ಕೋಲಾರದಲ್ಲಿ 'ಸ್ವಚ್ಛತೆಯೇ ಸೇವೆ' ಆಂದೋಲನ: ಜಿ.ಪಂ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ

ಕೋಲಾರದಲ್ಲಿ 'ಸ್ವಚ್ಛತೆಯೇ ಸೇವೆ' ಆಂದೋಲನ: ಜಿ.ಪಂ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ

ಕೋಲಾರದಲ್ಲಿ 'ಸ್ವಚ್ಛತೆಯೇ ಸೇವೆ' ಆಂದೋಲನ: ಜಿ.ಪಂ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ

ಕೋಲಾರ: ಗ್ರಾಮೀಣ ಸಮುದಾಯಗಳಲ್ಲಿ ಶುಚಿತ್ವ ಹಾಗೂ ಉತ್ತಮ ನೈರ್ಮಲ್ಯ ಅಭ್ಯಾಸ ರೂಢಿಸುವ ನಿಟ್ಟಿನಲ್ಲಿ ಸೆ.17 ರಿಂದ ಅ.2 ರವರೆಗೆ ಜಿಲ್ಲೆಯಲ್ಲಿ 'ಸ್ವಚ್ಛತೆಯೇ ಸೇವೆ-2026' (ಸ್ವಚ್ಛತಾ ಹಿ ಸೇವಾ) ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದ್ದಾರೆ.

ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿ, ಇದನ್ನು ಒಂದು ಜನಾಂದೋಲನವನ್ನಾಗಿ ರೂಪಿಸುವುದು ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಸಾಮೂಹಿಕ ಸ್ವಚ್ಛತಾ ಚಟುವಟಿಕೆಗಳನ್ನು ಬಲಪಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಈ ವರ್ಷದ ಅಭಿಯಾನವು 'ಸ್ವಚ್ಛತೆಯಲ್ಲಿ ಸಹಭಾಗಿತ್ವ - ಸ್ವಚ್ಛ ಭಾರತ, ವಿಕಸಿತ ಭಾರತ' ಎಂಬ ಧೈಯವಾಕ್ಯವನ್ನು ಹೊಂದಿದೆ. ಸ್ವಚ್ಛ ಹಾಗೂ ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಪ್ರತಿಯೊಬ್ಬರ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ ಎಂದಿದ್ದಾರೆ.

ಅಭಿಯಾನದ ಅಂಗವಾಗಿ ಗ್ರಾಮಗಳಲ್ಲಿ ಕಸ ತುಂಬಿರುವ ಜಾಗಗಳು, ಕೊಳಕು ಪ್ರದೇಶಗಳು ಹಾಗೂ ಜನಸಂಚಾರ ಹೆಚ್ಚಿರುವ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ, ನಕ್ಷೆಗೊಳಿಸಿ, ಸಮಯಬದ್ಧವಾಗಿ ಸ್ವಚ್ಛಗೊಳಿಸುವ ಮೂಲಕ ಸುಂದರ ಸ್ಥಳಗಳನ್ನಾಗಿ ಪರಿವರ್ತಿಸಲಾಗುವುದು. ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು 'ಸ್ವಚ್ಛ ಪಾಠಶಾಲೆ' ಅಡಿಯಲ್ಲಿ 'ಸ್ವಚ್ಛತಾ ಜ್ಞಾನ ಯಾತ್ರೆ'ಯ ಮೂಲಕ ಅವರನ್ನು ಸ್ವಚ್ಛತಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗುವುದು. ಇದರ ಜೊತೆಗೆ ಮನೆ-ಮನೆಗೆ ತೆರಳಿ ನಾಗರಿಕರನ್ನು ತೊಡಗಿಸಿಕೊಳ್ಳುವ ಮೂಲಕ 2026ರ ಘನತ್ಯಾಜ್ಯ ನಿರ್ವಹಣಾ ನಿಯಮಗಳು ಮತ್ತು ಕಸವನ್ನು 4 ವಿಧಗಳಲ್ಲಿ ವಿಂಗಡಿಸುವ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ದೇಶದ ಸ್ವಚ್ಛತೆಗಾಗಿ ನಾಗರಿಕರು ಕೈಜೋಡಿಸುವಂತೆ ಪ್ರೇರೇಪಿಸಲು ಅ.1 ರಂದು 'ಒಂದು ದಿನ, ಒಂದು ಗಂಟೆ, ಒಟ್ಟಾಗಿ' ಎಂಬ ಪರಿಕಲ್ಪನೆಯಡಿ ಬೃಹತ್ ಸಾಮೂಹಿಕ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಾಗೆಯೇ, ಸ್ವಚ್ಛ ಭಾರತ ದಿವಸದ ಅಂಗವಾಗಿ ಅ.2 ರಂದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ನಡೆಸಲಾಗುವುದು. ಈ ಆಂದೋಲನದಲ್ಲಿ ಜಿಲ್ಲೆಯ ಎಲ್ಲಾ 154 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಕೈಗೊಂಡು, ಗ್ರಾಮಗಳನ್ನು 'ಸ್ವಚ್ಛ ಸುಂದರ ಗ್ರಾಮ'ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಈ ವೇಳೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್‌ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ