ಬಿಡಿಎ ನಿವೇಶನ ಆಡಳಿತಾತ್ಮಕ ಶುಲ್ಕ ಕಡಿತ; ಭೂ ಮಾಲೀಕರು ನಿರಾಳ

ಬಿಡಿಎ ನಿವೇಶನ ಆಡಳಿತಾತ್ಮಕ ಶುಲ್ಕ ಕಡಿತ; ಭೂ ಮಾಲೀಕರು ನಿರಾಳ

ಬಿಡಿಎ ನಿವೇಶನ ಆಡಳಿತಾತ್ಮಕ ಶುಲ್ಕ ಕಡಿತ; ಭೂ ಮಾಲೀಕರು ನಿರಾಳ

ಬೆಂಗಳೂರು: ಡಾ.ಕೆ.ಶಿವರಾಮ ಕಾರಂತ ಬಡಾವಣೆ ಸೇರಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಬಡಾವಣೆಗಳಿಗೆ ಭೂಮಿ ನೀಡಿದವರಿಗೆ ಹಂಚಿಕೆ ಮಾಡುವ ಪರಿಹಾರ ರೂಪದ ನಿವೇಶನಗಳ ಆಡಳಿತಾತ್ಮಕ ಶುಲ್ಕವನ್ನು ₹50ರಿಂದ ₹20ಕ್ಕೆ ಇಳಿಸಲಾಗಿದೆ.

ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಪ್ರತಿ ಚದರ ಅಡಿಗೆ ₹50 ಆಡಳಿತಾತ್ಮಕ ಶುಲ್ಕ ನಿಗದಿಪಡಿಸಲಾಗಿತ್ತು. ಅಂದರೆ 30X40 ಅಡಿ ನಿವೇಶನಕ್ಕೆ ₹54 ಸಾವಿರ ಪಾವತಿಸಬೇಕಿತ್ತು. ಇದನ್ನು ವಿರೋಧಿಸಿ ಡಾ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ಭೂ ಮಾಲೀಕರು, ಶುಲ್ಕವನ್ನು ಕಡಿಮೆ ಮಾಡಬೇಕೆಂದು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.

ಸ್ಥಳೀಯ ಶಾಸಕರು ಮತ್ತು ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ, ಪ್ರಾಧಿಕಾರವು ಶಿವರಾಮ ಕಾರಂತ ಬಡಾವಣೆ ಹಾಗೂ ಇತರೆ ಬಡಾವಣೆಗಳಲ್ಲಿ ಭೂಮಾಲೀಕರಿಗೆ ನಿಗದಿಪಡಿಸಿದ್ದ ನಿವೇಶನಗಳ ಆಡಳಿತಾತ್ಮಕ ಶುಲ್ಕವನ್ನು ಕಡಿಮೆ ಮಾಡಿದೆ.

ಪರಿಷ್ಕೃತ ಅಧಿಸೂಚನೆಯಂತೆ ಪ್ರತಿ ಚದರ ಅಡಿಗೆ ₹20 ಶುಲ್ಕ ನಿಗದಿಪಡಿಸಿದ್ದು, ಜುಲೈನಲ್ಲಿ ಹೊರಡಿಸಿದ್ದಅಧಿಸೂಚನೆಯನ್ನು ಹಿಂಪಡೆಯ ಲಾಗಿದೆ. ಪರಿಷ್ಕೃತ ದರಗಳು ಸೆಪ್ಟೆಂಬರ್ 1ರಿಂದಲೇ ಅನ್ವಯವಾಗಲಿವೆ.

ಪರಿಷ್ಕೃತ ಅಧಿಸೂಚನೆಯಲ್ಲಿ 20x30 ಅಡಿ ನಿವೇಶನಕ್ಕೆ ₹12,000, 30x40 ಅಡಿ ನಿವೇಶನಕ್ಕೆ ₹24,000, 30x50 ಅಡಿ ನಿವೇಶನಕ್ಕೆ ₹30,000, 40x60 ಅಡಿ ನಿವೇಶನಕ್ಕೆ ₹48,000 ಹಾಗೂ 50x80 ಅಡಿ ನಿವೇಶನಕ್ಕೆ ₹80,000 ಶುಲ್ಕ ವಿಧಿಸಲಾಗುತ್ತದೆ. ಇದರಲ್ಲಿ ಅರ್ಜಿ, ನೋಂದಣಿ, ಒಳಚರಂಡಿ ವ್ಯವಸ್ಥೆ ಅಭಿವೃದ್ಧಿ ಹಾಗೂ ಒಂದು ಬಾರಿಯ ಆಡಳಿತಾತ್ಮಕ ಶುಲ್ಕ ಸೇರಿದೆ.

ಹಿಂದಿನ ಅಧಿಸೂಚನೆಯಲ್ಲಿ 20x30 ಅಡಿ ನಿವೇಶನಕ್ಕೆ ಒಟ್ಟು ₹29,500, 30x40 ಅಡಿಗೆ ₹59,500, 40x60 ಅಡಿಗೆ ₹1.19 ಲಕ್ಷ ಹಾಗೂ 50x80 ಅಡಿ ನಿವೇಶನಕ್ಕೆ ₹1.99 ಲಕ್ಷ ಶುಲ್ಕ ನಿಗದಿಪಡಿಸಲಾಗಿತ್ತು. ಅಂದರೆ, ಪ್ರತಿ ಚದರ ಅಡಿಗೆ ₹50 ಶುಲ್ಕ ವಿಧಿಸಲಾಗಿತ್ತು.

ಅಭಿವೃದ್ಧಿ ಕಾಮಗಾರಿಗಳು, ಇಂಧನ ವೆಚ್ಚ, ನೌಕರರ ವೇತನ, ಎಸ್.ವಿ.
ಚಂದ್ರಶೇಖರ್‌ ಸಮಿತಿಯ ವೆಚ್ಚ, ಕಾನೂನು ವೆಚ್ಚ, ಬಡಾವಣೆಗೆ ಆಧುನಿಕ ಸೌಲಭ್ಯ ಒದಗಿಸಲು ತಗಲುವ ವೆಚ್ಚ, ಭೂಮಿ ಮೌಲ್ಯ ಹಾಗೂ ಇತರೆ ಎಲ್ಲಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಪ್ರಾಧಿಕಾರದ ಆರ್ಥಿಕ ಹಿತದೃಷ್ಟಿಯಿಂದ ಈ ದರ ನಿಗದಿ ಮಾಡಲಾಗಿತ್ತು ಎಂದು ಬಿಡಿಎ ತಿಳಿಸಿತ್ತು.

‘ಭೂ ಮಾಲೀಕರಿಗೆ ಹಂಚಿಕೆ ಮಾಡುವ ನಿವೇಶನಗಳ ಆಡಳಿತಾತ್ಮಕ ಶುಲ್ಕ ಕಡಿಮೆ ಮಾಡುವಂತೆ ಪ್ರಾಧಿಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿತ್ತು. 30X40 ಅಡಿ ನಿವೇಶನಕ್ಕೆ ₹54 ಸಾವಿರ ನಿಗದಿಪಡಿಸಲಾಗಿತ್ತು. ಇದು ರೈತರಿಗೆ ಹೊರೆಯಾಗಿತ್ತು. ರೈತರ ಒತ್ತಡಕ್ಕೆ ಮಣಿದು ಪ್ರತಿ ಚದರ ಅಡಿಗೆ ₹20 ಆಡಳಿತಾತ್ಮಕ ಶುಲ್ಕ ನಿಗದಿಪಡಿಸ
ಲಾಗಿದೆ. ಶುಲ್ಕ ಕಡಿಮೆ ಮಾಡಿರುವ ಬಿಡಿಎ ನಿರ್ಧಾರದಿಂದ ಸಂತ್ರಸ್ತರು ನಿರಾಳರಾಗಿದ್ದಾರೆ’ ಎಂದು ರೈತ ಮುಖಂಡ ಎಂ. ರಮೇಶ್ ರಾಮಗೊಂಡನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರಂತ ಬಡಾವಣೆಗೆ ಭೂಮಿ ನೀಡಿದವರಿಗೆ ಪರಿಹಾರದ ನಿವೇಶನಗಳನ್ನು ಅವರ ಗ್ರಾಮದಲ್ಲಿಯೇ ನೀಡಬೇಕು. ಒಟ್ಟು ಭೂ ಪರಿಹಾರದಲ್ಲಿ ಶೇಕಡ 25ರಷ್ಟು ಪೂರ್ವ ಮತ್ತು ಉತ್ತರ ದಿಕ್ಕಿನ ನಿವೇಶನಗಳನ್ನು ಹಂಚಿಕೆ ಮಾಡಬೇಕು ಮತ್ತು ಸಮಾಧಿಗಳು ಇರುವ ನಿವೇಶನಗಳನ್ನು ಭೂ ಮಾಲೀಕರಿಗೆ ಹಂಚಿಕೆ ಮಾಡುವಂತೆಯೂ ಮನವಿ ಮಾಡಲಾಗಿದೆ. ಇದಕ್ಕೆ ಪ್ರಾಧಿಕಾರದ ಅಧಿಕಾರಿಗಳು ಸಕಾರಾತ್ಮಕ
ವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಕಾರ್ಯಗತಗೊಳಿಸಬೇಕು’ ಎಂದರು ಆಗ್ರಹಿಸಿದರು.

ನಿವೇಶನ ಹಂಚಿಕೆ ಬಳಿಕ ಉಳಿಯುವ ಭೂಮಿಯ ಹಕ್ಕಿನ ಬಗ್ಗೆಯೂ ಪರಿಷ್ಕೃತ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. 300 ಚದರ ಅಡಿಗಿಂತ ಹೆಚ್ಚು ಭೂಮಿ ಉಳಿದರೆ ನಿಗದಿತ ಮೊತ್ತ ಪಡೆದು ಹೆಚ್ಚುವರಿಯಾಗಿ 20x30 ಅಡಿ ನಿವೇಶನ ನೀಡಲಾಗುವುದು. 300 ಚದರ ಅಡಿಗಿಂತ ಕಡಿಮೆ ಭೂಮಿ ಉಳಿದರೆ ಅದರ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಭೂ ಮಾಲೀಕರಿಗೆ ಬಿಡಿಎ ಪಾವತಿಸಲಿದೆ. ಕಾರಂತ ಬಡಾವಣೆಯ ರೈತರು ಹಾಗೂ ಸ್ಥಳೀಯ ಶಾಸಕರೊಂದಿಗೆ ನಡೆಸಿದ ಸಮಾಲೋಚನೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ