
ಷಡಷ್ಟಕ ಯೋಗದಿಂದ ಹೆಚ್ಚುವುದು ಈ ರಾಶಿಯವರ ಆರ್ಥಿಕ ಸಂಕಷ್ಟ : ವೃತ್ತಿ ಜೀವನದಲ್ಲಿ ಏರುಪೇರು
Shadashtaka Yoga : ಸೆಪ್ಟೆಂಬರ್ 7 ರಂದು ಬುಧ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಸಂಚಾರ ಮಾಡುತ್ತಾನೆ. ಈ ಸಂಚಾರದ ಜೊತೆಗೆ, ಬುಧನು ರಾಹುವಿನೊಂದಿಗೆ ಷಡಾಷ್ಟಕ ಯೋಗವನ್ನು ರೂಪಿಸುತ್ತಾನೆ. ಈ ಸಮಯದಲ್ಲಿ ಬುಧನು ರಾಹುವಿನಿಂದ ಎಂಟನೇ ಮನೆಯಲ್ಲಿರುತ್ತಾನೆ. ರಾಹು ಬುಧನಿಂದ ಆರನೇ ಮನೆಯಲ್ಲಿರುತ್ತಾನೆ. ಜ್ಯೋತಿಷ್ಯದಲ್ಲಿ, ಷಡಾಷ್ಟಕ ಯೋಗವು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಈ ಯೋಗವು ಸೆಪ್ಟೆಂಬರ್ 26 ರವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರು ಕಷ್ಟಗಳನ್ನು ಎದುರಿಸಬೇಕಾಗಬಹುದು. ಏರಿಳಿತಗಳನ್ನು ಎದುರಿಸಬೇಕಾಗಬಹುದು.
ಷಡಾಷ್ಟಕ ಯೋಗದ ಸಮಯದಲ್ಲಿ, ಬುಧ ಗ್ರಹವು ಆರನೇ ಮನೆಯಲ್ಲಿರುತ್ತದೆ. ರಾಹು ನಿಮ್ಮ ಹನ್ನೊಂದನೇ ಮನೆಯಲ್ಲಿರುತ್ತಾನೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಬೇಕು. ಯಾರಿಗೂ ಸಾಲ ಕೊಡುವುದಕ್ಕೆ ಹೋಗಬೇಡಿ. ಹಣಕಾಸಿನ ವ್ಯವಹಾರ ಈ ಸಮಯದಲ್ಲಿ ಬೇಡವೇ ಬೇಡ. ಆತುರದ ನಿರ್ಧಾರಗಳನ್ನು ಮಾಡಿದರೆ ನಷ್ಟ ತಪ್ಪಿದ್ದಲ್ಲ. ಮಾತುಗಳಲ್ಲಿ ಬಹಳ ಎಚ್ಚರಿಕೆ ಇರಲಿ. ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕಾಗುವುದು. ಈ ರಾಶಿಯವರಿಗೆ ಹೊಟ್ಟೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವುದು. ಆರೋಗ್ಯದ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು. ಪರಿಹಾರವಾಗಿ, ನೀವು ಗಣೇಶನನ್ನು ಪೂಜಿಸಬೇಕು.
ಸೆಪ್ಟೆಂಬರ್ 7 ರಂದು ಬುಧ ಗ್ರಹವು ನಿಮ್ಮ ಹನ್ನೆರಡನೇ ಮನೆಗೆ ಸಾಗುತ್ತದೆ. ಆದ್ದರಿಂದ, ಷಡಾಷ್ಟಕ ಯೋಗದಿಂದಾಗಿ, ನಿಮ್ಮ ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಸರಿಯಾದ ಲೆಕ್ಕಾಚಾರದಲ್ಲಿ ಹೆಜ್ಜೆ ಇಡಬೇಕಾಗುವುದು. ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಪ್ರಯೋಜನವಾಗುವುದು. ಕೆಲಸ ಯಾವುದೇ ಇರಲಿ ಪ್ರತಿಯೊಂದನ್ನು ಗಂಭೀರವಾಗಿ ತೆಗೆದುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಇಮೇಜ್ ಹಾಳಾಗಬಹುದು. ತುಲಾ ರಾಶಿಯವರು ಪ್ರೇಮ ಸಂಬಂಧಗಳಲ್ಲಿಯೂ ಎಚ್ಚರಿಕೆಯಿಂದಿರ ಇರಬೇಕು. ತಪ್ಪು ತಿಳುವಳಿಕೆಗಳು , ಮನಸ್ತಾಪಗಳು ಮೂಡಿ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ಪರಿಹಾರವಾಗಿ, ನೀವು ಈ ಅವಧಿಯಲ್ಲಿ ಲಕ್ಷ್ಮೀ ದೇವಿಯನ್ನು ಪೂಜಿಸಬೇಕು.
Shadashtaka Yoga: ಮೀನ ರಾಶಿ (Pisces) :
ಷಡಾಷ್ಟಕ ಯೋಗದ ಸಮಯದಲ್ಲಿ ವೃತ್ತಿಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಉದ್ಯೋಗವನ್ನು ಹುಡುಕುತ್ತಿರುವವರು ತಮ್ಮ ಪ್ರಯತ್ನಗಳನ್ನು ಹೆಚ್ಚಿಸಿಕೊಳ್ಳಬೇಕು. ಸಮಯ ಮತ್ತು ಹಣ ಎರಡೂ ವ್ಯರ್ಥವಾಗಬಹುದು. ಕೆಟ್ಟ ಸಹವಾಸದಿಂದ ಆದಷ್ಟು ದೂರವಿರಿ. ಹಣವನ್ನು ಸಾಲ ಪಡೆದಿದ್ದರೆ ಸಾಲ ನೀಡಿದವರು ಹಣಕ್ಕಾಗಿ ಪೀಡಿಸಬಹುದು. ಹಣದ ಲೆಕ್ಕಾಚಾರ ಸರಿಯಾಗಿ ಇಲ್ಲದಿದ್ದರೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ತೊಂದರೆ ಎದುರಿಸಬೇಕಾಗಬಹುದು. ಬೆಲೆಬಾಳುವ ವಸ್ತುಗಳು ಕಳ್ಳತನವಾಗುವ ಸಾಧ್ಯತೆ ಇರುವುದರಿಂದ ಪ್ರಯಾಣದ ಸಮಯದಲ್ಲಿಯೂ ಎಚ್ಚರಿಕೆಯಿಂದ ಇರಬೇಕು. ಪರಿಹಾರವಾಗಿ, ಮೀನ ರಾಶಿಯವರು ಶಿವನನ್ನು ಪೂಜಿಸಬೇಕು.
ಇನ್ನು ಈ ಯೋಗ ಕೆಲವರು ರಾಶಿಯವರಿಗೆ ಶುಭ ಫಲವನ್ನು ಕೂಡಾ ನೀಡುವುದು.
ಕರ್ಕಾಟಕ ರಾಶಿ (Cancer):
ಕರ್ಕಾಟಕ ರಾಶಿಯವರಿಗೆ ಷಡಕ್ಷ ಯೋಗವು ಸಮೃದ್ಧಿ ಮತ್ತು ಯಶಸ್ಸನ್ನು ತಂದು ಕೊಡುವುದು. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಯಾಗುವುದು. ದೊಡ್ಡ ಹೂಡಿಕೆಗಳು ಗಮನಾರ್ಹ ಲಾಭವನ್ನು ನೀಡುವ ಸಾಧ್ಯತೆಯಿದೆ. ಕುಟುಂಬ ಸಂಬಂಧಗಳು ಸುಧಾರಿಸುವುದು. ನಿಮ್ಮ ಮನಸ್ಸು ಶಾಂತವಾಗಿರುವುದು. ನಿಮ್ಮ ಜೀವನವು ಸಕಾರಾತ್ಮಕ ದಿಕ್ಕಿನಲ್ಲಿಯೇ ಸಾಗುವುದು.
ಈ ಸಂಯೋಜನೆಯು ಕನ್ಯಾ ( virgo) ರಾಶಿಯವರಿಗೆ ಶುಭ ಫಲವನ್ನು ನೀಡುವುದು. ದೀರ್ಘಕಾಲದ ಪ್ರಯತ್ನಗಳು ಈಗ ಫಲ ನೀಡುವುದು. ಆರ್ಥಿಕ ಸಮೃದ್ಧಿಯ ಸಮಯ ಇದು. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯ. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆಗಳು ಬಗೆಹರಿಯುವುದು.
ಮಕರ ರಾಶಿ (Capricorn):
ಈ ಸಂಯೋಜನೆಯು ಮಕರ (capricorn) ರಾಶಿಯವರಿಗೆ ಪ್ರಯೋಜನಕಾರಿಯಾಗಿರುವುದು. ವ್ಯವಹಾರದಲ್ಲಿ ಲಾಭದ ಸಾಧ್ಯತೆ ಹೆಚ್ಚಿರುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವಿರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು, ಹಿರಿಯರಿಂದ ಸಲಹೆ ಪಡೆಯಿರಿ. ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳುವುದು.