
ಶ್ರದ್ಧಾಭಕ್ತಿಯಿಂದ ನೆರವೇರಿದ ಕೈವಾರ ತಾತಯ್ಯ ಮಠದ ರಥೋತ್ಸವ
ಚಿಂತಾಮಣಿ: ತಾಲ್ಲೂಕಿನ ಕೈವಾರದ ಯೋಗಿ ನಾರೇಯಣ ಮಠದಲ್ಲಿ ಶನಿವಾರ ಹುಣ್ಣಿಮೆಯ ಪೂಜೆ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿತು.
ಯೋಗಿ ನಾರೇಯಣ ತಾತಯ್ಯ ಅವರ ಮೂಲ ಬೃಂದಾವನವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಪೂಜೆಗಾಗಿ ಪೀಠವನ್ನು ಅಲಂಕರಿಸಿ ಶ್ರೀದೇವಿ ಭೂದೇವಿ ಸಮೇತ ಅಮರನಾರೇಯಣ ಹಾಗೂ ತಾತಯ್ಯನವರ ಉತ್ಸವ ಮೂರ್ತಿಗಳನ್ನು ಕೂರಿಸಲಾಗಿತ್ತು. ಉತ್ಸವ ಮೂರ್ತಿಗಳಿಗೆ ಪಂಚಾಮೃತ ಮತ್ತು ಮಂಗಳ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.
ಶಾಸ್ತ್ರೋಕ್ತವಾಗಿ ಅಷ್ಟಾವಧಾನ ಸೇವೆ ಸಮರ್ಪಿಸಿ ಮಹಾಮಂಗಳಾರತಿ ಬೆಳಗಲಾಯಿತು. ತಾತಯ್ಯ ಅವರ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ನಾರೇಯಣ–ನಾರೇಯಣ ಎಂಬ ನಾಮಸ್ಮರಣೆಯೊಂದಿಗೆ ದೇವಾಲಯದ ಸುತ್ತಲೂ ರಥೋತ್ಸವ ನಡೆಯಿತು. ನೂರಾರು ಭಕ್ತರು ರಥದೊಂದಿಗೆ ಸುತ್ತು ಹಾಕಿ ಭಕ್ತಿ ಮೆರೆದರು. ತಾತಯ್ಯ ಅವರ ಮೂರ್ತಿ ಮತ್ತು ಜೀವ ಸಮಾಧಿ ಮೂಲ ಬೃಂದಾವನಕ್ಕೆ ಮಾಡಿದ ಹೂವಿನ ಅಲಂಕಾರ ಭಕ್ತರ ಕಣ್ಮನ ತಣಿಸಿತು.
ದೂರದ ಊರುಗಳಿಂದ ಬಂದ ನೂರಾರು ಭಕ್ತರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಯತಿಂದ್ರರ ಮತ್ತು ಜೀವ ಸಮಾಧಿ ಮೂಲ ಬೃಂದಾವನದ ದರ್ಶನ ಪಡೆದರು.
ಯೋಗಿನಾರೇಯಣ ಮಹಿಳಾ ಮಂಡಳಿಯ ಮಹಿಳೆಯರಿಂದ ಸಾಮೂಹಿಕ ಸಂಕೀರ್ತನೆ ನಡೆಯಿತು. ವಿವಿಧೆಡೆಯಿಂದ ಬಂದಿದ್ದ ಹಲವಾರು ಕಲಾವಿದರು ಸಂಕೀರ್ತನಾ ವೇದಿಕೆಯಲ್ಲಿ ಕಲಾಸೇವೆ ಸಮರ್ಪಿಸಿದರು.
ಹುಣ್ಣಿಮೆ ಪ್ರಯುಕ್ತ ಅಖಂಡ ಸಂಕೀರ್ತನೆ ಏರ್ಪಡಿಸಲಾಗಿತ್ತು. ಪ್ರವಚನಕಾರ ಟಿ.ಎಲ್. ಆನಂದ್, ಟ್ರಸ್ಟ್ ಪದಾಧಿಕಾರಿಗಳು, ವ್ಯವಸ್ಥಾಪಕ ಲಕ್ಷ್ಮಿನಾರಾಯಣ್ ಹಾಗೂ ಭಕ್ತರು ಭಾಗವಹಿಸಿದ್ದರು.
ಎಸ್ಐಆರ್: ಅಧ್ವಾನಗಳ ದಾಖಲೆ ಸಂಗ್ರಹಿಸಲಾಗುತ್ತಿದೆ. ಎಲ್ಲ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಮಾಧ್ಯಮಗೋಷ್ಠಿ ನಡೆಸಿ, ಹೋರಾಟ,