ಜಿಬಿಎ ಅಡಿಯ ನಗರ ಪಾಲಿಕೆಗಳಿಗೆ ಇಲ್ಲ ಅನುದಾನ: ಸರ್ಕಾರದ ವಿರುದ್ಧ ಆರ್. ಅಶೋಕ ಕಿಡಿ

ಜಿಬಿಎ ಅಡಿಯ ನಗರ ಪಾಲಿಕೆಗಳಿಗೆ ಇಲ್ಲ ಅನುದಾನ: ಸರ್ಕಾರದ ವಿರುದ್ಧ ಆರ್. ಅಶೋಕ ಕಿಡಿ

ಜಿಬಿಎ ಅಡಿಯ ನಗರ ಪಾಲಿಕೆಗಳಿಗೆ ಇಲ್ಲ ಅನುದಾನ: ಸರ್ಕಾರದ ವಿರುದ್ಧ ಆರ್. ಅಶೋಕ ಕಿಡಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ ನಗರ ಪಾಲಿಕೆಗಳಿಗೆ ಬಜೆಟ್‌ನಲ್ಲಿ ಘೋಷಿಸಿದ ಬಹುತೇಕ ಯೋಜನೆಗಳೆಲ್ಲ ಅನುಷ್ಠಾನವಾಗುವ ಹಂತದಲ್ಲೇ ಉಳಿದಿವೆ ಎಂಬ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿ ಉಲ್ಲೇಖಿಸಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಜಿಬಿಎ ಹೆಸರಲ್ಲಿ ಬೆಂಗಳೂರನ್ನು 5 ಭಾಗ ಮಾಡಿ ಬೊಕ್ಕಸ ಲೂಟಿ ಹೊಡೆದ ಕಾಂಗ್ರೆಸ್ ಸರ್ಕಾರ!. ಯೋಜನೆ ಇಲ್ಲ, ಅನುದಾನವೂ ಇಲ್ಲ, ಜನರ ತೆರಿಗೆ ಹಣವೆಲ್ಲ ಎಲ್ಲಿ ಹೋಯ್ತು ಮುಖ್ಯಮಂತ್ರಿಗಳೇ? ಎಂದು ಪ್ರಶ್ನಿಸಿದ್ದಾರೆ.

‘ಗ್ರೇಟರ್‌ ಬೆಂಗಳೂರು’ಎಂದು ಹೆಸರು ಬದಲಾಯಿಸಿ 5 ಪ್ರತ್ಯೇಕ ನಗರ ಪಾಲಿಕೆಗಳನ್ನಾಗಿ ಒಡೆದಿದ್ದೇ ನಿಮ್ಮ ಸಾಧನೆನಾ? ₹20,220.48 ಕೋಟಿ ಬಜೆಟ್ ಗಾತ್ರದ ಅಂಕಿ-ಅಂಶಗಳನ್ನು ಮಾಧ್ಯಮಗಳಲ್ಲಿ ತೋರಿಸಿ ಬೀಗುವ ನಿಮ್ಮ ಸರ್ಕಾರದ ಅಸಲಿ ಬಣ್ಣ ಸಾರ್ವಜನಿಕರ ಮುಂದೆ ಈಗ ಬೆತ್ತಲಾಗಿದೆ ಎಂದು ಟೀಕಿಸಿದ್ದಾರೆ.

ಈ ಅಂಕಿ-ಅಂಶಗಳೇ ನಿಮ್ಮ ಬ್ರಾಂಡ್ ಬೆಂಗಳೂರು ಎಷ್ಟು ಸುಳ್ಳು ಎನ್ನುವುದಲ್ಲೇ ಕನ್ನಡಿ ಹಿಡಿಯುತ್ತಿದೆ: ವರ್ಷ ಮುಗಿಯುತ್ತಾ ಬಂದರೂ 1 ರೂಪಾಯಿ ಅಭಿವೃದ್ಧಿ ಇಲ್ಲ: ವರ್ಷದ ಮೊದಲ 6 ತಿಂಗಳು ಸಿಬ್ಬಂದಿ, ಕಚೇರಿ, ಕಡತ ಹಂಚಿಕೆಯಲ್ಲೇ ವ್ಯರ್ಥ. ಉಳಿದ ಸಮಯದಲ್ಲಿ ಬಜೆಟ್ ಕ್ರಿಯಾ ಯೋಜನೆ, ಟೆಂಡರ್ ಪ್ರಕ್ರಿಯೆಯಲ್ಲೇ ಮುಕ್ತಾಯ. ಹಾಗಾದರೆ ಬೆಂಗಳೂರಿನ ಜನರಿಗೆ ಮೂಲಸೌಕರ್ಯ ಸಿಗುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ಖಾಲಿ ಖಜಾನೆ: ಸರ್ಕಾರದಿಂದ ಬರಬೇಕಾದ ಅನುದಾನ ಬಂದೇ ಇಲ್ಲ

ರಾಜ್ಯ ಸರ್ಕಾರದಿಂದ ನಿಗಮಗಳಿಗೆ ಬರಬೇಕಿದ್ದ ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯ ₹2,199.99 ಕೋಟಿ ಬಿಡುಗಡೆಯೇ ಆಗಿಲ್ಲ. ರಾಜ್ಯ ಹಣಕಾಸು ಆಯೋಗದ ₹250 ಕೋಟಿ ವಿಶೇಷ ಅನುದಾನವೂ ಸರ್ಕಾರದ ಕಾಗದದ ಮೇಲೆಯೇ ಉಳಿದಿದೆ ಎಂದೂ ಅವರು ಹೇಳಿದ್ದಾರೆ.

ನಿಗಮಗಳು ಕಂಗಾಲು: ಬಿ-ಸ್ಮೈಲ್‌ಗೆ ಲೂಟಿ ಮಾರ್ಗ

ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನೆಲ್ಲ ‘ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್’ (B-SMILE) ಕಂಪನಿಗೆ ವರ್ಗಾಯಿಸಿ, ನಿಗಮಗಳನ್ನು ಕೇವಲ ಕಸ ತೆಗೆಯುವ ಮತ್ತು ರಸ್ತೆ ಗುಂಡಿ ಮುಚ್ಚುವ ಪೌರಕಾರ್ಮಿಕರ ಮಟ್ಟಕ್ಕೆ ಇಳಿಸಿದ್ದೀರಿ. ಉದ್ಯಾನವನ, ಕೆರೆ ಅಭಿವೃದ್ಧಿಗೆ ಬಿಡಿಗಾಸೂ ನೀಡಿಲ್ಲ. ಬೆಂಗಳೂರಿನ ತೆರಿಗೆದಾರರ ಜೇಬಿನಿಂದ ಲೂಟಿ ಹೊಡೆಯುವುದು, ಗ್ರೇಟರ್‌ ಬೆಂಗಳೂರು ಹೆಸರಲ್ಲಿ ನಿಮ್ಮ ಜೇಬು ತುಂಬಿಸಿಕೊಳ್ಳುವುದು ಹಾಗೂ ಜನರಿಗೆ ಮಾತ್ರ ಧೂಳು, ಗುಂಡಿ, ನರಕಯಾತನೆ ಕೊಡುವುದೇ ನಿಮ್ಮ ‘ಬ್ರಾಂಡ್ ಬೆಂಗಳೂರು’ ಕಾನ್ಸೆಪ್ಟಾ? ಎಂದು ವ್ಯಂಗ್ಯ ಮಾಡಿದ್ದಾರೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ, ಕಮಿಷನ್ ದಂಧೆಗಾಗಿ ಯೋಜನೆಗಳ ಹಂಚಿಕೆ ನಾಟಕ ಬಿಟ್ಟು, ತಕ್ಷಣವೇ ಪಾಲಿಕೆಗಳಿಗೆ ಬರಬೇಕಾದ ₹2,199.99 ಕೋಟಿ ಅನುದಾನ ಬಿಡುಗಡೆ ಮಾಡಿ, ರಸ್ತೆ ಮೂಲಸೌಕರ್ಯ ದುರಸ್ತಿಗೆ ಕ್ರಮ ಕೈಗೊಳ್ಳಿ. ಇಲ್ಲವಾದರೆ ಬೆಂಗಳೂರಿನ ಆಕ್ರೋಶದ ಪ್ರತಿಭಟನೆ ನಿಮ್ಮ ಕಮಿಷನ್ ಸರ್ಕಾರವನ್ನು ಬೇರುಸಹಿತ ಕಿತ್ತೆಸೆಯಲಿದೆ ಎಂದು ಅಶೋಕ ಎಚ್ಚರಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ