.24ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾಗಿಯಾಗಲಿದ್ದಾರೆ.

ಮಹಾಮಂಟಪದ ಒಳಗೆ 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದರ ಸನಿಹದಲ್ಲಿಯೇ ದಾಸೋಹಕ್ಕೆ ಸಿದ್ಧತೆಗಳನ್ನು ಮಾಡಲಾಗಿದೆ. ಭಕ್ತರು ಕುಳಿತು ಊಟ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಫೆ ಸೌಲಭ್ಯವೂ ಇದೆ. ಮಂಟಪದಿಂದ ಹೊರಗೆ ಕುಳಿತು ಕಾರ್ಯಕ್ರಮ ವೀಕ್ಷಿಸಲು ಅನುವಾಗುವಂತೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಮಂಟಪದ ಒಳಗೆ ಶರಣರ ಚಿತ್ರಗಳು, ಸಂದೇಶಗಳು, ಶಿವಕುಮಾರ ಶ್ರೀಗಳ ಉಕ್ತಿಗಳ ಫ್ಲೆಕ್ಸ್‌ ಅಳವಡಿಸಲಾಗಿದೆ. ಕೃಷಿಗೆ ಸಂಬಂಧಿಸಿದ ಪರಿಕರಗಳು ಹಾಗೂ ಮಾಹಿತಿ ಪ್ರದರ್ಶನಕ್ಕಾಗಿ ವಿಶೇಷ ಪೆಂಡಾಲ್‌ ಸಜ್ಜುಗೊಳಿಸಲಾಗಿದೆ.

ಮಠದ ಅಂಗಳದಲ್ಲಿರುವ ಶಿವಕುಮಾರ ಶ್ರೀಗಳ ಐಕ್ಯಮಂಟಪವನ್ನು ಆಲಂಕೃತಗೊಳಿಸಲಾಗಿದೆ. ಮಠದ ಅಂಗಳದ ತುಂಬೆಲ್ಲ ವಿದ್ಯುತ್‌ ಬೆಳಕಿನ ಚಿತ್ತಾರ ಮೂಡಿದೆ. ತರಳಬಾಳು ಮಠ, ಮಠದ ಕೇಂದ್ರ ಕಚೇರಿ, ಹಾಸ್ಟೆಲ್‌ಗಳು, ಶಾಲಾ ಕಾಲೇಜುಗಳು ಸೇರಿದಂತೆ ಸಿರಿಗೆರೆಯ ಪ್ರಮುಖ ರಸ್ತೆಗಳ ಉದ್ದಗಲಕ್ಕೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಎಲ್ಲೆಡೆ ಮಳೆರಾಯನ ಮುನಿಸಿನಿಂದ ರೈತರು ತತ್ತರಿಸಿದ್ದರೂ ಶ್ರದ್ಧಾಂಜಲಿ ಕಾರ್ಯಕ್ರಮದ ದಾಸೋಹಕ್ಕೆ ಭಕ್ತರು ಉದಾರವಾಗಿ ಕೊಡುಗೆ ನೀಡಿದ್ದಾರೆ. ಶಾಸಕ ಬಸವರಾಜು ಶಿವಗಂಗಾ ಅವರು 104 ಕ್ವಿಂಟಲ್‌ ಅಕ್ಕಿ ನೀಡಿದ್ದಾರೆ. ಹೊನ್ನಾಳಿ ಮತ್ತು ನ್ಯಾಮತಿ ಭಕ್ತರು 101 ಕ್ವಿಂಟಲ್‌ ಅಕ್ಕಿ ಕೊಡುಗೆ ಕೊಟ್ಟಿದ್ದಾರೆ. ಶಿಕಾರಿಪುರದ ಸಾಧು ಲಿಂಗಾಯತ ಸಂಘದ ಭಕ್ತರು 50 ಕ್ವಿಂಟಲ್‌ ಕಡಲೆಬೇಳೆ ಹಾಗೂ 50 ಕ್ವಿಂಟಲ್‌ ಕಡ್ಲೇಕಾಳು ಕೊಟ್ಟಿದ್ದಾರೆ. ದಾವಣಗೆರೆಯ ದಲ್ಲಾಳಿ ಮಂಡಿ ಸಂಘವು 10 ಕ್ವಿಂಟಲ್‌ ರವೆಯನ್ನು ಕಳುಹಿಸಿದೆ. ಅಣ್ಣಾಪುರ, ಹುಲ್ಲೂರು, ಸಿರಿಗೆರೆ, ಆಲೂರು, ಗುಂಡೇರಿ, ಸಿದ್ಧಾಪುರ, ಹೊನ್ನನಾಯಕನಹಳ್ಳಿ ಭಕ್ತರೂ ದಾಸೋಹಕ್ಕೆ ವಿವಿಧ ಸಾಮಗ್ರಿಗಳನ್ನು ಪೂರೈಸಿದ್ದಾರೆ. ದಾಸೋಹಕ್ಕೆ ನೆರವಾಗಲು ಚಿಕ್ಕಮಗಳೂರು ಶಾಸಕ ತಮ್ಮಯ್ಯ ಅವರು 10 ಟನ್‌ ಸೌದೆಯನ್ನು ಒದಗಿಸಿದ್ದಾರೆ. ಚನ್ನಗಿರಿಯ ತುಮ್‌ಕೋಸ್‌ ಸಂಸ್ಥೆಯು ಎಂದಿನಂತೆ ಈ ಬಾರಿಯೂ 1 ಲಕ್ಷ ಲಾಡು ಉಂಡೆಗಳನ್ನು ದಾಸೋಹಕ್ಕೆ ನೀಡಲಿದೆ.

ಮೂರು ದಿನಗಳ ಶ್ರದ್ಧಾಂಜಲಿ ಹಾಗೂ ದಾಸೋಹ ಕಾರ್ಯಕ್ರಮಕ್ಕಾಗಿ ವ್ಯವಸ್ಥಾಪಕ ಸಮಿತಿಯೊಂದನ್ನು ರಚಿಸಲಾಗಿದ್ದು, ಭಕ್ತರಿಗೆ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ