
ಸೋಲಾಪುರ: ಆದರ್ಶ ಶಿಕ್ಷಕರಿಗೆ ಕಾಂಗ್ರೆಸ್ ಶಿಕ್ಷಕರ ಘಟಕದಿಂದ ಸನ್ಮಾನ
ಸೋಲಾಪುರ: ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಹಿಲ್ಯಾಬಾಯಿ ಪ್ರೌಢಶಾಲೆ ಮತ್ತು ಕಿರಿಯ ಮಹಾವಿದ್ಯಾಲಯದ ಪ್ರಾಂಶುಪಾಲ ಇಸ್ಮಾಯಿಲ್ ಬಂದೇನವಾಜ್ ಶೇಖ್, ಕಲಾ ವಿಠ್ಠಲ ಚನ್ನಪಟ್ಟಣ ಸೇರಿದಂತೆ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಕಾಂಗ್ರೆಸ್ ಶಿಕ್ಷಕರ ಘಟಕದ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಸನ್ಮಾನಿಸಲಾಯಿತು.
ಕಾಂಗ್ರೆಸ್ ಸಮಿತಿಯ ಜಿಲ್ಲಾ ಅಧ್ಯಕ್ಷ ಸಾತಲಿಂಗಪ್ಪ ಶೇಟಗಾರ ಹಾಗೂ ನಗರ ಅಧ್ಯಕ್ಷ ಚೇತನ ನರೋಟೆ ಅವರು ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಅಭಿನಂದಿಸಿ, ಮುಂದಿನ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಶುಭ ಹಾರೈಸಿದರು.
ಶಿಕ್ಷಕರ ಘಟಕದ ಅಧ್ಯಕ್ಷ ಸುಬೋಧ ಸುತ್ಕಾರ್, ಸಹ ಕಾರ್ಯದರ್ಶಿಗಳಾದ ರಾಹುಲ ಕಟಾರೆ, ಇರ್ಫಾನ್ ಪಟೇಲ್, ಪ್ರಧಾನ ಕಾರ್ಯದರ್ಶಿ ಶರದ ಫುಂಡೆ, ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಇಲಿಯಾಸ್ ಶೇಖ್, ಸೋಲಾಪುರ ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ನೂರ್ ಅಹ್ಮದ್ ನಲವಾರ್, ಸಹಾಯಕ ಸಚಿನ್ ಯೆರವಡೆ, ರಾಜು ನಿಲಗಂಟಿ, ಅಭಿಲಾಷ್ ಆಚುಗಟ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.