ಮರಾಠರ ಸ್ಥಿತಿಗತಿ ಅಧ್ಯಯನಕ್ಕೆ ಡಿಜಿಟಲ್‌ ಸಮೀಕ್ಷೆ

ಮರಾಠರ ಸ್ಥಿತಿಗತಿ ಅಧ್ಯಯನಕ್ಕೆ ಡಿಜಿಟಲ್‌ ಸಮೀಕ್ಷೆ

ಮರಾಠರ ಸ್ಥಿತಿಗತಿ ಅಧ್ಯಯನಕ್ಕೆ ಡಿಜಿಟಲ್‌ ಸಮೀಕ್ಷೆ

ಬೀದರ್‌: ‘ರಾಜ್ಯದಲ್ಲಿ ಮರಾಠ ಸಮುದಾಯದವರ ಸ್ಥಿತಿಗತಿ ಅಧ್ಯಯನಕ್ಕೆ ನಿರ್ಧರಿಸಲಾಗಿದ್ದು, ಡಿಜಿಟಲ್‌ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಮರಾಠರ ಧರ್ಮಗುರು ದಾದಾ ಮಹಾರಾಜ ನಗರಕರ್ ತಿಳಿಸಿದರು.

ಮರಾಠರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ನಿಖರವಾಗಿ ತಿಳಿಯಲು ಡಿಜಿಟಲ್‌ ಸಮೀಕ್ಷೆ ನಡೆಸಲಾಗುವುದು. ಮೊಬೈಲ್‌ ಆ್ಯಪ್‌ ಮೂಲಕ ಈ ಕೆಲಸ ಆರಂಭಿಸಲಾಗಿದೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಸಮುದಾಯವನ್ನು ಸಂಘಟಿಸುವುದರ ಜೊತೆಗೆ ಅಶಕ್ತರು, ದುರ್ಬಲರನ್ನು ಗುರುತಿಸಿ, ಅರ್ಹರಿಗೆ ನೆರವು ಕಲ್ಪಿಸಿ ಮುಖ್ಯ ವಾಹಿನಿಗೆ ತರುವ ಉದ್ದೇಶ ಇದೆ. ಬಡವರು, ನಿರುದ್ಯೋಗಿಗಳು, ಕಾರ್ಮಿಕರು, ಕೃಷಿಕರು, ವಿಧವೆಯರು, ನಿರಾಶ್ರಿತ ಮಹಿಳೆಯರು ಹಾಗೂ ವಿಶೇಷಚೇತನರ ಸ್ಥಿತಿಗತಿ ಬಗ್ಗೆಯೂ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.

ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ಸಮುದಾಯದ ಜನರಿಗೆ ಎಷ್ಟರ ಮಟ್ಟಿಗೆ ತಲುಪಿವೆ ಎಂಬುದನ್ನು ತಿಳಿಯಲು ಬಿಪಿಎಲ್, ಎಪಿಎಲ್ ಸೇರಿದಂತೆ ಇತರ ವಿವರಗಳನ್ನು ಸಹ ದಾಖಲಿಸಲಾಗುತ್ತದೆ. ಈ ಅಂಕಿ ಅಂಶಗಳು ಭವಿಷ್ಯದಲ್ಲಿ ಸಮುದಾಯದ ಸಾಮಾಜಿಕ ನ್ಯಾಯ, ಮೀಸಲಾತಿ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಬೇಡಿಕೆಗಳಿಗೆ ಆಧಾರವಾಗಲಿವೆ ಎಂದು ಹೇಳಿದರು.

ಕ್ಷೇತ್ರಿಯ ಮರಾಠ ಪರಿಷತ್ ಅಧ್ಯಕ್ಷ ದಿಗಂಬರರಾವ ಮಾನಕಾರಿ ಮಾತನಾಡಿ, ಸಮುದಾಯದ ಜನಸಂಖ್ಯೆಯನ್ನು ಕೆಲವೆಡೆ ಕಡಿಮೆ ಪ್ರಮಾಣದಲ್ಲಿ ತೋರಿಸಲಾಗುತ್ತಿದೆ. ರಾಜ್ಯದಲ್ಲಿರುವ ಮರಾಠ ಸಮುದಾಯದ ನೈಜ ಜನಸಂಖ್ಯೆ ಹಾಗೂ ಸಾಮಾಜಿಕ-ಆರ್ಥಿಕ ಸಾಮರ್ಥ್ಯವನ್ನು ದಾಖಲಿಸುವುದು ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ವೆಂಕಟರಾವ್ ಮೆಂದೆ ಮಾತನಾಡಿ, ಈಗಾಗಲೇ ಬೆಳಗಾವಿಯಲ್ಲಿ ಸಮೀಕ್ಷೆಗೆ ಚಾಲನೆ ನೀಡಲಾಗಿದೆ. ಇದೀಗ ಬೀದರ್ ಜಿಲ್ಲೆಯಲ್ಲೂ ಆರಂಭಿಸಲಾಗಿದೆ. ಗ್ರಾಮ, ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಯುವಕರ ತಂಡಗಳು ಹಿರಿಯರ ಮಾರ್ಗದರ್ಶನದಲ್ಲಿ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿವೆ. ಎರಡ್ಮೂರು ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಸಮಗ್ರ ಅಂಕಿ ಅಂಶ ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದರು.

ಮುಖಂಡರಾದ ಜನಾರ್ದನ ಬಿರಾದಾರ, ಕಿಶನರಾವ್ ಪಾಟೀಲ ಇಂಚೂರಕರ್, ನಾರಾಯಣ ಗಣೇಶ, ಸತೀಶ ಮುಳೆ, ತಾತ್ಯಾರಾವ ಪಾಟೀಲ, ರಾವಸಾಹೇಬ‌್ ಬಿರಾದಾರ, ಅನಿಲ್ ಕಾಳೆ, ಪ್ರದೀಪ‌್ ಬಿರಾದಾರ, ಅಮರ್ ಜಾಧವ, ಗೋರಖ ಶ್ರೀಮಾಳೆ, ವಿದ್ಯಾವಾನ ಪಾಟೀಲ, ಬಾಲಾಜಿ ವಾಡಿಕರ್ ಉಪಸ್ಥಿತರಿದ್ದರು.

ಸಮುದಾಯದ ಪ್ರತಿಯೊಬ್ಬರೂ ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ನೀಡಬೇಕು. ಯಾವುದೇ ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯಬಾರದು ದಾದಾ ಮಹಾರಾಜ ನಗರಕರ್, ಮರಾಠ ಸಮಾಜದ ಧರ್ಮಗುರು

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ