
ಗಣೇಶ ಹಬ್ಬಕ್ಕೆ ಬೆಂಗಳೂರು–ಬೆಳಗಾವಿ ನಡುವೆ ಎರಡು ವಿಶೇಷ ರೈಲು ಸಂಚಾರ
ಬೆಳಗಾವಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಇಲಾಖೆ ಬೆಂಗಳೂರು– ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ರೈಲು ಸಂಖ್ಯೆ 06563 ಎಸ್‌ಎಂವಿಟಿ ಬೆಂಗಳೂರು– ಬೆಳಗಾವಿ ವಿಶೇಷ ರೈಲು ಸೆ.11ರಂದು ರಾತ್ರಿ 7ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ. ವಾಪಸ್ (ರೈಲು ಸಂಖ್ಯೆ 06564) ಸೆ.12ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಸೆ.13ರಂದು ಬೆಳಗ್ಗೆ 5ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.ಸೆ.13ರಂದು ರಾತ್ರಿ 7 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡುವ ರೈಲು (ಸಂಖ್ಯೆ 06583 ) ಸೆ.14ರಂದು ಬೆಳಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ. ರೈಲು ಮರಳಿ ಮತ್ತೆ ಸೆ.14ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಡುವ ರೈಲು (ಸಂಖ್ಯೆ 06584) ಸೆ.15ರಂದು ಬೆಳಗ್ಗೆ 5ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.