
ತ್ರಿಗ್ರಾಹಿ ರಾಜಯೋಗ: ಕಷ್ಟಗಳೆಲ್ಲ ಕಳೆದು ಐಶಾರಾಮಿ ಜೀವನ ಪಡೆಯುವ 4 ರಾಶಿಗಳಿವು!
Trigrahi Rajayoga: ಗ್ರಹಗಳ ಚಲನೆಗೆ ಅವುಗಳ ಸ್ಥಾನಕ್ಕೆ ಅನುಗುಣವಾಗಿ ಶುಭಯೋಗಗಳು, ರಾಜಯೋಗಗಳು ರೂಪುಗೊಳ್ಳುತ್ತಿರುತ್ತವೆ. ಇದೀಗ ಒಂದೇ ರಾಶಿಯಲ್ಲಿ ಮೂರು ಗ್ರಹಗಳು ಬಂದು ಸೇರ್ತಾ ಇರೋದ್ರಿಂದ ತ್ರಿಗ್ರಾಹಿ ರಾಜಯೋಗ ನಿರ್ಮಾಣ ಆಗ್ತಾ ಇದೆ. ಜೊತೆಗೆ ಲಕ್ಷ್ಮಿ-ನಾರಾಯಣ ರಾಜಯೋಗ ಕೂಡಾ ರೂಪುಗೊಳ್ತಾ ಇದೆ.
ಶುಕ್ರನು ತನ್ನದೇ ಅಧಿಪತ್ಯದ ತುಲಾ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದು ಶುಕ್ರನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯ. ಮತ್ತೊಂದೆಡೆ, ಕನ್ಯಾರಾಶಿಯಲ್ಲಿರುವ ಬುಧನು ಸೆಪ್ಟೆಂಬರ್ 26 ರಂದು ತುಲಾ ರಾಶಿಯನ್ನು ಪ್ರವೇಶಿಸುತ್ತದೆ. ಈ ಮೂಲಕ ಶುಕ್ರನೊಂದಿಗೆ ಲಕ್ಷ್ಮಿ-ನಾರಾಯಣ ರಾಜಯೋಗವನ್ನು ರೂಪಿಸಲಿದ್ದಾನೆ. ಮತ್ತೊಂದು ಕಡೆ ಚಂದ್ರ ಕೂಡಾ ತುಲಾ ರಾಶಿಯನ್ನು ಪ್ರವೇಶಿಸುವ ಮೂಲಕ ತುಲಾ ರಾಶಿಯಲ್ಲಿ ತ್ರಿಗ್ರಾಹಿ ರಾಜಯೋಗ ನಿರ್ಮಾಣ ಆಗ್ತಾ ಇದೆ. ಅಕ್ಟೋಬರ್ 11, 2026ರ ಬೆಳಿಗ್ಗೆ 10.05ಕ್ಕೆ ಈ ತ್ರಿಗ್ರಾಹಿ ಯೋಗ ರೂಪುಗೊಳ್ತಾ ಇದೆ. ಈ ಗ್ರಹಗಳ ಸಂಚಾರವು 4 ಪ್ರಮುಖ ರಾಶಿಯವರ ಜೀವನದ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
ತ್ರಿಗ್ರಹಿ ಯೋಗ ಯಾರಿಗೆ ಸುವರ್ಣಾವಕಾಶ ತಂದು ಕೊಡಲಿದೆ ಎನ್ನುವುದನ್ನು ನೋಡುವುದಾದರೆ, ಈ ತ್ರಿಗ್ರಹಿ ಯೋಗದ ರಚನೆಯು ಬೇರೆ ಬೇರೆ ರಾಶಿಯವರ ಜೀವನದಲ್ಲಿ ಬದಲಾವಣೆಗಳನ್ನು ತರಬಹುದು. ಒಂದು ಕಡೆ ಬುಧ ಮತ್ತು ಸೂರ್ಯನ ಸಂಯೋಜನೆಯು ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಯಾಗುತ್ತಿದೆ. ಮತ್ತೊಂದೆಡೆ ತುಲಾ ರಾಶಿಯಲ್ಲಿ ರೂಪುಗೊಂಡ ಈ ತ್ರಿಗ್ರಹಿ ಯೋಗವು ಮೇಷ, ತುಲಾ, ಧನು, ಕುಂಭ ಮತ್ತು ಇತರ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ ಅನುಕೂಲಕರ ಫಲಿತಾಂಶಗಳನ್ನು ತಂದು ಕೊಡುತ್ತದೆ. ಜೀವನದಲ್ಲಿ ದೀರ್ಘಕಾಲದಿಂದ ಈಡೇರದ ಕೆಲವು ಆಸೆಗಳು ಈ ಅವಧಿಯಲ್ಲಿ ಈಡೇರುವ ಸಾಧ್ಯತೆಯಿದೆ.
ತ್ರಿಗ್ರಹಿ ಯೋಗವು ಮೇಷ ರಾಶಿಯವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಉದ್ಯೋಗ, ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುವ ಸಾಧ್ಯತೆಗಳಿವೆ. ಹೊಸ ಕೆಲಸವನ್ನು ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರುವುದು. ಆದಾಯದ ಹೊಸ ಮಾರ್ಗಗಳು ಹುಟ್ಟಿಕೊಳ್ಳುವುದು. ಮನಸ್ಸಿನ ಒತ್ತಡ ಕಡಿಮೆಯಾಗುವುದು. ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವ ಮೂಲಕ ಹೊಸ ಜವಬ್ದಾರಿ ನೀಡಬಹುದು. ಇದು ನಿಮದಮ ಭವಿಷ್ಯಕ್ಲೆ ಉತ್ತಮ ಅವಕಾಶವಾಗಿರಲಿದೆ.
ತುಲಾ ರಾಶಿಯವರಿಗೆ ಪ್ರಗತಿಗೆ ಅವಕಾಶಗಳು ಸಿಗುವುದು. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಒಲಿದು ಬರುವುದು. ವ್ಯಾಪಾರಿಗಳು ಬಾಕಿ ಇರುವ ಬಾಕಿ ಹಣವನ್ನು ವಾಪಸ್ ಪಡೆಯುವ ಸಾಧ್ಯತೆಯಿದೆ. ಈ ರಾಶಿಯವರು ಸ್ವಲ್ಪ ಸಮಯದಿಂದ ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರಬರುವುದು ಸಾಧ್ಯವಾಗುತ್ತದೆ. ಹಣ ಗಳಿಸುವ ಅವಕಾಶಗಳು ಹುಟ್ಟಿಕೊಳ್ಳುವುದು. ಹಣಕಾಸಿನ ಸಮಸ್ಯೆ ನಿವಾರಣೆಯಾಗುವುದು. ಹಣಕಾಸಿನ ವಿಷಯದಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.
ಗ್ರಹಗಳ ಸ್ಥಾನಗಳಿಂದ ರೂಪುಗೊಂಡ ತ್ರಿಗ್ರಹಿ ಯೋಗವು ಕುಂಭ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದಲ್ಲಿ ಬಡ್ತಿ ಸಿಕ್ಕಿ ಸಂಬಳ ಹೆಚ್ಚಾಗುವುದು. ಹಣ ಗಳೀಕೆಗೆ ಅವಕಾಶ ಸಿಗುವುದು. ಆದಾಯದ ಹಿಸ ಮೂಲಗಳು ತೆರೆದುಕೊಳ್ಳುವುದು. ಉದ್ಯೋಗ ಹುಡುಕುತ್ತಿರುವವರ ಹುಡುಕಾಟ ಕೊನೆಯಾಗುವುದು. ಹೊಸ ವ್ಯವಹಾರ ಆರಂಭಿಸುವುದಕ್ಕೂ ಇದು ಸೂಕ್ತ ಸಮಯ. ಮಂಗಳ ಗ್ರಹದ ಅನುಕೂಲಕರ ಪ್ರಭಾವದಿಂದಾಗಿ, ಮನೆ ಅಥವಾ ವಾಹನವನ್ನು ಖರೀದಿಸುವ ಬಯಕೆ ಈಡೇರುವುದು.
ಧನು ರಾಶಿ (Sagittarius)
ತ್ರಿಗ್ರಹಿ ರಾಜಯೋಗವು ಧನು ರಾಶಿಯವರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಹೂಡಿಕೆ ಮಾಡಿರುವವರಿಗೆ ಅನುಕೂಲಕರ ಸಮಯ ಒದಗಿ ಬರಬಹುದು. ಈ ಸಮಯದಲ್ಲಿ ದೊಡ್ಡ ಮೊತ್ತದ ಹಣದ ವಹಿವಾಟು ನಡೆಯುವ ಸಾಧ್ಯತೆಯಿದೆ.