BESCOM: ಗಣೇಶ ಪೆಂಡಾಲ್‌ಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ, ಗೈಡ್‌ಲೈನ್ಸ್ ಹೊರಡಿಸಿದ ಬೆಸ್ಕಾಂ

BESCOM: ಗಣೇಶ ಪೆಂಡಾಲ್‌ಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ, ಗೈಡ್‌ಲೈನ್ಸ್ ಹೊರಡಿಸಿದ ಬೆಸ್ಕಾಂ

BESCOM: ಗಣೇಶ ಪೆಂಡಾಲ್‌ಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ, ಗೈಡ್‌ಲೈನ್ಸ್ ಹೊರಡಿಸಿದ ಬೆಸ್ಕಾಂ

ಬೆಂಗಳೂರು: ಸೆಪ್ಟೆಂಬರ್ 14ರಂದು ಸೋಮವಾರ ಗಣೇಶೋತ್ಸವ ಹಬ್ಬ ಹಿನ್ನೆಲೆ ಮೂರ್ತಿ ಪ್ರತಿಷ್ಠಾಪನೆಗೆ ಸಾರ್ವಜನಿಕ ಗಣೇಶ ಮಂಡಳಿ, ಉತ್ಸವ ಸಮಿತಿಗಳು ಸಜ್ಜಾಗಿವೆ. ಈ ಪೆಂಡಾಲ್‌ಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಂಗಳೂರು ವಿದ್ಯುತ್ ಸರಬರಾಜ ಕಂಪನಿ ನಿಯಮಿತ (ಬೆಸ್ಕಾಂ) ಮಾರ್ಗಸೂಚಿಗಳ ಆದೇಶ ಹೊರಡಿಸಿದೆ. ನಿಯಮ ಪಾಲನೆ ಕಡ್ಡಾಯವೆಂದು ತಿಳಿಸಿದೆ.

ತಾತ್ಕಾಲಿಕ ವಿದ್ಯುತ್ ಪಡೆಯುವ ಮೂಲಕ ಸ್ಥಳೀಯ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿರಬೇಕು. ಬಳಿಕವೇ ಗಣೇಶೋತ್ಸವ ಪೆಂಡಾಲ್‌ಗಳ ಸ್ಥಳಕ್ಕೆ ಬಂದು ಬೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸಿ ವಿದ್ಯುತ್ ಪೂರೈಕೆಗೆ ಸುರಕ್ಷತೆವೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.

ಇನ್ನೂ ಪೆಂಡಾಲ್‌ಗಳಲ್ಲಿ ವೈರಿಂಗ್ ಸಂಪೂರ್ಣ ಸುರಕ್ಷತೆಯಿಂದ ಕೂಡಿರಬೇಕು. ವಿದ್ಯುತ್ ಸಂಪರ್ಕಕ್ಕೂ ಮುನ್ನ ಅರ್ಥ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್ ಅಳವಡಿಕೆ ಕಡ್ಡಾಯವಾಗಿರುತ್ತದೆ. ಇಳೆ ಬೀಳುವಂತೆ ವಿದ್ಯುತ್ ವೈಯರ್, ಅಪಾಯಕಾರಿ ಸಂಪರ್ಕ, ಸುರಕ್ಷತೆ ಅಲ್ಲದಿದ್ದರೆ ವಿದ್ಯುತ್ ಸಂಪರ್ಕ ಸಿಗುವುದು ಅನುಮಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾನರ್, ಪೋಸ್ಟರ್‌ ನಿಷೇಧ

ಗಣೇಶನ ಭಕ್ತರು ಪೆಂಡಾಲ್‌ಗಳ ಮುಂದೆ, ರಸ್ತೆ ಬದಿ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಿದ್ಯುತ್ ಕಂಬಗಳ ಮೇಲೆ, ಬೆಸ್ಕಾಂ ಸಂಬಂಧಿತ ಟಿಸಿ, ಉಪಕೇಂದ್ರ, ತಂತಿಗಳ ಮೇಲೆ ಉತ್ಸವ ಸಂಬಂಧ ಪೋಸ್ಟರ್, ಬ್ಯಾನರ್ ಕಟ್ಟುವುದು, ಇಳೆ ಬಿಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಗಣೇಶ ಮೂರ್ತಿ ಮೆರವಣಿಗೆ ಮಾರ್ಗಗಳಲ್ಲಿ ವಿದ್ಯುತ್ ತಂತಿಗಳನ್ನು ಮೊದಲೇ ಪರಿಶೀಲಿಸಬೇಕು. ವಾಯರ್‍‌ಗಳು ಜೋತು ಬಿದ್ದಿದ್ದರೆ, ಸಡಿಲ ತಂತಿಗಳು ಕಂಡು ಬಂದಲ್ಲಿ, ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಅದೆಲ್ಲ ಸರಿಪಡಿಸುವಂತೆ ತನ್ನ ಸಿಬ್ಬಂದಿಗೆ ಬೆಸ್ಕಾಂ ತಿಳಿಸಿದೆ. ವಿದ್ಯುತ್ ಪರಿಕರಗಳ ಬಳಿ 'ಡೇಂಜರ್ ಝೋನ್' ಗುರುತು ಹಾಕಬೇಕು, ಪ್ರಿ-ಪೇಯ್ಡ್ ಮೀಟರ್ ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ಮೀಟರ್ ಅಳವಡಿಸಿ ಬಳಕೆಯ ಪ್ರಮಾಣ ತಂತ್ರಾಂಶದಲ್ಲಿ ಹಾಕಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೂರ್ತಿ ವಿಸರ್ಜನೆಗೆ 659 ಮೊಬೈಲ್ ಟ್ಯಾಂಕ್‌ಗಳ

ಸೋಮವಾರ ಮೂರ್ತಿ ಪ್ರತಿಷ್ಠಾಪನೆ ಬಳಿಕ ನಂತರ ಹಂತ ಹಂತವಾಗಿ ಗಣೇಶ ವಿಸರ್ಜನೆ ನಡೆಯಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವತಿಯಿಂದ ಬೆಂಗಳೂರಿನಾದ್ಯಂತ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 42 ಕೆರೆಗಳ ಆವರಣದಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ. ಅಲ್ಲಿಯೇ ಮೂರ್ತಿ ವಿಸರ್ಜನೆ ಮಾಡಬೇಕಿದೆ. ಇನ್ನೂ ಹೆಚ್ಚಿನ ಅನುಕೂಲಕ್ಕಾಗಿ 659 ಮೊಬೈಲ್ ಟ್ಯಾಂಕರ್‌ಗಳ ವ್ಯವಸ್ಥೆ ಸಹ ಸಿದ್ದಗೊಳಿಸಲಾಗಿದೆ.

ನಗರದ ಪ್ರಸಿದ್ಧ ಯಡಿಯೂರು ಕೆರೆ, ಹಲಸೂರು ಕೆರೆ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆ ಪೂರ್ಣಗೊಂಡಿದೆ. ಮೂರ್ತಿ ವಿಸರ್ಜನೆ ಕಲ್ಯಾಣಿಗಳಲ್ಲಿ ನಾಳೆ ನೀರು ತುಂಬಿಸುವ ಕಾರ್ಯ ಮುಗಿಯಲಿದೆ. ಪಾಲಿಕೆ ನೇಮಿಸಿರುವ ನಿಯೋಜಿತ ಸ್ವಯಂಸೇವಕರ ಮೂಲಕವೇ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯ ನೆರವೇರಿಸಲು ನಿರ್ಧರಿಸಲಾಗಿದೆ. ಗಣೇಶೋತ್ಸವ ಹಾಗೂ ವಿಸರ್ಜನೆ ವೇಳೆ ಜಿಬಿಎ ಸೂಚಿಸುವ ನಿಯಮಗಳ ಪಾಲನೆ ಕಡ್ಡಯವಾಗಿದೆ.

bescom Guidelines ganesha chaturthi festival gba idol

bescom Guidelines ganesha chaturthi festival gba idol

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ