ಯುಪಿಐಗೆ ಶುಲ್ಕ: ಮೋದಿಯಿಂದ ಟ್ರಂಪ್ ತುಷ್ಟೀಕರಣ; ಕಾಂಗ್ರೆಸ್ ಕಿಡಿ

ಯುಪಿಐಗೆ ಶುಲ್ಕ: ಮೋದಿಯಿಂದ ಟ್ರಂಪ್ ತುಷ್ಟೀಕರಣ; ಕಾಂಗ್ರೆಸ್ ಕಿಡಿ

ಯುಪಿಐಗೆ ಶುಲ್ಕ: ಮೋದಿಯಿಂದ ಟ್ರಂಪ್ ತುಷ್ಟೀಕರಣ; ಕಾಂಗ್ರೆಸ್ ಕಿಡಿ

ನವದೆಹಲಿ: 'ಶೂನ್ಯ ಎಂಡಿಆರ್' ವ್ಯವಸ್ಥೆ ಕೈಬಿಟ್ಟು, ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಬೇಕೆಂಬ ಅಮೆರಿಕದ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮಣಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರು, 'ನೋಟಾ'(NOTA)ಪದಕ್ಕೆ ‘ನರೇಂದ್ರ ಅವರ ನಿರಂತರ ಟ್ರಂಪ್ ಓಲೈಕೆ’(Narendra's Ongoing Trump Appeasement) ಎಂಬ ಹೊಸ ಅರ್ಥ ನೀಡಿದ್ದಾರೆ ಎಂದು ಟೀಕಿಸಿದೆ.

‘ಅಮೆರಿಕದ ಕ್ರೆಡಿಟ್/ಡೆಬಿಟ್ ಕಾರ್ಡ್ ಸೇವೆ ಒದಗಿಸುವ ಕಂಪನಿಗಳು, ಯುಪಿಐ ಜೊತೆ ಸ್ಪರ್ಧಿಸಲು ಅನುವು ಮಾಡಿಕೊಡುವ ಉದ್ದೇಶದಿಂದಲೇ ಮರ್ಚೆಂಟ್ ಡಿಸ್ಕೌಂಟ್ ರೇಟ್(ಎಂಡಿಆರ್) ಜಾರಿ ಕ್ರಮವನ್ನು ಸರ್ಕಾರ ಕೈಗೊಂಡಿದೆಯೇ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ಆದರೆ, ಇದಕ್ಕೆ ಪ್ರತಿಯಾಗಿ ಅಮೆರಿಕ ನಮಗೇನು ನೀಡುತ್ತಿದೆ. ಭಾರತ ಸೇರಿದಂತೆ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಮಸೂದೆ ಮೇಲೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮತದಾನ ನಡೆಯಲಿದೆ ಎಂದಿದ್ದಾರೆ. ಸೆನೆಟ್ ಈಗಾಗಲೇ ಈ ಮಸೂದೆಯನ್ನು ಅಂಗೀಕರಿಸಿದೆ.

ಟ್ರಂಪ್ ಆಡಳಿತವು ಭಾರತೀಯ ವಲಸಿಗರ ಮೇಲೆ ಕಠಿಣ ಕಾನೂನು ಜಾರಿಗೆ ತರುತ್ತಿದೆ. ಎಚ್‌-1ಬಿ ವೀಸಾ ವೆಚ್ಚ ಹೆಚ್ಚಿಸಲಾಗಿದೆ. ಅಂತಹ ವೀಸಾ ಹೊಂದಿರುವವರನ್ನು ಕೆಲಸ ಕಳೆದುಕೊಂಡ ತಕ್ಷಣ ಗಡೀಪಾರು ಮಾಡಬಹುದು ಎಂದು ಎಕ್ಸ್ ಪೋಸ್ಟ್‌ನಲ್ಲಿ ರಮೇಶ್ ತಿಳಿಸಿದ್ದಾರೆ.

‘ಯುಪಿಐ ಪಾವತಿ ಉಚಿತವಾಗಿರುವುದರಿಂದ ವೀಸಾ ಮತ್ತು ಮಾಸ್ಟರ್‌ಕಾರ್ಡ್‌ಗೆ ಉಳಿಗಾಲವಿಲ್ಲ ಎಂದು ಅಮೆರಿಕದ ಪ್ರತಿನಿಧಿ ಹೇಳಿದ್ದರು. ಅವರ ಒತ್ತಡಕ್ಕೆ ಮಣಿದ ಮೋದಿ, ಶೂನ್ಯ ಎಂಡಿಆರ್‌ ವ್ಯವಸ್ಥೆಯನ್ನು ರದ್ದು ಮಾಡಿ, ಶುಲ್ಕ ವಿಧಿಸಿದ್ದಾರೆ’ ಎಂದೂ ಜೈರಾಮ್ ದೂರಿದ್ದಾರೆ..

‘ಯುಪಿಐ ಪಾವತಿ ಮೇಲೆ ಶೇ 0.4ರಷ್ಟು ಎಂಡಿಆರ್ ಏಕೆ? ಡೆಬಿಟ್ ಕಾರ್ಡ್ ಎಂಡಿಆರ್ ಸಹ ಶೇ 0.4 ಇರುವುದೇ ಇದಕ್ಕೆ ಕಾರಣವೇ? ಅಮೆರಿಕದ ಕಾರ್ಡ್ ಕಂಪನಿಗಳು, ಯುಪಿಐಗೆ ಸ್ಪರ್ಧೆ ಒಡ್ಡಲು ಅನುವು ಮಾಡಿಕೊಡುವುದಕ್ಕೇ ಇದನ್ನು ಮಾಡಲಾಗುತ್ತಿದೆಯೇ?’ ಎಂದು ಅವರು ಪ್ರಶ್ನಿಸಿದ್ದಾರೆ

ಸರ್ಕಾರ ಹೇಳುವಂತೆ, ಈ ಬದಲಾವಣೆಯು ಯುಪಿಐ ಅನ್ನು ಸುಸ್ಥಿರವಾಗಿಸುತ್ತದೆಯೇ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ