ಬದುಕು ಬದಲಿಸಿದ ಆರೋಗ್ಯ ಸಮಸ್ಯೆ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ

ಬದುಕು ಬದಲಿಸಿದ ಆರೋಗ್ಯ ಸಮಸ್ಯೆ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ

ಬದುಕು ಬದಲಿಸಿದ ಆರೋಗ್ಯ ಸಮಸ್ಯೆ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ

ವೈದ್ಯರ ಅದೊಂದು ಮಾತು ದಂಪತಿಯ ಜೀವನವನ್ನೇ ಬದಲಾಯಿಸಿತು. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ರೂಪಿಕಾ ಆನಂದ್ ಮತ್ತು ಪತಿ ರಾಕೇಶ್ ಆನಂದ್, ಭವಿಷ್ಯದಲ್ಲಿ ಆರೋಗ್ಯಕರ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಗರವನ್ನೇ ತೊರೆಯಲು ನಿರ್ಧರಿಸಿದರು. ಆರೋಗ್ಯ ಸಮಸ್ಯೆ ಎಂದು ಹೆದರದ ದೆಹಲಿ ಮೂಲದ ದಂಪತಿ, ಈಗ ಲಕ್ಷಾಂತರ ರೂಪಾಯಿ ಆದಾಯ ತರುವ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

‘ಸ್ಟಾರ್ಟ್‌ಅಪ್.ಪೀಡಿಯಾ’ ವರದಿಯ ಪ್ರಕಾರ, 2016ರಲ್ಲಿ  ರೂಪಿಕಾ ಆನಂದ್ ಅವರಿಗೆ ಶ್ವಾಸಕೋಶದ ಗಂಭೀರ ಕಾಯಿಲೆಯಾದ ‘ಸಾರ್ಕೋಯಿಡೋಸಿಸ್’ (sarcoidosis) ಇರುವುದು ಪತ್ತೆಯಾಯಿತು. ಆಗ ವೈದ್ಯರು, ‘ನೀವು ಕೇವಲ ಐದು ವರ್ಷಗಳಷ್ಟೇ  ಬದುಕುತ್ತೀರಿ’ ಎಂದು ತಿಳಿಸಿದ್ದರು. ವೈದ್ಯರ ಮಾತನ್ನು ಕೇಳಿದ ರೂಪಿಕಾ ದಂಪತಿಗೆ ದಿಕ್ಕೇ ತೋಚದಂತಾಗಿತ್ತು.. ಬಳಿಕ ಇರುವಷ್ಟು ದಿನ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ನಿರ್ಧರಿಸಿದ ದಂಪತಿ ಸಾವಯವ ಕೃಷಿಯತ್ತ ಮುಖ ಮಾಡಿದರು.

2018ರಲ್ಲಿ ದಂಪತಿ ಎರಡು ಎಕರೆ ಜಮೀನು ಖರೀದಿಸಿ, ಸಾವಯವ ಕೃಷಿ ಮಾಡಲು ನಿರ್ಧರಿಸಿದರು. ಕೇವಲ 2 ಎಕರೆ ಜಮೀನಿನಲ್ಲಿ ಆರಂಭವಾದ ಸಾವಯವ ಕೃಷಿ ಉದ್ಯಮ, ಇಂದು ಉತ್ತರ ಪ್ರದೇಶದ ಬುಲಂದ್‌ಶಹರ್ ಮತ್ತು ಪಿಲಾಖುವಾದಲ್ಲಿ 15 ಎಕರೆಗೂ ಹೆಚ್ಚು ವಿಸ್ತೀರ್ಣದ ಬೃಹತ್ ಸಾವಯವ ಕೃಷಿ ಉದ್ಯಮವಾಗಿ ಬೆಳೆದಿದೆ.

‘30ಸ್ಟೇಡ್ಸ್’ ವರದಿಯ ಪ್ರಕಾರ, ಕೃಷಿಗೆ ಕಾಲಿಡುವ ಮೊದಲು ರೂಪಿಕಾ ಮತ್ತು ರಾಕೇಶ್ ಇಬ್ಬರೂ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದರು. ಐಐಟಿ ಬಾಂಬೆ ಪದವೀಧರರಾದ ರಾಕೇಶ್, ದುಬೈನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ರೂಪಿಕಾ ಅವರು ಎಮಿರೇಟ್ಸ್ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಆದರೆ ಶ್ವಾಸಕೋಶದ ಗಂಭೀರ ಕಾಯಿಲೆಯ ಬಳಿಕ ದಂಪತಿ ಬದುಕು ಸಂಪೂರ್ಣವಾಗಿ ಬದಲಾಯಿತು. ತಮ್ಮ ಉದ್ಯೋಗಗಳನ್ನು ತೊರೆದು ಕೃಷಿ ಆರಂಭಿಸಿದರು. ಕೃಷಿ ಬಗ್ಗೆ ಮಾಹಿತಿ ಇಲ್ಲದಿದ್ದರಿಂದ, ಸಾವಯವ ಕೃಷಿ ಕುರಿತು ಮಾರ್ಗದರ್ಶನ ಪಡೆದುಕೊಂಡರು. ಹಾಗೇ ಸ್ಥಳೀಯ ಅನುಭವಿ ರೈತರನ್ನು ಭೇಟಿಯಾಗಿ ಕೃಷಿ ಬಗ್ಗೆ ತಿಳಿದುಕೊಂಡರು. ತಮ್ಮ ಮೊದಲ ಇಳುವರಿಯಲ್ಲಿ ಯಶಸ್ಸು ಕಂಡ ದಂಪತಿ ನಂತರ, 2019ರಲ್ಲಿ ತಮ್ಮ ಕೃಷಿ ಭೂಮಿಯನ್ನು ವಿಸ್ತರಿಸಿದರು.

ಇನ್ನೇನು ತಮ್ಮ ಜಮೀನಿನಲ್ಲಿ ಕೊಯ್ಲು ಮಾಡಬೇಕು ಅನ್ನುವಷ್ಟರಲ್ಲೇ ಕೋವಿಡ್-19 ಲಾಕ್‌ಡೌನ್ ಜಾರಿಯಾಗಿ, ಮಾರುಕಟ್ಟೆ ಮತ್ತು ಸಾರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಆದರೂ ತಾಜಾ ತರಕಾರಿ, ಧಾನ್ಯಗಳನ್ನು ವ್ಯರ್ಥ ಮಾಡದ ರೂಪಿಕಾ, ತಮ್ಮ ಹೌಸಿಂಗ್ ಸೊಸೈಟಿಯ ನಿವಾಸಿಗಳಿಗೆ ವಿತರಿಸಿದರು. ಈ ಅನಿರೀಕ್ಷಿತ ಬೆಳವಣಿಗೆ ಅವರ ಉದ್ಯಮಕ್ಕೆ ಹೊಸ ತಿರುವು ನೀಡಿತು.

ಇಂದು ಈ ದಂಪತಿ ವಿವಿಧ ರೀತಿಯ ತರಕಾರಿಗಳು, ಧಾನ್ಯಗಳು, ಬೇಳೆಕಾಳುಗಳು, ಸಿರಿಧಾನ್ಯಗಳು, ಸಾಂಬಾರ ಪದಾರ್ಥಗಳು, ಔಷಧೀಯ ಬೆಳೆಗಳು ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಕೋಲ್ಡ್ ಪ್ರೆಸ್ಡ್ ಎಣ್ಣೆಗಳು, ಉಪ್ಪಿನಕಾಯಿ, ನಾಟಿ ಹಸುವಿನ ತುಪ್ಪ, ಜೇನುತುಪ್ಪ ಮತ್ತು ಹಣ್ಣುಗಳಿಂದ ತಯಾರಿಸಿದ ಉತ್ಪನ್ನಗಳನ್ನು ಪೂರೈಸುತ್ತಿದ್ದಾರೆ. ಇದಲ್ಲದೆ, ಪನೀರ್, ಖೋವಾ, ಬೇಕರಿ ಮತ್ತು ಆರೋಗ್ಯ ವರ್ಧಕ ಉತ್ಪನ್ನಗಳನ್ನೂ ಉತ್ಪಾದಿಸುತ್ತಿದ್ದಾರೆ.

‘ಸ್ಟಾರ್ಟ್‌ಅಪ್.ಪೀಡಿಯಾ’ ವರದಿಯ ಪ್ರಕಾರ, ಈ ಕೃಷಿ ಭೂಮಿಯಿಂದ ವಾರ್ಷಿಕ ಸುಮಾರು 9 ರಿಂದ 10 ಟನ್ ಬೆಳೆ ಉತ್ಪಾದನೆಯಾಗುತ್ತಿದ್ದು, ಅವರ ಉದ್ಯಮವು ವಾರ್ಷಿಕ ಸುಮಾರು ₹47 ರಿಂದ ₹48 ಲಕ್ಷ ಆದಾಯ ಗಳಿಸುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ