ಕುಣಿಗಲ್ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಿ.ಕೆ.ಸುರೇಶ್

ಕುಣಿಗಲ್ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಿ.ಕೆ.ಸುರೇಶ್

ಕುಣಿಗಲ್ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಿ.ಕೆ.ಸುರೇಶ್

ಕುಣಿಗಲ್: ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರಸದಂತೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮನವಿ ಮಾಡಿದರು.

ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಬುಧವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಕುಣಿಗಲ್– ಬೆಂಗಳೂರಿಗೆ ಹವಾನಿಯಂತ್ರಿತ ನೂತನ ವಜ್ರ ವಿಸ್ತಾರ ಸಾರಿಗೆ ಸೇವೆ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದೇಶದಲ್ಲಿ ಉತ್ತಮ ಗುಣಮಟ್ಟದ ಸೇವೆಯಲ್ಲಿ ಮಾದರಿಯಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸೇವೆಗಳನ್ನು ಸುತ್ತಮುತ್ತಲಿನ ತಾಲ್ಲೂಕು ಕೇಂದ್ರಗಳಿಗೆ ವಿಸ್ತರಿಸಲಾಗುತ್ತಿದ್ದು, ಕುಣಿಗಲ್ ತಾಲ್ಲೂಕಿನಿಂದ ಪ್ರಥಮ ಬಾರಿಗೆ 8 ಹವಾನಿಯಂತ್ರಿತ ಬಸ್‌ಗಳು 40 ಸುತ್ತುವಳಿಗಳ ಮೂಲಕ ಅರ್ಧ ಗಂಟೆ ಅಂತರದಲ್ಲಿ ಸಂಚರಿಸಲಿವೆ ಎಂದರು.

ತಾಲ್ಲೂಕಿನಲ್ಲಿ 25 ವರ್ಷ ರಾಜಕೀಯ ಮಾಡಿ ಅಧಿಕಾರ ಅನುಭವಿಸಿದವರು ಹೇಮಾವತಿ ನೀರಿನ ವಿಚಾರದಲ್ಲಿ ಅನ್ಯಾಯವಾಗಿದ್ದರೂ, ಪಕ್ಕದ ತುರುವೇಕೆರೆ, ಗುಬ್ಬಿ ತಾಲ್ಲೂಕಿನವರು ದಬ್ಬಾಳಿಕೆ ಮಾಡಿ ಕುಣಿಗಲ್ ತಾಲ್ಲೂಕಿನ ಪಾಲಿನ ನೀರನ್ನು ತೆಗೆದುಕೊಳ್ಳುತ್ತಿರುವಾಗ ಪ್ರತಿರೋಧಿಸದೆ ಸಹಕಾರ ನೀಡಿದ್ದಾರೆ. ಆದರೆ, ಇದೀಗ ಕುಣಿಗಲ್ ಪಾಲಿನ ನೀರನ್ನು ನೇರವಾಗಿ ಪಡೆಯಲು ₹1ಸಾವಿರ ಕೋಟಿ ವೆಚ್ಚದ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ಪ್ರಾರಂಭಿಸುತ್ತಿದ್ದಂತೆ, ಪಕ್ಕದ ತಾಲ್ಲೂಕಿನವರು ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.

ಲಿಂಕ್ ಕೆನಾಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗುತ್ತಾರೆ ಎಂದು ಆರೋಪ ಮಾಡುತ್ತಿದ್ದಾರೆ. ಎಕ್ಸ್‌ಪ್ರೆಸ್‌ ಕೆನಾಲ್ ಕುಣಿಗಲ್ ತಾಲ್ಲೂಕಿನ ರೈತರ ಹಿತದೃಷ್ಟಿಯ ಯೋಜನೆಯಾಗಿದೆ ಹೊರತು, ಮಾಗಡಿ ತಾಲ್ಲೂಕಿನ ರೈತರ ಪರವಾದ ಯೋಜನೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಕುಣಿಗಲ್‌ನಿಂದ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚನ್ನಪಟ್ಟಣದ ವೈ.ಜಿ.ಗುಡ್ಡದಿಂದ ಹುಲಿಯೂರುದುರ್ಗದ ದೀಪಾಂಬುದಿ ಕೆರೆಗೆ ನೀರು ಹರಿಸುತ್ತಿರುವುದಕ್ಕೆ ಚನ್ನಪಟ್ಟಣದ ಜನರು ವಿರೋಧಿಸುತ್ತಿಲ್ಲ. ಇದನ್ನು ಕುಣಿಗಲ್‌ನ ಜೆಡಿಎಸ್‌, ಬಿಜೆಪಿಯವರು ಸ್ವಾಗತಿಸುತ್ತಿಲ್ಲ ಎಂದು ಲೇವಡಿ ಮಾಡಿದರು.

ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್, ಜಾಗೃತಿ ಮತ್ತು ಭದ್ರತಾ ವಿಭಾಗದ ಮುಖ್ಯ ನಿರ್ದೇಶಕ ಅಬ್ದುಲ್ ಅಹದ್, ವಿಭಾಗೀಯ ನಿಯಂತ್ರಕ ರಾಮಲಿಂಗಯ್ಯ, ತಹಶೀಲ್ದಾರ್ ಕರಿಯಾ ನಾಯ್ಕ್ ಉಪಸ್ಥಿತರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ