ತಲೆಮರೆಸಿಕೊಂಡಿದ್ದ ಇಸ್ರೇಲ್‌ನ ಮಾದಕವಸ್ತು ವ್ಯಾಪಾರಿ ಅಟಾಲಾ ಶರಣು

ತಲೆಮರೆಸಿಕೊಂಡಿದ್ದ ಇಸ್ರೇಲ್‌ನ ಮಾದಕವಸ್ತು ವ್ಯಾಪಾರಿ ಅಟಾಲಾ ಶರಣು

ತಲೆಮರೆಸಿಕೊಂಡಿದ್ದ ಇಸ್ರೇಲ್‌ನ ಮಾದಕವಸ್ತು ವ್ಯಾಪಾರಿ ಅಟಾಲಾ ಶರಣು

ಪಣಜಿ (ಪಿಟಿಐ): ತಲೆಮರೆಸಿಕೊಂಡಿದ್ದ ಇಸ್ರೇಲ್‌ನ ಮಾದಕವಸ್ತು ವ್ಯಾಪಾರಿ ಯಾನೀವ್‌ ಬೆನಿಮ್ ಅಲಿಯಾಸ್‌ ಅಟಾಲಾ ಬುಧವಾರ ಇಲ್ಲಿನ ನ್ಯಾಯಾಲಯದ ಮುಂದೆ ಶರಣಾದರು. ಮಾದಕವಸ್ತುಗಳ ಮಾರಾಟದ ಪ್ರಕರಣದಲ್ಲಿ ಆರೋಪಿಯನ್ನು 30 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಅಟಾಲಾ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಹಾಗೂ ಲುಕ್‌–ಔಟ್‌ ಸುತ್ತೋಲೆ ಹೊರಡಿಸಲಾಗಿತ್ತು. ಸೆಪ್ಟೆಂಬರ್‌ 16ರ ಒಳಗಾಗಿ ನ್ಯಾಯಾಲಯದ ಮುಂದೆ ಶರಣಾಗುವಂತೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಗಡುವು ವಿಧಿಸಿತ್ತು. ಇದರ ಬೆನ್ನಲ್ಲೇ, ಉತ್ತರ ಗೋವಾದ ಮರ್ಸೆಸ್‌ನಲ್ಲಿರುವ ನ್ಯಾಯಾಲಯದ ಮುಂದೆ ಬುಧವಾರ ಮಧ್ಯಾಹ್ನ ಶರಣಾದರು.

ಅಟಾಲಾ ಸಲ್ಲಿಸಿರುವ ಜಾಮೀನು ಅರ್ಜಿಯು ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ. ಸೆಪ್ಟೆಂಬರ್‌ 21ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ