
ದಾವಣಗೆರೆ-ತುಮಕೂರು ನಡುವೆ ರೈಲು ಸಂಚಾರದಲ್ಲಿ ವ್ಯತ್ಯಯ
ದಾವಣಗೆರೆ: ತುಮಕೂರು-ದಾವಣಗೆರೆ ನಡುವೆ ಹೊಸ ಬ್ರಾಡ್‌ಗೇಜ್ ಮಾರ್ಗಕ್ಕೆ ಸಂಬಂಧಿಸಿದಂತೆ ತೊಳಹುಣಸೆಯಲ್ಲಿ ನಡೆಯುತ್ತಿರುವ ಯಾರ್ಡ್ ಕಾಮಗಾರಿಯಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ರೈಲು ಅ.3, 4 ಮತ್ತು10ರಂದು ಹಾಗೂ ಎಸ್ಎಸ್ಎಸ್ ಹುಬ್ಬಳ್ಳಿ–ಅರಸೀಕೆರೆ ಡೈಲಿ ಎಕ್ಸ್‌ಪ್ರೆಸ್ ಅ.8 ಮತ್ತು 10ರಂದು ಸಂಚಾರ ರದ್ದಾಗಲಿದೆ. ಬೆಂಗಳೂರು–ಧಾರವಾಡ ಸಿದ್ಧಗಂಗಾ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೆ.22ರಿಂದ ಭಾಗಶಃ ರದ್ದುಗೊಳ್ಳಲಿದ್ದು, ಬೀರೂರಿನಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ಹೊಸಪೇಟೆ–ಅರಸೀಕೆರೆ ಡೆಮು ವಿಶೇಷ ರೈಲು ಸೆ.23ರಿಂದ ಅ.13ರ ವರೆಗೆ, ಹುಬ್ಬಳ್ಳಿ–ಚಿತ್ರದುರ್ಗ ಡೈಲಿ ಎಕ್ಸ್‌ಪ್ರೆಸ್ ರೈಲು ಸೆ.25ರಿಂದ ಅ.13ರವರೆಗೆ, ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಸೆ.25ರಿಂದ ಅ.13ರ ವರೆಗೆ ಕೆಲದಿಗಳು ಭಾಗಶಃ ರದ್ದಾಗಲಿವೆ. ಇನ್ನೂ ಕೆಲ ರೈಲುಗಳು ಮಾರ್ಗ ಬದಲಾವಣೆ ಮಾಡಲಾಗಿದ್ದು, ಕೆಲ ರೈಲುಗಳ ಸಂಚಾರದಲ್ಲಿ ವಿಳಂಬ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.