ಪೊನ್ನಂಪೇಟೆ : ಬಿಸಿಲಲ್ಲೂ ಸಮೃದ್ಧ ಭತ್ತದ ಪೈರು

ಪೊನ್ನಂಪೇಟೆ : ಬಿಸಿಲಲ್ಲೂ ಸಮೃದ್ಧ ಭತ್ತದ ಪೈರು

ಪೊನ್ನಂಪೇಟೆ : ಬಿಸಿಲಲ್ಲೂ ಸಮೃದ್ಧ ಭತ್ತದ ಪೈರು

ಗೋಣಿಕೊಪ್ಪಲು: ಬಿರು ಬೇಸಿಗೆಯಂತೆ ಕಾಡುತ್ತಿರುವ ಬಿಸಿಲಿನ ನಡುವೆಯೂ ಪೊನ್ನಂಪೇಟೆ ತಾಲ್ಲೂಕು ಬಾಳೆಲೆ ದೇವನೂರಿನ ಪೊಡಮಾಡ ಮೋಹನ್ ಅವರ ಗದ್ದೆಯಲ್ಲಿ ಭತ್ತದ ಪೈರು ಹಸಿರಿನಿಂದ ಕಂಗೊಳಿಸುತ್ತಿದೆ.

ಕೊಡಗಿನ ಗಡಿ ಭಾಗದಲ್ಲಿರುವ ಬಾಳೆಲೆ ಭಾಗಕ್ಕೆ ಈ ಬಾರಿ ಕೇವಲ 20 ಇಂಚಿನಷ್ಟೂ ಮಳೆಯಾಗಿಲ್ಲ. ಈ ಭಾಗದ ಸರಾಸರಿ ವಾರ್ಷಿಕ ಮಳೆ 45 ರಿಂದ 50 ಇಂಚಿನಷ್ಟು ಮಾತ್ರ. ಆದರೆ ಈ ಬಾರಿ ಇದರ ಅರ್ಧದಷ್ಟು ಮಳೆ ಕೂಡ ಬಿದ್ದಿಲ್ಲ. ಇಂತಹ ಸಂಕಷ್ಟದ ನಡುವೆಯೂ ಪ್ರಗತಿಪರ ಕೃಷಿಕ ಪೋಡಮಾಡ ಮೋಹನ್ ಅವರು ತಮ್ಮ ಎಂದಿನ ಭತ್ತದ ಕೃಷಿ ಮುಂದುವರಿಸಿರುವುದು ಅಚ್ಚರಿಯನ್ನುಂಟು ಮಾಡಿದೆ.

ಅಷ್ಟಕ್ಕೂ ಇವರು ಮಾಡಿದ್ದೇನು?: ಇವರು ಭತ್ತದ ಗದ್ದೆಗಾಗಿ ತಮ್ಮಕಾಫಿ ತೋಟದ ಕೆರೆಯ ನೀರನ್ನು ಆಶ್ರಯಿಸಿದ್ದಾರೆ. ಹಿಂದೆ ಅಲ್ಪಸ್ವಲ್ಪ ಬಿದ್ದ ಮಳೆಯ ನೀರನ್ನು ಕೆರೆಯಲ್ಲಿ ಸಂಗ್ರಹಿಸಿಕೊಂಡು ಇದನ್ನು ಭತ್ತದ ಗದ್ದೆಗೆ ಹಾಯಿಸುತ್ತಿದ್ದಾರೆ. ಹೀಗಾಗಿ ಸ್ವಲ್ಪ ತೇವಾಂಶವಿಲ್ಲದ ವಾತಾವರಣದಲ್ಲಿ ಭತ್ತದ ಗದ್ದೆಗಳು ಮಾತ್ರ ಹಸಿರಿನಿಂದ ತಲೆದೂಗುತ್ತಿರುವುದು ನೋಡುಗರ ಮನಸೆಳೆದಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ಹಾಗೂ ಬೇಗನೆ ಕಟಾವಿಗೆ ಬರುವ ಅತಿರ ಭತ್ತವನ್ನು ಈ ಬಾರಿ ಮೋಹನ್ ಅವರು ಬಿತ್ತಿದ್ದಾರೆ.

ಮಳೆಯ ತೀವ್ರ ಕೊರತೆಯಿಂದ ಈ ಭಾಗದ ಬಹಳಷ್ಟು ಕೃಷಿಕರು ಕೃಷಿ ಮಾಡುವುದನ್ನೇ ಕೈ ಬಿಟ್ಟಿದ್ದಾರೆ. ಆದರೆ ಕೃಷಿಯಲ್ಲಿಯೇ ತಮ್ಮ ಸಂತಸದ ಬದುಕನ್ನು ಕಾಣುತ್ತಿರುವ ಮೋಹನ್ ಅವರು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಭತ್ತದ ನೋಡಿ ಸಂತಸ ಪಡುತ್ತಿದ್ದಾರೆ.

ಈ ಬಾರಿ ಕೇವಲ ಬಾಳೆಲೆ ಭಾಗಕ್ಕೆ ಮಾತ್ರ ಮಳೆ ಕಡಿಮೆಯಾಗಿಲ್ಲ. ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಎದುರಾಗಿದೆ. ಸೆಪ್ಟೆಂಬರ್‌ನಲ್ಲಿ ಮೈದುಂಬಿ ಹರಿಯುತ್ತಿದ್ದ ಈ ಭಾಗದ ಪ್ರಮುಖ ನದಿಯಾದ ಲಕ್ಷ್ಮಣತೀರ್ಥ ಈ ಬಾರಿ ಬೇಸಿಗೆಯಲ್ಲಿರುವಂತೆ ಬರಡಾಗಿದೆ. ನದಿಯಲ್ಲಿ ನೀರಿನ ಹರಿವು ನಿಂತು ಹೊಂಡದಲ್ಲಿ ಮಾತ್ರ ತುಂಬಿದೆ. ಈ ನದಿಯ ಎಡಬಲದಲ್ಲಿರುವ ಕೃಷಿಕರು ತಮ್ಮ ಭತ್ತದ ಗದ್ದೆಗಳಿಗೆ ಹೊಂಡದ ನೀರನ್ನು ಬಳಸಿಕೊಳ್ಳುತ್ತಿದ್ದಾರೆ.

ವಾಡಿಕೆಯಂತೆ ಅಕ್ಟೋಬರ್ 15ರವರೆಗೆ ಮಳೆ ಬೀಳಬಹುದು. ಬಳಿಕ ಚಳಿಗಾಲ ಶುರುವಾಗಿ ಮಳೆ ನಿಲ್ಲುವುದು ಸಹಜ. ಈಗಾಗಲೇ ಸೆಪ್ಟೆಂಬರ್ ತಿಂಗಳು ಅರ್ಧ ಮುಗಿದಿದ್ದು ಮುಂದೆ ಕೂಡ ಮಳೆ ಬೀಳುವ ಯಾವ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿ ಮುಂದೆ ಕುಡಿಯುವ ನೀರಿಗೂ ತೀವ್ರ ಬರ ಎದುರಾಗಲಿದೆ ಎಂಬ ಆತಂಕ ಜನತೆಯನ್ನು ಕಾಡುತ್ತಿದೆ. ಇಂತಹ ಆತಂಕದ ಸ್ಥಿತಿಯಲ್ಲಿಯೂ ಮೋಹನ್ ಅವರಂತಹ ಬೆರಣಿಕೆಯ ಕೃಷಿಕರು ಭತ್ತದ ಕೃಷಿ ಕೈಗೊಂಡಿರುವುದು ಎಲ್ಲರಿಗೂ ಸಂತಸ ಮೂಡಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ