ಹೊಸದುರ್ಗ: ಭದ್ರಾ ಕಾಲುವೆ ನೀರಿಗಾಗಿ ದೊಡ್ಡಘಟ್ಟ ರೈತರಿಂದ ಬೈಕ್ ರ‍್ಯಾಲಿ

ಹೊಸದುರ್ಗ: ಭದ್ರಾ ಕಾಲುವೆ ನೀರಿಗಾಗಿ ದೊಡ್ಡಘಟ್ಟ ರೈತರಿಂದ ಬೈಕ್ ರ‍್ಯಾಲಿ

ಹೊಸದುರ್ಗ: ಭದ್ರಾ ಕಾಲುವೆ ನೀರಿಗಾಗಿ ದೊಡ್ಡಘಟ್ಟ ರೈತರಿಂದ ಬೈಕ್ ರ‍್ಯಾಲಿ

ಹೊಸದುರ್ಗ: ಭದ್ರಾ ಎಡದಂಡೆ ಕಾಲುವೆಯ ನೀರಿನಿಂದ ವಂಚಿತವಾಗಿರುವ ದೊಡ್ಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ನೀರಿನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರೈತರು ಗುರುವಾರ ದೊಡ್ಡಘಟ್ಟ ಗ್ರಾಮದಿಂದ ಬೈಕ್ ರ‍್ಯಾಲಿ ಮೂಲಕ ಪಟ್ಟಣಕ್ಕೆ ಬಂದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಮಾತನಾಡಿ, ‘ದೊಡ್ಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಭದ್ರಾ ಕಾಲುವೆ ಎಡದಂಡೆಯ ವ್ಯಾಪ್ತಿಯಲ್ಲಿದ್ದರೂ ಸಮರ್ಪಕವಾಗಿ ನೀರಿನ ಸೌಲಭ್ಯ ದೊರೆಯುತ್ತಿಲ್ಲ. ಪಾಪೇನಹಳ್ಳಿ, ದುಗ್ಗಾವರ, ಹುಲಿಕೆರೆ, ಗೂಳಿಹಟ್ಟಿ ಹಾಗೂ ನವಿಲುಕಲ್ಲು ಭೋವಿ ಹಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೆರೆಗಳಿಲ್ಲದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಾಗೂ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ’ ಎಂದು ಹೇಳಿದರು.

‘ಈ ಭಾಗದ ರೈತರು ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಲ್ಲಾಪುರದ ಬಳಿ ಭದ್ರಾ ಕಾಲುವೆ ಹಾದು ಹೋಗುತ್ತಿದ್ದು, ಅಲ್ಲಿಂದ ಪೈಪ್‌ಲೈನ್ ಮೂಲಕ ಹಿರೇಹಳ್ಳ, ಗಾಂಧಾರಿ ಹಳ್ಳ ಹಾಗೂ ಮೂಡ್ಲಾ ಹಳ್ಳಗಳಿಗೆ ಭದ್ರಾ ಚಾನಲ್ ನೀರು ಹರಿಸುವ ವ್ಯವಸ್ಥೆ ಕಲ್ಪಿಸಬೇಕು. ಈ ಮೂಲಕ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯ ನೀರಿನ ಸೌಲಭ್ಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಹಳ್ಳಗಳಿಗೆ ನೀರು ಹರಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಈ ಭಾಗದ ರೈತರ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಅನುಕೂಲವಾಗಲಿದೆ. ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಭದ್ರಾ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ರೈತರು ಆಗ್ರಹಿಸಿದರು.

ತಹಶೀಲ್ದಾರ್ ತಿರುಪತಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಗೂಳಿಹಟ್ಟಿ ರಮೇಶ್, ಜಿ.ಪಿ. ಶಂಕರಮೂರ್ತಿ, ಹಾಲಸಿದ್ದಪ್ಪ, ಪ್ರಸನ್ನಕುಮಾರ್, ಮನುಕುಮಾರ್, ಗಿರೀಶ್, ಬಸವರಾಜ್, ಸಿ. ಕುಮಾರ್ ಹಾಗೂ ನೂರಾರು ರೈತರು ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ