ಸೋನಿಯಾ ಆತ್ಮಕಥೆ ಪ್ರಕಟಿಸದಿರಲು ಯಾವುದೇ ಒತ್ತಡ ಇರಲಿಲ್ಲ: ಪೆಂಗ್ವಿನ್

ಸೋನಿಯಾ ಆತ್ಮಕಥೆ ಪ್ರಕಟಿಸದಿರಲು ಯಾವುದೇ ಒತ್ತಡ ಇರಲಿಲ್ಲ: ಪೆಂಗ್ವಿನ್

ಸೋನಿಯಾ ಆತ್ಮಕಥೆ ಪ್ರಕಟಿಸದಿರಲು ಯಾವುದೇ ಒತ್ತಡ ಇರಲಿಲ್ಲ: ಪೆಂಗ್ವಿನ್

ನವದೆಹಲಿ: ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲೊಂಗಿಂಗ್: ಎ ಜರ್ನಿ ಆಫ್ ಲವ್’ ಪ್ರಕಟಿಸದಿರಲು ಯಾವುದೇ ರೀತಿಯ ಒತ್ತಡ ಇರಲಿಲ್ಲ ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (ಪಿಆರ್‌ಹೆಚ್ಐ) ಸ್ಪಷ್ಟಪಡಿಸಿದೆ.

ಈ ಆತ್ಮಕಥೆಯನ್ನು ನವೆಂಬರ್‌ 10ರಂದು ಅಮೆರಿಕದ ‘ಆಲ್ಫ್ರೆಡ್ ಎ. ನಾಫ್’ ಪ್ರಕಾಶನ ಸಂಸ್ಥೆಯ ಮೂಲಕ ಜಾಗತಿಕವಾಗಿ ಪ್ರಕಟಿಸಲಾಗುವುದು ಎಂದು ಅದು ತಿಳಿಸಿದೆ.

ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಚೀನಾ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿರುವ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಮೇಲೆ ಒತ್ತಡ ಹೇರಲಾಗಿತ್ತು ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ಆರೋಪಿಸಿದ್ದರು.

ಈ ಆರೋಪವನ್ನು ಪಿಆರ್‌ಹೆಚ್ಐ ವಕ್ತಾರೆ ಪಲ್ಲವಿ ನಾರಾಯಣ್ ತಳ್ಳಿ ಹಾಕಿದ್ದಾರೆ.

‘ಒತ್ತಡದಿಂದಾಗಿ ಪುಸ್ತಕ ಪ್ರಕಟಿಸದಿರಲು ನಿರ್ಧರಿಸಿದ್ದೇವೆ ಎಂಬ ಮಾತನ್ನು ಒಪ್ಪುವುದಿಲ್ಲ. ಆತ್ಮಕಥೆ ಕುರಿತು ತಪ್ಪು ಅಭಿಪ್ರಾಯಗಳು ಹರಿದಾಡುತ್ತಿವೆ. ಅವುಗಳನ್ನು ಸರಿಪಡಿಸುವುದು ಮುಖ್ಯ. ಈ ಪುಸ್ತಕವನ್ನು ಪ್ರಕಟಿಸಲು ನಾವು ಸಾಕಷ್ಟು ಶ್ರಮಿಸಿದ್ದೇವೆ’ ಎಂದು ಪಲ್ಲವಿ ತಿಳಿಸಿದ್ದಾರೆ.

ಲೇಖಕರೊಂದಿಗಿನ ಒಪ್ಪಂದ ಹಾಗೂ ಗೌಪ್ಯತೆಯನ್ನು ಕಾಪಾಡುವ ಕಾರಣದಿಂದಾಗಿ ಈ ಹಿಂದೆ ಪುಸ್ತಕದ ಪ್ರಕಟಣೆ ಕುರಿತು ಯಾವುದೇ ಮಾಹಿತಿ ನೀಡಲು ಪ್ರಕಾಶಕರು ನಿರಾಕರಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ