
ಗುರು ಸಂಕ್ರಮಣದಿಂದ ನಾಲ್ಕು ರಾಶಿಯವರಿಗೆ ಒಲಿಯುವಳು ಲಕ್ಷ್ಮೀ : ಉನ್ನತ ಸ್ಥಾನಕ್ಕೆ ಏರುವ ಅವಕಾಶ, ನನಸಾಗುವುದು ಸ್ವಂತ ಮನೆ ಕನಸು
ಜ್ಯೋತಿಷ್ಯದಲ್ಲಿ, ಗುರು ಗ್ರಹಕ್ಕೆ ವಿಶೇಷ ಸ್ಥಾನವಿದೆ. ಗುರು ಅಂದರೆ ಜ್ಞಾನ, ಸಂಪತ್ತು, ಅದೃಷ್ಟ, ಬೆಳವಣಿಗೆ, ಸಂತೋಷವನ್ನು ಕರುಣಿಸುವವನು ಎಂದರ್ಥ. ಹಾಗಾಗಿ ನಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಬಹಳ ಮುಖ್ಯವಾಗಿರುವುದು. ಗುರುವಿನ ಸಂಚಾರ, ಸ್ಥಾನ ಎಲ್ಲವೂ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಗುರುವಿನ ರಾಶಿ ಮತ್ತು ನಕ್ಷತ್ರ ಸ್ಥಾನಗಳಲ್ಲಿನ ಬದಲಾವಣೆಗಳು ಎಲ್ಲಾ 12 ರಾಶಿಯವರ ಜಾತಕದ ಮೇಲೂ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ.
ಆ ನಿಟ್ಟಿನಲ್ಲಿ, ಪ್ರಸ್ತುತ ಕರ್ಕಾಟಕ ರಾಶಿಯಲ್ಲಿರುವ ಗುರು ಅಕ್ಟೋಬರ್ 31 ರಂದು ಸಿಂಹ ರಾಶಿಗೆ ಸಂಚಾರ ಬೆಳೆಸಲಿದ್ದಾನೆ. ಇದರೊಂದಿಗೆ, ಗುರುವಿನ ನಕ್ಷತ್ರ ಬದಲಾವಣೆ ಕೂಡಾ ಆಗುವುದು. ಗುರು ಕೇತುವಿನ ಪ್ರಾಬಲ್ಯವಿರುವ ಮಘ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಈ ನಕ್ಷತ್ರ ಬದಲಾವಣೆಯ ಪ್ರಭಾವದಿಂದಾಗಿ, ಕೆಲವು ರಾಶಿಯವರು ವೃತ್ತಿ ಜೀವನದಲ್ಲಿ ಬದಲಾವಣೆಗಳನ್ನು ಕಾಣುವರು. ಹಣದ ಹರಿವು ಹೆಚ್ಚಾಗುವುದು. ಕೆಲಸ ಕಾರ್ಯಗಳಲ್ಲಿ ಅನುಕೂಲಕರ ಪರಿಸ್ಥಿತಿಗಳನ್ನು ಅನುಭವಿಸುವರು.
ಗುರುವಿನ ಮಘ ನಕ್ಷತ್ರ ಸಂಚಾರದಿಂದ ಯಾವ ರಾಶಿಯವರು ಪ್ರಯೋಜನ ಪಡೆಯುತ್ತಾರೆ ನೋಡೋಣ.
ಗುರುವಿನ ಮಘ ನಕ್ಷತ್ರ ಸಂಚಾರವು ಮೇಷ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರುವುದು. ಇವರು ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸುವರು. ಉನ್ನತ ಸ್ಥಾನಕ್ಕೆ ಏರುವ ಅವಕಾಶ ಸಿಗುವುದು.ಕೆಲಸದಲ್ಲಿ ಇದುವರೆಗೆ ನಿರ್ವಹಿಸಿದ್ದಕ್ಕಿಂತ ಹೆಚ್ಚಿನ ಜವಾಬ್ದಾರಿಗಳು ಸಿಗುವುದು. ಈ ಜವಾಬ್ದಾರಿಗಳನ್ನು ನೀವು ಸಮರ್ಥವಾಗಿ ನಿಭಾಯಿಸುವಿರಿ. ಇದು ಭವಿಷ್ಯದ ಲಾಭಕ್ಕೂ ಕಾರಣವಾಗುವುದು. ವ್ಯಾಪಾರ ಮಾಡುತ್ತಿರುವವರಿಗೆ ಹೊಸ ಒಪ್ಪಂದಗಳು ಅಥವಾ ಪ್ರಮುಖ ವೃತ್ತಿ ಅವಕಾಶಗಳು ಸಿಗುವುದು. ಜೊತೆಗೆ ವ್ಯವಹಾರದಲ್ಲಿ ಲಾಭವೂ ಹೆಚ್ಚಾಗುವುದು. ಅನಿರೀಕ್ಷಿತವಾಗಿ ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ. ಬಹಳ ದಿನಗಳಿಂದ ಕೈ ಸೇರದೆ ಇದ್ದ ಹಣ ಈ ಹೊತ್ತಿನಲ್ಲಿ ನಿಮ್ಮದಾಗುವುದು. ಇದು ಆರ್ಥಿಕ ಪರಿಸ್ಥಿತಿಯಲ್ಲಿ ಕ್ರಮೇಣ ಸುಧಾರಣೆಗೆ ಕಾರಣವಾಗುವುದು.
ಗುರುವಿನ ನಕ್ಷತ್ರ ಸಂಚಾರವು ಸಿಂಹ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಅವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುವರು. ನಾಯಕತ್ವದ ಗುಣಗಳನ್ನು ಸಹ ಪ್ರದರ್ಶಿಸುವರು. ಕೆಲಸ ಮಾಡುತ್ತಿರುವ ಸಿಂಹ ರಾಶಿಯವರಿಗೆ ಬಡ್ತಿ ಸಿಗುವ ಮೂಲಕ ಪ್ರಮುಖ ಹೊಸ ಜವಾಬ್ದಾರಿಗಳು ಸಿಗುವುದು. ವೃತ್ತಿ ಮತ್ತು ವ್ಯವಹಾರದಲ್ಲಿ ಬೆಳವಣಿಗೆಗೆ ಅವಕಾಶಗಳು ಒಲಿದು ಬರುವುದು. ಹಣದ ಹರಿವು ಹೆಚ್ಚಾಗುವುದು. ಈ ಅವಧಿಯು ಎಲ್ಲಾ ವಿಷಯಗಳಲ್ಲಿಯೂ ಅನುಕೂಲಕರವಾಗಿರುವುದು. ಆದಾಯವನ್ನು ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿ ಸದೃಢವಾಗುವುದು.
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರಿಗೆ ಗುರುವಿನ ಸಂಚಾರವು ವ್ಯಾಪಾರ ಮತ್ತು ಆರ್ಥಿಕ ವಿಷಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುವುದು. ಹೊಸ ಅವಕಾಶಗಳು ಪ್ರಗತಿಗೆ ಕಾರಣವಾಗುವ ವಾತಾವರಣವನ್ನು ಸೃಷ್ಟಿಸುವುದು. ವ್ಯವಹಾರದಲ್ಲಿರುವವರಿಗೆ ಹೆಚ್ಚು ಲಾಭವಾಗುವುದು. ಪ್ರಮುಖ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಪರಿಚಯ ಮಾಡಿಕೊಳ್ಳುವ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳದ ಜೊತೆಗೆ, ಉಳಿತಾಯದಲ್ಲಿಯೂ ಸುಧಾರಣೆಯಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುವುದು. ಈ ಸಂಚಾರದ ಕಾರಣದಿಂದ ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಾಗುವುದು.
ಕುಂಭ ರಾಶಿಯವರಿಗೆ ಗುರುವಿನ ನಕ್ಷತ್ರದ ಸಂಚಾರವು ಆರ್ಥಿಕವಾಗಿ ಸಕಾರಾತ್ಮಕ ಬದಲಾವಣೆಗಳನ್ನು ತರುವುದು. ಇಲ್ಲಿಯವರೆಗೆ ಒಂದೇ ಆದಾಯವನ್ನು ಅವಲಂಬಿಸಿರುವವರಿಗೆ ಹೆಚ್ಚುವರಿ ಆದಾಯದ ಹೊಸ ಅವಕಾಶಗಳು ಸಿಗಬಹುದು. ನಿಮಗೆ ವಹಿಸಿರುವ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವ ಕಾರಣ ನಿಮಗೆ ಹೆಚ್ಚುವರಿ ಜವಾಬ್ದಾರಿಗಳು ಸಿಗಬಹುದು. ಬಡ್ತಿಯ ಅವಕಾಶಗಳು ಹುಟ್ಟಿಕೊಳ್ಳುವುದು. ಬಹಳ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಒಂದೊಂದಾಗಿಯೇ ಪೂರ್ಣವಾಗುವುದು. ಇದು ಹಣದ ಹರಿವು ಹೆಚ್ಚಾಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುವ ಸಾಧ್ಯತೆಯಿದೆ.