ಪ್ರಜಾಸೇವೆ ಸಭೆಯಲ್ಲಿ ಅಧಿಕಾರಿಗಳಿಗೆ ಅಪಮಾನ ಸಲ್ಲದು: ಸುಧಾಕರ ಶೆಟ್ಟಿ

ಪ್ರಜಾಸೇವೆ ಸಭೆಯಲ್ಲಿ ಅಧಿಕಾರಿಗಳಿಗೆ ಅಪಮಾನ ಸಲ್ಲದು: ಸುಧಾಕರ ಶೆಟ್ಟಿ

ಪ್ರಜಾಸೇವೆ ಸಭೆಯಲ್ಲಿ ಅಧಿಕಾರಿಗಳಿಗೆ ಅಪಮಾನ ಸಲ್ಲದು: ಸುಧಾಕರ ಶೆಟ್ಟಿ

ಕೊಪ್ಪ: ಪ್ರಜಾಸೇವೆ ಜನಾಂದೋಲನ ಸಭೆ ಜನರ ಸಮಸ್ಯೆ ಪರಿಹರಿಸುವ ವೇದಿಕೆಯಾಗಬೇಕೇ ವಿನಾ ಅಧಿಕಾರಿಗಳ ಅವಮಾನಕ್ಕೆ ಅಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್. ಶೆಟ್ಟಿ ಹೇಳಿದ್ದಾರೆ.

ಪ್ರಜಾಸೇವೆ ಸರ್ಕಾರದ ಮಹತ್ವದ ಜನಪರ ಕಾರ್ಯಕ್ರಮ. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸರ್ಕಾರದ ಮುಂದೆ ಹೇಳಿಕೊಳ್ಳಲು ಮತ್ತು ಅಧಿಕಾರಿಗಳ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಇಂತಹ ವೇದಿಕೆ ಅತ್ಯಂತ ಅಗತ್ಯ. ಅಧಿಕಾರಿಗಳು ತಪ್ಪು ಮಾಡಿದರೆ ಅವರನ್ನು ಪ್ರಶ್ನಿಸಬೇಕು. ಕೆಲಸ ಮಾಡದಿದ್ದರೆ ಜವಾಬ್ದಾರಿ ನಿಗದಿಪಡಿಸಬೇಕು. ಕರ್ತವ್ಯಲೋಪ ಸಾಬೀತಾದರೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಅಮಾನತು ಕೂಡ ಮಾಡಬಹುದು ಎಂದಿದ್ದಾರೆ.

ಸಾರ್ವಜನಿಕರ ಎದುರು ಅಧಿಕಾರಿಗಳನ್ನು ಅವಮಾನಿಸುವುದು, ನಿಂದನೀಯ ಪದಗಳನ್ನು ಬಳಸುವುದು ಅಥವಾ ಅವರ ಆತ್ಮಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುವುದು ಸರಿಯಾದ ಪದ್ಧತಿಯಲ್ಲ. ಈಚೆಗೆ ಕೊಪ್ಪದಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಕುರಿತು ಶಾಸಕ ರಾಜೇಗೌಡ ಅವರು ಮಾತನಾಡಿರುವ ವಿಡಿಯೊ ಹರಿದಾಡುತ್ತಿದ್ದ ಚರ್ಚೆಗೆ ಗ್ರಾಸವಾಗಿದೆ ಎಂದಿದ್ದಾರೆ.

ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಅಧಿಕಾರಿಗಳ ಬಗ್ಗೆ ಕೀಳಾಗಿ ಮಾತನಾ ಡುವುದು ಜನಪ್ರತಿನಿಧಿಯ ಘನತೆಗೆ ಶೋಭೆ ತರುವುದಿಲ್ಲ. ಅಧಿಕಾರಿಯನ್ನು ಅಪಮಾನಿಸಬೇಡಿ, ಅವರನ್ನು ಉತ್ತರದಾಯಿಯನ್ನಾಗಿ ಮಾಡುವ ನೀತಿ ಪ್ರಜಾಸೇವೆಯಲ್ಲಿ ಇರಬೇಕು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

260918-126-1956878039

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ