ಕಾರಟಗಿ: ಒಂದೆಡೆ ಬಿರುಬಿಸಿಲು, ಮತ್ತೊಂದೆಡೆ ಮಾತಿನ ಪ್ರಹಾರ

ಕಾರಟಗಿ: ಒಂದೆಡೆ ಬಿರುಬಿಸಿಲು, ಮತ್ತೊಂದೆಡೆ ಮಾತಿನ ಪ್ರಹಾರ

ಕಾರಟಗಿ: ಒಂದೆಡೆ ಬಿರುಬಿಸಿಲು, ಮತ್ತೊಂದೆಡೆ ಮಾತಿನ ಪ್ರಹಾರ

ಕಾರಟಗಿ: ಸಮೃದ್ಧವಾಗಿ ಮಳೆ ಸುರಿಯಬೇಕಿದ್ದ ಈಗಿನ ದಿನಗಳಲ್ಲಿ ಬಿರುಬಿಸಿಲು ಕಾಡುತ್ತಿದ್ದು, ಬಿಸಿಲಿನ ನಡುವೆಯೂ ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆ ಮುಂದುವರಿದಿದೆ. ಮತ್ತೊಂದೆಡೆ ಆ ಪಕ್ಷದ ನಾಯಕರು ರಾಜ್ಯ ‌ಕಾಂಗ್ರೆಸ್ ನಾಯಕರ ವಿರುದ್ಧ ಮಾತಿನ ಪ್ರಹಾರ ಮುಂದುವರಿಸಿದ್ದಾರೆ.

ಪಾದಯಾತ್ರೆಯ ಐದನೇ ದಿನವಾದ ಶನಿವಾರ ಕಾರಟಗಿ ಪಟ್ಟಣದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪೂಜೆ ಸಲ್ಲಿಸಿ ಕನಕದಾಸ ವೃತ್ತದಿಂದ ಪಾದಯಾತ್ರೆ ಮುಂದುವರಿಸಿದರು. ಅನೇಕ ನಾಯಕರು ಜೊತೆಯಲ್ಲಿ ಹೆಜ್ಜೆ ಹಾಕಿದರು.

ಹೊತ್ತು ಹೆಚ್ಚಾದಂತೆ ಬಿಸಿಲು ಏರುತ್ತಲೇ ಇದ್ದರೂ ಕಲಾ ತಂಡಗಳು ನೃತ್ಯ ಪ್ರದರ್ಶಿಸಿದವು. ಬಹುತೇಕ ‌ನಾಯಕರು ರಾಜ್ಯ ಕಾಂಗ್ರೆಸ್‌ ಸರ್ಕಾರ ವಾಲ್ಮೀಕಿ ಹಾಗೂ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಮೀಸಲಾತಿಯಲ್ಲಿಯೂ ಅನ್ಯಾಯ ಆಗಿದೆ ಎಂದು ಚಾಟಿ‌ ಬೀಸಿದರು.

ಮರಳಿ ಹಾಗೂ ಪಾದಯಾತ್ರೆ ಅಂತ್ಯಕಂಡ ಜಂಗಮರ‌ ಕಲ್ಗುಡಿಯಲ್ಲಿ‌ ಮಾತನಾಡಿದ ಬಿ.ವೈ. ವಿಜಯೇಂದ್ರ, ‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತುಂಗಭದ್ರಾ ಜಲಾಶಯದಲ್ಲಿ ಕಡಿಮೆ ನೀರು ಇದ್ದರೂ ರೈತರಿಗೆ ಕೊಟ್ಟಿದ್ದರು. ಆದರೆ, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ದುರಹಂಕಾರಿ‌. ಎರಡನೆ ಬೆಳೆಗೆ ನೀರು ಕೊಡುವುದಿಲ್ಲ ಎನ್ನುತ್ತಿದ್ದಾನೆ’ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ‌ ನಾರಾಯಣಸ್ವಾಮಿ‌ ಮಾತನಾಡಿ, ‘ನಾವು ಬಿಸಿಲಿನ ಬೇಗೆಗೆ ಸುಡುತ್ತಿದ್ದರೆ ಕಾಂಗ್ರೆಸ್ ‌ನಾಯಕರಿಗೆ ನಮ್ಮ ಪಾದಯಾತ್ರೆ ‌ನೋಡಿ ಪ್ಯಾಂಟ್ ಒದ್ದೆಯಾಗಿದೆ. ದಲಿತರ ದುಡ್ಡು‌ ನುಂಗಿದ್ದೀರಿ, ₹ 5 ಸಾವಿರ ಕೋಟಿ ಮಹಿಳೆಯರ ಹಣ ಕೊಳ್ಳೆ ಹೊಡೆದಿದ್ದೀರಿ’ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಎನ್.ರವಿಕುಮಾರ್, ರಘು ಕೌಟಿಲ್ಯ, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮುಖಂಡ ಡಾ. ಬಸವರಾಜ ಕ್ಯಾವಟರ್ ಸೇರಿದಂತೆ ಅನೇಕರು ಇದ್ದರು.

ಪರ್ಯಾಯ ‌ನೀರಾವರಿ ಯೋಜನೆ: ಸದನದಲ್ಲಿ ‌ಚರ್ಚೆ

ಮರಳಿ: ‘ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿಗೆ ಪರ್ಯಾಯವಾಗಿ ‌ನವಲಿ ಸಮಾನಾಂತರ ಜಲಾಶಯ ಯೋಜನೆ‌ ಅನುಷ್ಠಾನದ ಸಾಧಕ – ಬಾಧಕ ಬಗ್ಗೆ ಸದನದಲ್ಲಿ ಮಾತನಾಡುವೆ’ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಮರಳಿಯಲ್ಲಿ ಹೊಲದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಅಭಿಪ್ರಾಯ ಆಲಿಸಿದರು. ಬಳಿಕ ಮಾತನಾಡಿ, ‘ಆಡಳಿತ ಪಕ್ಷ ನೀರಾವರಿ ಹಾಗೂ ರೈತರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ವಿಪಕ್ಷವಾಗಿಯೂ ನಮ್ಮ ಕೆಲಸ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಕೆಲ ರೈತರು ಹೂಳು ತೆಗೆಸಲು, ಇನ್ನೂ ಕೆಲವರು ನವಲಿ ಜಲಾಶಯ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು. ರೈತ ಮುಖಂಡರಾದ ಕೆಸರಟ್ಟಿ ಶರಣಗೌಡ, ಕಾಡಾ‌ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ದುರಗಪ್ಪ, ಕೊತ್ವಾಲ ಶರಣಪ್ಪ, ಅಂಬಣ್ಣ ಬೂದಗುಂಪ, ವಿನೋದ ಪಾಟೀಲ, ಇತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-35-1982918473

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ