ಸಚಿವ ಸಂಪುಟ ಸಭೆ ವೇಳೆ ಪ್ರತಿಭಟನೆ ನಡೆಸುತ್ತೇವೆ: ವಕೀಲರ ಸಂಘದ ಎಚ್ಚರಿಕೆ

ಸಚಿವ ಸಂಪುಟ ಸಭೆ ವೇಳೆ ಪ್ರತಿಭಟನೆ ನಡೆಸುತ್ತೇವೆ:
 ವಕೀಲರ ಸಂಘದ ಎಚ್ಚರಿಕೆ

ಸಚಿವ ಸಂಪುಟ ಸಭೆ ವೇಳೆ ಪ್ರತಿಭಟನೆ ನಡೆಸುತ್ತೇವೆ: ವಕೀಲರ ಸಂಘದ ಎಚ್ಚರಿಕೆ

ಮಂಗಳೂರು:ಕೊಡಿಯಾಲ್‌ಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್ ನೆಟ್‌ವರ್ಕ್ ಜಾಮರ್‌ನಿಂದ ಜನರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಇದೇ 18ರಂದು ಸಚಿವ ಸಂಪುಟ ಸಭೆ ನಡೆಯುವಲ್ಲಿಗೆ ತೆರಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೈದಿಗಳು ಜೈಲಿನಲ್ಲಿ ಮೊಬೈಲ್ ಬಳಸಿ ಸುಲಿಗೆ ಮಾಡುತ್ತಾರೆ. ಜೈಲಿನಲ್ಲಿ ಕ್ರಿಮಿನಲ್ ಚಟುವಟಿಕೆ ತಡೆಯಲು ಜಾಮರ್ ಅಳವಡಿಸಿದ್ದು ಒಳ್ಳೆಯ ವಿಚಾರ. ವಿಪರ್ಯಾಸವೆಂದರೆ ಈಗಲೂ ಕ್ರಿಮಿನಲ್ ವಕೀಲರಿಗೆ ಜೈಲಿನಲ್ಲಿರುವ ಕೈದಿಗಳಿಂದ ಫೋನ್‌ ಕರೆ ಬರುತ್ತದೆ. ಇಷ್ಟೆಲ್ಲ ಭದ್ರತೆ ನಡುವೆಯೂ ನಾಲ್ಕು ದಿನ ಹಿಂದೆ 10 ಆಂಡ್ರಾಯ್ಡ್ ಮೊಬೈಲ್‌ಗಳು ಜೈಲಿನ ಒಳಗೆ ಸಿಕ್ಕಿವೆ. ಜೈಲಿಗೆ ಇರುವುದು ಒಂದೇ ದ್ವಾರ. ಅಷ್ಟೆಲ್ಲ ಭದ್ರತಾ ವ್ಯವಸ್ಥೆ ದಾಟಿ ಜೈಲಿನ ಒಳಗೆ ಮೊಬೈಲ್ ತಲುಪುವುದು ಹೇಗೆ’ ಎಂದು ಪ್ರಶ್ನಿಸಿದರು.

‘ಕ್ರಿಯಾಶೀಲ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜಿಲ್ಲೆಗೆ ಭೇಟಿ ನೀಡಿದಾಗ ಪ್ರತಿಭಟನೆ ಮಾಡಿದರೆ ಖಂಡಿತಾ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ವಿಶ್ವಾಸವಿದೆ’ ಎಂದರು.

‘ವಕೀಲರಿಗೂ ನ‌್ಯಾಯಾಲಯ ಸಂಕೀರ್ಣದಲ್ಲಿ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ. ಪ್ರತಿಭಟನೆ ನಡೆಸಿದರೆ ನಮ್ಮ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂಬುದು ಗೊತ್ತಿದೆ. ಪರಿಣಾಮಗಳ ಅರಿವು ಇದ್ದೇ ಪ್ರತಿಭಟನೆ ನಡೆಸುತ್ತಿದ್ದೇವೆ. ನಮಗೆ ಮುಖ್ಯಮಂತ್ರಿಯವರ ಭೇಟಿಗೆ ಅವಕಾಶ ಬೇಡ. ಸಮಸ್ಯೆಗೆ ಪರಿಹಾರ ಬೇಕು’ ಎಂದರು.

‘ಜಾಮರ್ ಸಮಸ್ಯೆಗೆ ಕೇಂದ್ರ ಸರ್ಕಾರದ ಸೇವಾ ಸಂಸ್ಥೆ ಕಾರಣ ಎಂದು ವಕೀಲರೊಬ್ಬರು ಹೇಳಿದ್ದಾರೆ. ಯಾವ ಸರ್ಕಾರವೇ ಆಗಲಿ. ಯಾರದೇ ತಪ್ಪಿದ್ದರೂ ಸರಿಪಡಿಸಿ. ಇದರಲ್ಲಿ ರಾಜಕೀಯ ಇಲ್ಲ. ಈ ಸಮಸ್ಯೆ ನೀಗಿಸಲು ರಾಕೆಟ್ ವಿಜ್ಞಾನ ಬೇಕಿಲ್ಲ. ಜೈಲಿನ ಒಳಗೆ ಹೋಗುವ ಕೈದಿಗಳ ವಸ್ತ್ರ ತೆಗೆದು, ಪರಿಶೀಲಿಸಿ ಒಳಗೆ ಬಿಟ್ಟರೆ ಸಮಸ್ಯೆ ನೀಗುತ್ತದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಎ.ರಾಘವೇಂದ್ರ ರಾವ್‌, ಪ್ರವೀಣ್ ಅದ್ಯಪಾಡಿ, ಗೌತಮ್ ಬಿ.ಪಿ, ರೇಖಾ, ಸುಜಿತ್ ಕುಮಾರ್ , ಸುಂದರ ಗೌಡ, ಜಯಪ್ರಕಾಶ್, ಪ್ರಣೀತಾ, ಅಕ್ಷತಾ, ತೀರ್ಥೇಶ್, ಮಹೇಶ್ ಜೋಗಿ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ