ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿದ ನಕಲಿ ಔಷಧ ಮಾರಾಟ ಜಾಲ

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿದ ನಕಲಿ ಔಷಧ ಮಾರಾಟ ಜಾಲ

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿದ ನಕಲಿ ಔಷಧ ಮಾರಾಟ ಜಾಲ

ಬೆಂಗಳೂರು: ನಕಲಿ ಔಷಧಗಳ ಮರು ಪ್ಯಾಕಿಂಗ್ ಹಾಗೂ ಮಾರಾಟ ಜಾಲ ಅಂತರರಾಷ್ಟ್ರೀಯ ಮಟ್ಟದವರೆಗೆ ವ್ಯಾಪಿಸಿರುವುದನ್ನು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಮತ್ತು ವಿಶೇಷ ತನಿಖಾ ತಂಡ (ಎಸ್‌ಐಟಿ) ಪತ್ತೆ ಮಾಡಿದೆ.

ಆರೋಪಿಗಳು, ನಕಲಿ ಔಷಧಗಳಿಗೆ ಲೇಬಲ್​​ಗಳನ್ನು ಟರ್ಕಿ ದೇಶದಿಂದ ಹಡಗು ಮೂಲಕ ಆಮದು ಮಾಡಿಕೊಳ್ಳುತ್ತಿದ್ದರು. ಬಹುರಾಷ್ಟ್ರೀಯ ಕಂಪನಿ ಹಾಗೂ ಬೇರೆ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಲೇಬಲ್ ಅಂಟಿಸಿ ಔಷಧ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಮಾರಾಟ ಮಾಡಿ ವಂಚನೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.

ಎರಡು ದಿನಗಳ ಹಿಂದೆಯಷ್ಟೇ ತನಿಖಾ ತಂಡ ಬೆಂಗಳೂರು ಸೇರಿದಂತೆ ಆರು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನ ಮಿನರ್ವ ವೃತ್ತದಲ್ಲಿನ ಕೃಪಾ ಹೆಲ್ತ್‌ ಕೇರ್ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ ಅಪಾರ ಪ್ರಮಾಣದ ನಕಲಿ ಔಷಧಗಳು, ನಕಲಿ ಬಿಲ್‌ಗಳು ಪತ್ತೆಯಾಗಿದ್ದವು.

ಸುಮಾರು ನೂರಕ್ಕೂ ಹೆಚ್ಚು ಔಷಧ ಅಂಗಡಿಗಳು ಮತ್ತು ಆಸ್ಪತ್ರೆಗಳಿಗೆ ನಕಲಿ ಔಷಧ ಪೂರೈಕೆ ಆಗಿರುವುದು ಗೊತ್ತಾಗಿದೆ. ಕಂಪನಿ ಮಾಲೀಕ ವೀರೇಶ್ ಕುಮಾರ್‌ ಅವರನ್ನು ಎಸ್‌ಐಟಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಹಲವು ಸಂಗತಿಗಳು ಹೊರ ಬಿದ್ದಿವೆ.

ಆರೋಪಿಗಳು, ಕ್ಯಾನ್ಸರ್ ಔಷಧಗಳನ್ನು ವಿದೇಶಗಳಿಗೆ ಅಕ್ರಮವಾಗಿ ಪೂರೈಕೆ ಮಾಡುತ್ತಿದ್ದರು. ವೀರೇಶ್ ಕುಮಾರ್ ಮೂಲತಃ ರಾಜಸ್ಥಾನದವರಾಗಿದ್ದು, ದಶಕದ ಹಿಂದೆ ನಗರಕ್ಕೆ ಬಂದು ಸಂಬಂಧಿಕರೊಬ್ಬರ ಔಷಧ ಮಾರಾಟ ಏಜೆನ್ಸಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸಕ್ಕೆ ಸೇರಿದ್ದರು. ನಂತರ ಔಷಧ ವ್ಯಾಪಾರದ ಬಗ್ಗೆ ಮಾಹಿತಿ ಪಡೆದು ಕೃಪಾ ಹೆಲ್ತ್‌ ಕೇರ್‌ ಹೆಸರಿನಲ್ಲಿ ಸಂಸ್ಥೆ ಆರಂಭಿಸಿದರು ಎಂದು ಮೂಲಗಳು ತಿಳಿಸಿವೆ.

ಈ ಜಾಲದ ಸೂತ್ರಧಾರಿ ಆರ್. ಪ್ರಶಾಂತ್ ಮತ್ತು ಆತನ ಸಹಚರರೊಂದಿಗೆ ವೀರೇಶ್ ಕುಮಾರ್ ನಿಕಟ ಸಂಪರ್ಕದಲ್ಲಿರುವುದು ಹಾಗೂ ಪ್ರಶಾಂತ್ ಉದ್ಯಮದ ಪಾಲುದಾರಿಕೆ ಹೊಂದಿರುವುದು ತನಿಖೆ ವೇಳೆ ಗೊತ್ತಾಗಿದೆ. ತಯಾರಾಗುತ್ತಿದ್ದ ನಕಲಿ ಔಷಧಗಳನ್ನು ಮಿನರ್ವ ಸರ್ಕಲ್‌ನಲ್ಲಿರುವ ಗೋದಾಮಿಗೆ ತಂದು ನಂತರ ನಗರದ ಔಷಧ ಅಂಗಡಿ ಹಾಗೂ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಸದ್ಯ ಪರಪ್ಪನ ಅಗ್ರಹಾರ ಜೈಲಿ ನಲ್ಲಿರುವ ವೀರೇಶ್ ಅವರನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ಮತ್ತೆವಿಚಾರಣೆ ನಡೆಸಲು ತನಿಖಾ ತಂಡಮುಂದಾಗಿದೆ. ಪ್ರಕರಣ ಸಂಬಂಧ 5 ಆರೋಪಿಗಳನ್ನು ಬಂಧಿಸಲಾಗಿದೆ.

ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಆಯುಕ್ತ ಶ್ರೀನಿವಾಸ್, ಬೆಂಗಳೂರು ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ನೇತೃತ್ವದ ತಂಡವು ಆಗಸ್ಟ್‌ 18ರಂದು ಬಿಡದಿಯ ಕುರುಬರಕೇರನ ಹಳ್ಳಿಯ ಫಾರ್ಮ್‌ ಹೌಸ್‌ (ನಂ.34) ಮೇಲೆ ದಾಳಿ ನಡೆಸಿ ಸುಮಾರು ₹4.91 ಕೋಟಿ ಮೌಲ್ಯದ ನಕಲಿ ಔಷಧಗಳು, ಬಾಟಲಿಗಳು, ನಕಲಿ ಲೇಬಲ್‌ಗಳು, ಸ್ಟ್ಯಾಂಪ್‌ಗಳು, ಪ್ಯಾಕೇಜಿಂಗ್ ಸಾಮಗ್ರಿ ಮತ್ತು ಉಪಕರಣಗಳನ್ನು ವಶಪಡಿಸಿಕೊಂಡಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಸಮಗ್ರ ತನಿಖೆಗಾಗಿ ಬೆಂಗಳೂರು ಪಶ್ಚಿಮ ವಲಯದ ಜಂಟಿ ಪೊಲೀಸ್ ಕಮಿಷನರ್‌ ಸಿ.ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಆದೇಶಿಸಿತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ