ಅಗತ್ಯ ಬಂದರೆ ಸುಂಕದ ಅಧಿಕಾರ ಬಳಕೆ: ಡೊನಾಲ್ಡ್ ಟ್ರಂಪ್

ಅಗತ್ಯ ಬಂದರೆ ಸುಂಕದ ಅಧಿಕಾರ ಬಳಕೆ: ಡೊನಾಲ್ಡ್ ಟ್ರಂಪ್

ಅಗತ್ಯ ಬಂದರೆ ಸುಂಕದ ಅಧಿಕಾರ ಬಳಕೆ: ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್ (ಪಿಟಿಐ): ರಷ್ಯಾ ಮತ್ತು ಉಕ್ರೇನ್ ನಡುವಿನ ವಿನಾಶಕಾರಿ ಯುದ್ಧವನ್ನು ಕೊನೆಗಾಣಿಸಲು, ಅಗತ್ಯ ಬಿದ್ದರೆ ಗರಿಷ್ಠ ತೆರಿಗೆ ವಿಧಿಸಲು ಕಾನೂನಿನ ಅಡಿ ನೀಡಲಾಗಿರುವ ಅಧಿಕಾರವನ್ನು ಬಳಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

‘ಹತ್ತಾರು ಸಾವಿರ ಜನರನ್ನು ಬಲಿ ಪಡೆಯುತ್ತಿರುವ ಈ ಯುದ್ಧಕ್ಕೆ ಅಂತ್ಯ ಹಾಡಲು ನಾವು ಪ್ರಯತ್ನಿಸುತ್ತಲೇ ಇದ್ದೇವೆ. ಕಳೆದ ವಾರವಷ್ಟೇ ಬಲಿಷ್ಠವಾದ ಕಾನೂನಿಗೆ ಸಹಿ ಹಾಕಿದ್ದೇನೆ. ಅಗತ್ಯ ಬಿದ್ದರೆ ಅದನ್ನು ಬಳಸಿಕೊಳ್ಳುವೆ’ ಎಂದು ಅವರು ವಿಶ್ವಸಂಸ್ಥೆಯ 81ನೇ ಮಹಾಸಭೆಯಲ್ಲಿ ಹೇಳಿದರು. ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲ ಖರೀದಿಸುವ, ಭಾರತ ಮತ್ತು ಚೀನಾ ಸೇರಿ ಪ್ರಮುಖ ಐದು ರಾಷ್ಟ್ರಗಳಿಗೆ ಶೇ 100ರಷ್ಟು ಸುಂಕ ಹೇರುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ಕಾನೂನನ್ನು ಈಚೆಗಷ್ಟೇ ಅಮೆರಿಕದ ಕಾಂಗ್ರೆಸ್‌ನಲ್ಲಿ ಅಂಗೀಕರಿಸಲಾಗಿತ್ತು.

ಯುದ್ಧದ ಪಿಡುಗಿನಿಂದ ಮಾನವತೆಯನ್ನು ಕಾಪಾಡುವ ತನ್ನ ಪ್ರಮುಖ ಕಾರ್ಯದಲ್ಲಿ ವಿಶ್ವಸಂಸ್ಥೆ ವಿಫಲವಾಗಿದ್ದು, ಅದರ ವಿಶ್ವಾಸಾರ್ಹತೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ

ಲುಯಿಸ್ ಇನಾಸಿಯೊ ಲುಲಾ ದಾ ಸಿಲ್ವಾ

ಬ್ರೆಜಿಲ್ ಅಧ್ಯಕ್ಷ (ವಿಶ್ವಸಂಸ್ಥೆ ಮಹಾಸಭೆಯಲ್ಲಿ ಹೇಳಿದ್ದು)

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ