
ವಿಶ್ವಕರ್ಮ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಲಿ: ಜೆ.ಎಸ್.ರಾಜು
ಚನ್ನಪಟ್ಟಣ:‘ವಿಶ್ವಕರ್ಮ ಸಮುದಾಯವು ಆಧುನಿಕತೆ ಜತೆಗೆ ಸ್ಪರ್ಧಾತ್ಮಕವಾಗಿ ಕೆಲಸ ಮಾಡಲು ಮುಂದಾಗಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು’ ಎಂದು ವಿಶ್ವಕರ್ಮ ಸಮುದಾಯ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಎಸ್.ರಾಜು ಸಲಹೆ ನೀಡಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಗುರುವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸೌಲಭ್ಯ ನೀಡುತ್ತಿವೆ. ಈ ಸೌಲಭ್ಯ ಬಳಸಿಕೊಂಡು ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕು’ ಎಂದರು.
ತಹಶೀಲ್ದಾರ್ ಗಿರೀಶ್, ಸಮುದಾಯದ ಮುಖಂಡರಾದ ನಿಂಗರಾಜು, ಆರ್.ಶಂಕರ್, ರಾಜು, ಬೆಳಕೆರೆ ರಾಜೇಶ್, ಗುರುರಾಜ್, ನಾಗರಾಜ್, ಎಲೆಕ್ಟ್ರಿಕಲ್ ಸುರೇಶ್, ಜಗದೀಶ್, ಚಿನ್ನಸ್ವಾಮಾಚಾರ್, ಲಿಂಗರಾಜು, ಬಾರ್ ಬೆಂಡಿಂಗ್ ರಾಜು, ರಾಜೇಶ್, ಚಕ್ಕೆರೆ ಪ್ರಕಾಶ್, ಸಿದ್ದರಾಜು, ಕೆಂಪಾಚಾರ್, ರವಿ, ಚಂದು, ಭಾಸ್ಕರಾಚಾರ್, ಅಶ್ವಥಾಚಾರ್, ತಮ್ಮಯಾಚಾರ್, ಮಂಗಾಡಹಳ್ಳಿ ಸುರೇಶ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.