ರಾಮದುರ್ಗ: ತರಕಾರಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಬೇಕಿದೆ

ರಾಮದುರ್ಗ: ತರಕಾರಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಬೇಕಿದೆ

ರಾಮದುರ್ಗ: ತರಕಾರಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಬೇಕಿದೆ

ರಾಮದುರ್ಗ: ತಾಜಾ ತರಕಾರಿ ಬೆಳೆದು ಮಾರಾಟ ಮಾಡುವಲ್ಲಿ ರಾಮದುರ್ಗ ಪಟ್ಟಣ ಮುಂಚೂಣಿಯಲ್ಲಿದೆ. ಇಲ್ಲಿಂದ ದೂರದ ಪಟ್ಟಣಗಳು ಹಾಗೂ ಗೋವಾ ರಾಜ್ಯಕ್ಕೂ ತರಕಾರಿ ರವಾನೆಯಾಗುತ್ತದೆ. ಆದರೆ, ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ.

ಇಲ್ಲಿ ವಾರದಲ್ಲಿ ಎರಡು ದಿನ(ಗುರುವಾರ ಮತ್ತು ಭಾನುವಾರ) ಸಂತೆ ನಡೆಯುತ್ತದೆ. ತೇರ ಬಜಾರ್‌ನಲ್ಲಿ ರಸ್ತೆಬದಿಯೇ ವ್ಯಾಪಾರ–ವಹಿವಾಟು ನಡೆಯುತ್ತದೆ. ವಾರದ ಏಳು ದಿನವೂ ನಿತ್ಯ ಬೆಳಿಗ್ಗೆ ಮತ್ತು ಸಂಜೆ ತರಕಾರಿ ಲಭಿಸುತ್ತದೆ.

ಆದರೆ, ರಸ್ತೆಪಕ್ಕ ತರಕಾರಿ ಮಾರುವುದರಿಂದ ವಾಹನ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಬಿಡಾಡಿ ದನಗಳ ಹಾವಳಿ ಬೇರೆ. ಹಾಗಾಗಿ ತರಕಾರಿ ಮಾರಲು ಸೂಕ್ತ ಮಾರುಕಟ್ಟೆ ಬೇಕು ಎಂಬ ಬೇಡಿಕೆ ಇದೆ.

ಕೃಷ್ಣಾ ಚಲನಚಿತ್ರ ಹಿಂಭಾಗದಲ್ಲಿ ಈ ಹಿಂದೆ ನಿರ್ಮಿಸಿರುವ ಮಾರುಕಟ್ಟೆ ಹಳೆಯದಾಗಿದ್ದು, ಇಕ್ಕಟ್ಟಿನಿಂದ ಕೂಡಿದೆ. ವ್ಯಾಪಾರಿಗಳ ಗೋದಾಮು ಆಗಿ ಮಾರ್ಪಟ್ಟಿದೆ. ಅದನ್ನು ಅಭಿವೃದ್ಧಿಪಡಿಸಲು ವಿಶಾಲವಾದ ಜಾಗವೂ ಇದೆ. ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮನಸ್ಸು ಮಾಡಬೇಕಿದೆ.

‘ಏನೇ ಸಮಸ್ಯೆಗಳಿದ್ದರೂ ಬಗೆಹರಿಸಿ ಹಳೇ ತರಕಾರಿ ಮಾರಕಟ್ಟೆ ಸುಧಾರಣೆಗೆ ತ್ವರಿತವಾಗಿ ಕ್ರಮ ವಹಿಸಬೇಕು’ ಎಂಬುದು ಬೀದಿಬದಿ ವ್ಯಾಪಾರಿಗಳ ಆಗ್ರಹ.

ಕಡಿಮೆ ದರಕ್ಕೆ ಲಭ್ಯ: ರಾಮದುರ್ಗ ತಾಲ್ಲೂಕಿನಲ್ಲಿ ನದಿ ಪಕ್ಕದ ಅಲ್ಪಪ್ರಮಾಣದ ಜಮೀನಿನಲ್ಲಿ ವಿವಿಧ ತರಕಾರಿ ಬೆಳೆಯುವ ರೈತರೇ ಇಲ್ಲಿ ಉತ್ಪನ್ನ ತಂದು ಮಾರುತ್ತಾರೆ. ದಲ್ಲಾಳಿಗಳ ಹಾವಳಿ ಇಲ್ಲದೆ ರೈತರೇ ನೇರವಾಗಿ ಮಾರಾಟ ಮಾಡುವುದರಿಂದ ಜನರಿಗೆ ಕಡಿಮೆ ದರದಲ್ಲಿ ತರಕಾರಿ ಸಿಗುತ್ತಿದೆ. ಇನ್ನೂ ಇಲ್ಲಿಂದ ಖರೀದಿಸುವ ಕ್ಯಾಪ್ಸಿಕಮ್‌, ಬಾಳೆ, ಟೊಮೆಟೊ ಮತ್ತಿತರ ತರಕಾರಿಯನ್ನು ಗೋವಾಕ್ಕೆ ಕಳುಹಿಸಲಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-21-342674931

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ