ಕಳಸ: ಕುದುರೆಮುಖದಲ್ಲಿ ಆರಲೆ ಹೂಗಳ ಬಿನ್ನಾಣ...!

ಕಳಸ: ಕುದುರೆಮುಖದಲ್ಲಿ ಆರಲೆ ಹೂಗಳ ಬಿನ್ನಾಣ...!

ಕಳಸ: ಕುದುರೆಮುಖದಲ್ಲಿ ಆರಲೆ ಹೂಗಳ ಬಿನ್ನಾಣ...!

ಕಳಸ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಾಮಿಕೊಂಡ ಮತ್ತು ಬಂಡಾಜೆ ಚಾರಣಕ್ಕೆ ತೆರಳುವ ಪ್ರದೇಶದಲ್ಲಿ 2 ವಾರದಿಂದ ನೀಲಕುರುಂಜಿಯನ್ನು ಹೋಲುವ ಆರಲೆ ಹೂಗಳು ಅರಳಿ ನಿಂತಿವೆ.

ಇವು ಚಿಕ್ಕಮಗಳೂರು ಗಿರಿಶ್ರೇಣಿಯ ನೀಲಕುರುಂಜಿಯನ್ನು ಹೋಲುತ್ತಿದ್ದರೂ ಆಕಾರದಲ್ಲಿ ಸಣ್ಣ ಹೂಗಳು. ಹುಲ್ಲುಗಾವಲಿನ ನಡುನಡುವೆ ಹೂವು ಅರಳಿಸಿರುವ ಈ ಗಿಡಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಯಾವುದೇ ಸುವಾಸನೆ ಇಲ್ಲದಿದ್ದರೂ ನಿಗದಿತ ಪ್ರದೇಶದಲ್ಲಿ ದಟ್ಟವಾಗಿ ಹರಡಿರುವ ಈ ಹೂಗಳು ಮನೋಹರವಾದ ದೃಶ್ಯ ಮೂಡಿಸಿವೆ.

‘ನಾವು ನೋಡಿರುವಂತೆ, ಆರಲೆ ಗಿಡಗಳು ಹೂವು ಅರಳಿದ ನಂತರ ಒಣಗಿ ಹೋಗುತ್ತವೆ. ಸ್ವಲ್ಪ ವರ್ಷದ ನಂತರ ಮತ್ತೆ ಮೇಲೆ ಎದ್ದು ಹೂವು ಬಿಡುತ್ತವೆ. ಇದರ ಜೀವನ ಚಕ್ರ ಆಶ್ಚರ್ಯ ತರುತ್ತದೆ’ ಎಂದು ಕೆಂಗನಕೊಂಡದ ರಾಮಪ್ರಕಾಶ್ ಹೇಳುತ್ತಾರೆ.

ಪ್ರವಾಸಿಗರು ಈ ಹೂಗಳನ್ನು ತುಳಿಯದಂತೆ ಕಳೆದ ವಾರ ಅರಣ್ಯ ಸಿಬ್ಬಂದಿ ಎಚ್ಚರ ವಹಿಸಿದ್ದರು. ಎರಡು ವಾರಗಳಿಂದ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಆಗಿದ್ದು ಹೂಗಳಿಗೆ ಆಗಬಹುದಾಗಿದ್ದ ಹಾನಿ ತಡೆದಿದೆ.

ಇದೇ ಜಾತಿಗೆ ಸೇರಿದ ಗುರಿಗೆ ಎಂಬ ಸಸ್ಯ ಕೂಡ ಇದೀಗ ಸ್ಥಳೀಯ ಕಾಡಿನಲ್ಲಿ ಸಾಕಷ್ಟು ಹೂವು ಅರಳಿಸಿದೆ. ದಟ್ಟವಾದ ಕಾಡಿನ ನಡುವೆ ಗುರಿಗೆ 6 ವರ್ಷಕ್ಕೊಮ್ಮೆ ಹೂವು ಬಿಡುತ್ತದೆ ಎನ್ನಲಾಗಿದೆ.

‘ಕಾಡಿನಲ್ಲಿ ಗುರಿಗೆ ಹೂವು ಬಿಟ್ಟರೆ ಆ ವರ್ಷ ಮಳೆ ಕಡಿಮೆ ಎಂಬ ನಂಬಿಕೆ ಇದೆ. ಗುರಿಗೆ ಗಿಡ ಹೂವು ಬಿಟ್ಟರೆ ಸತ್ತು ಹೋಗುತ್ತದೆ ಎಂಬುದು ತಪ್ಪು ನಂಬಿಕೆ. ಗುರಿಗೆ ಹೂವೆಲ್ಲ ಕಾಯಿಯಾಗಿ ನೆಲಕ್ಕೆ ಬಿದ್ದು, ಮತ್ತೆ ಗಿಡ ಹುಟ್ಟುತ್ತದೆ. ಹೀಗೆ ಅದರ ಸಂತತಿ ಮುಂದುವರೆಯುತ್ತದೆ. ಗುರಿಗೆ ಹೂವಿನಲ್ಲಿ ಬಹಳಷ್ಟು ಮಕರಂದ ಇದ್ದು, ಜೇನು ನೊಣಗಳಿಗೆ ಮಳೆಗಾಲದಲ್ಲಿ ಅಪರೂಪಕ್ಕೆ ಸಿಗುವ ಭರ್ಜರಿ ಆಹಾರ’ ಎಂದು ಹಳುವಳ್ಳಿಯ ಜೇನು ತಜ್ಞ ವಲ್ಲಿಕುಡಿಗೆಯ ಚಂದ್ರಶೇಖರ್ ಸಂತಸದಿಂದ ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-126-1149049021

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ