ಡೇವಿಸ್ ಕಪ್: ದಕ್ಷಿಣೇಶ್ವರ್ ಮೇಲೆ ಭಾರತದ ಭರವಸೆ

ಡೇವಿಸ್ ಕಪ್: ದಕ್ಷಿಣೇಶ್ವರ್ ಮೇಲೆ ಭಾರತದ ಭರವಸೆ

ಡೇವಿಸ್ ಕಪ್: ದಕ್ಷಿಣೇಶ್ವರ್ ಮೇಲೆ ಭಾರತದ ಭರವಸೆ

ಸೋಲ್ (ಪಿಟಿಐ): ಭಾರತ ತಂಡವು, ಶುಕ್ರವಾರ ಆರಂಭವಾಗುವ ಮಹತ್ವದ ಡೇವಿಸ್‌ ಕಪ್‌ ಕ್ವಾಲಿಫಯರ್ ಎರಡನೇ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಗೆಲ್ಲುವ ತಂಡ ಅಂತಿಮ ಎಂಟರಲ್ಲಿ ಸ್ಥಾನ ಪಡೆಯಲಿದೆ. ಭಾರತ ತಂಡವು ಈ ಹಿಂದಿನ ಪಂದ್ಯದ ‘ಹೀರೊ’ ದಕ್ಷಿಣೇಶ್ವರ್‌ ಸುರೇಶ್ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸುತ್ತಿದೆ.

ಮೊದಲ ಸಿಂಗಲ್ಸ್‌ನಲ್ಲಿ ನೀಳಕಾಯದ ದಕ್ಷಿಣೇಶ್ವರ್ ಅವರು ದಕ್ಷಿಣ ಕೊರಿಯಾದ ಅಗ್ರಮಾನ್ಯ ಆಟಗಾರ ಸೂನ್‌ವೂ ಕ್ವಾನ್ ಅವರನ್ನು ಎದುರಿಸಲಿದ್ದಾರೆ. ಕೆಳಮಟ್ಟದಲ್ಲಿ ಚೆಂಡು ಬೌನ್ಸ್‌ ಆಗುವ ಅಂಕಣದಲ್ಲಿ 150ನೇ ಕ್ರಮಾಂಕದ ಸೂನ್‌ವೂ ಅವರನ್ನು ನಿಭಾಯಿಸುವುದು ಭಾರತದ ಆಟಗಾರನಿಗೆ ಪರೀಕ್ಷೆಯಾಗಲಿದೆ.

ಫೆಬ್ರುವರಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಭಾರತ 3–2 ರಿಂದ ಜಯಗಳಿಸುವಲ್ಲಿ 26 ವರ್ಷ ವಯಸ್ಸಿನ ದಕ್ಷಿಣೇಶ್ವರ್‌ ಅವರ ಪಾತ್ರ ನಿರ್ಣಾಯಕ ವಾಗಿತ್ತು. ಪ್ರಬಲ ತಂಡದ ವಿರುದ್ಧ ಅವರು ಆಡಿದ ಮೂರೂ ಪಂದ್ಯಗಳನ್ನು (ಎರಡು ಸಿಂಗಲ್ಸ್, ಒಂದು ಡಬಲ್ಸ್) ಜಯಿಸಿದ್ದರು. ವಿಶ್ವ ಕ್ರಮಾಂಕದಲ್ಲಿ ಅವರು 367ನೇ ಸ್ಥಾನದಲ್ಲಿದ್ದಾರೆ.

2021ರಲ್ಲಿ ಜೀವನಶ್ರೇಷ್ಠ 52ನೇ ಸ್ಥಾನದಲ್ಲಿದ್ದ ಸೂನ್‌ವೂ ಕ್ವಾನ್ ಈ ಋತುವಿನಲ್ಲಿ ಸೇನೆಯಲ್ಲಿ ಕಡ್ಡಾಯ ಸೇವೆಯ ನಂತರ ಮೂರು ಚಾಲೆಂಜರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅರ್ಜೆಂಟೀನಾ ವಿರುದ್ಧ ಈ ಹಿಂದಿನ ಡೇವಿಸ್‌ ಕಪ್ ಪಂದ್ಯದಲ್ಲಿ 3–2 ಗೆಲುವಿನಲ್ಲಿ ಕ್ವಾನ್ ಅವರ ಪಾತ್ರ ಪ್ರಮುಖವಾಗಿತ್ತು.

‘ಚಾಲೆಂಜರ್ ಟೂರ್‌ನಲ್ಲಿ ಕ್ವಾನ್ ಆಟ ನೋಡಿದ್ದೆ. ಅವರು ಉತ್ತಮ ಆಟಗಾರ. ನಾಯಕ ಮತ್ತು ಕೋಚ್‌ ಸಹ ಅವರ ಆಟ ನೋಡಿದ್ದಾರೆ. ನಾನು ಈ ಸವಾಲಿಗೆ ಸಜ್ಜಾಗಿದ್ದೇನೆ’ ಎಂದು ದಕ್ಷಿಣೇಶ್ವರ್ ತಿಳಿಸಿದರು.

ಎರಡನೇ ಸಿಂಗಲ್ಸ್‌ನಲ್ಲಿ ಭಾರತದ ಅಗ್ರ ಆಟಗಾರ ಸುಮಿತ್ ನಾಗಲ್ ಅವರು ಕೊರಿಯಾದ ಅನುಭವಿ ಹಿಯಾನ್ ಚುಂಗ್ ವಿರುದ್ಧ ಸೆಣಸಲಿದ್ದಾರೆ. ಪ್ರಸ್ತುತ 567ನೇ ಕ್ರಮಾಂಕ ಹೊಂದಿರುವ ಅವರು 2018ರಲ್ಲಿ ಆಟದ ಉತ್ತುಂಗದಲ್ಲಿದ್ದು 19ನೇ ಕ್ರಮಾಂಕ ಪಡೆದಿದ್ದರು. ಆ ವರ್ಷ ಆಸ್ಟ್ರೇಲಿಯಾ ಓಪನ್‌ನಲ್ಲಿ ಅಲೆಕ್ಸಾಂಡರ್ ಜ್ವರೇವ್‌, ನೊವಾಕ್ ಜೊಕೊವಿಚ್‌ ಅವರನ್ನು ಸೋಲಿಸಿದ್ದರು.

ಶುಕ್ರವಾರದ ಪಂದ್ಯಗಳು 1–1 ಸಮಬಲವಾದಲ್ಲಿ ಶನಿವಾರ ಡಬಲ್ಸ್, ಎರಡು ಸಿಂಗಲ್ಸ್ ಪಂದ್ಯಗಳು ನಡೆಯಲಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ